ಮುಂಬೈ (ಮಹಾರಾಷ್ಟ್ರ): ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ರಾಖಿ ಸಾವಂತ್ ಅವರ ತಾಯಿ ಜಯಾ ಭೇದಾ (73) ಅವರು ಶನಿವಾರ ರಾತ್ರಿ 9 ಗಂಟೆಗೆ ಮೃತಪಟ್ಟಿದ್ದಾರೆ. ವರದಿಗಳ ಪ್ರಕಾರ, ಬ್ರೈನ್ ಟ್ಯೂಮರ್ ಮತ್ತು ಕ್ಯಾನ್ಸರ್ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ನಗರದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಶನಿವಾರ ನಿಧನರಾಗಿದ್ದಾರೆ.
- " class="align-text-top noRightClick twitterSection" data="
">
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುವ ರಾಖಿ ಸಾವಂತ್ ಆಗಾಗ್ಗೆ ತಮ್ಮ ತಾಯಿಯ ಆರೋಗ್ಯದ ಬಗ್ಗೆಯೂ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಇತ್ತೀಚಿನ ಭಾವನಾತ್ಮಕ ಪೋಸ್ಟ್ ಒಂದರಲ್ಲಿ, ಅವರು ತಮ್ಮ ತಾಯಿಯ ಚೇತರಿಕೆಗೆ ಪ್ರಾರ್ಥಿಸಲು ಅಭಿಮಾನಿಗಳನ್ನು ಕೇಳಿಕೊಂಡಿದ್ದರು. ಅಲ್ಲದೇ ಇತ್ತೀಚೆಗಷ್ಟೇ ಆದಿಲ್ ಖಾನ್ ಜೊತೆಗಿನ ಮದುವೆ ಬಗ್ಗೆ ರಾಖಿ ಸಾವಂತ್ ಸಖತ್ ಸುದ್ದಿಯಾಗಿದ್ದರು. ಆದಿಲ್ ಅವರು ರಾಖಿ ಜೊತೆಗಿನ ಮದುವೆಯನ್ನು ಒಪ್ಪಿಕೊಂಡಿರಲಿಲ್ಲ. ನಂತರ ಅವರು ತಾವು ರಾಖಿ ಅವರೊಂದಿಗೆ ಮದುವೆ ಆಗಿರುವುದಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡರು ಮತ್ತು ಮದುವೆಯ ಚಿತ್ರವನ್ನೂ ಸಹ ಹಂಚಿಕೊಂಡಿದ್ದರು.
- " class="align-text-top noRightClick twitterSection" data="
">
ಇದನ್ನೂ ಓದಿ: ಕನ್ನಡದ ಖ್ಯಾತ ಹಾಸ್ಯನಟ ಮನದೀಪ್ ರಾಯ್ ಇನ್ನಿಲ್ಲ
ಸ್ನೇಹಿತರು ರಾಖಿ ಅವರನ್ನು ಸಾಂತ್ವನಗೊಳಿಸುತ್ತಿದ್ದಾಗ, "ಮಾ ಅಬ್ ನಹೀ ರಹೀ..." (ಅಮ್ಮ ಇಲ್ಲ) ಎಂದು ಅವರ ಹೇಳುತ್ತಿದ್ದರು. ನಂತರ ಪತಿ ಆದಿಲ್ ದುರಾನಿ (Adil Durrani) ಅವರನ್ನು ಹುಡುಕುತ್ತಿದ್ದರು. "ಆದಿಲ್ ಎಲ್ಲಿದ್ದಾರೆ? ಆದಿಲ್ ಅವರಿಗೆ ಫೋನ್ ಮಾಡಿ" ಎಂದು ತಮ್ಮ ಸ್ನೇಹಿತರಲ್ಲಿ ಕೇಳಿಕೊಂಡರು. ಒಟ್ಟಾರೆ ಪಾಪರಾಜಿಗಳು ತಮ್ಮ ಕ್ಯಾಮರಾದಲ್ಲಿ ರಾಖಿ ಸಾವಂತ್ ಅವರನ್ನು ಸೆರೆ ಹಿಡಿದಿದ್ದು ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು, ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲೇ ರಾಖಿ ಸಾವಂತ್ ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಮೃತದೇಹದ ಅಂತ್ಯಸಂಸ್ಕಾರವನ್ನು ಇಂದು ಮಧ್ಯಾಹ್ನ ಓಶಿವರಾದ ಕ್ರಿಶ್ಚಿಯನ್ ಸ್ಮಶಾನದಲ್ಲಿ ನಡೆಸಲಾಗುವುದು ಎಂದು ರಾಖಿ ತಿಳಿಸಿದ್ದಾರೆ.
- " class="align-text-top noRightClick twitterSection" data="
">
ಇದನ್ನೂ ಓದಿ: ನಟ ತಾರಕರತ್ನಗೆ ಬೆಂಗಳೂರಿನಲ್ಲಿ ಚಿಕಿತ್ಸೆ: ಆಸ್ಪತ್ರೆಗೆ ಜ್ಯೂ.ಎನ್ಟಿಆರ್, ಕುಟುಂಬಸ್ಥರ ಭೇಟಿ
ರಾಖಿ ಸಾವಂತ್ ಅವರ ತಾಯಿಗೆ ನಾಲ್ಕನೇ ಹಂತದ ಎಂಡೊಮೆಟ್ರಿಯಲ್ ಕ್ಯಾನ್ಸರ್ ಇದ್ದು, ಅದು ಮೆದುಳು, ಶ್ವಾಸಕೋಶ ಮತ್ತು ಯಕೃತ್ತಿಗೆ ಹರಡಿತ್ತು. ಈ ಹಿನ್ನೆಲೆಯಲ್ಲಿ ಹದಿನೈದು ದಿನಗಳ ಹಿಂದೆ ಮುಂಬೈನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇನ್ನು ರಾಖಿ ಸಾವಂತ್ ಯಾವಾಗಲೂ ತನ್ನ ತಾಯಿಯ ವಿಡಿಯೋಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದರು. ಒಂದೆರಡು ದಿನಗಳ ಹಿಂದೆಯೂ ಅವರು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ತಾಯಿಯ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ತಮ್ಮ ಅಭಿಮಾನಿಗಳು ಮತ್ತು ಸ್ನೇಹಿತರಲ್ಲಿ ಕೇಳಿಕೊಂಡಿದ್ದರು.
- " class="align-text-top noRightClick twitterSection" data="
">