ETV Bharat / entertainment

'ಪಾತ್ರಕ್ಕಾಗಿ ರಿಸ್ಕ್ ತೆಗೆದುಕೊಳ್ಳೋದಿಕ್ಕೆ ರೆಡಿ': ನಟಿ ರಾಗಿಣಿ ದ್ವಿವೇದಿ - sorry karma returns movie motion poster release

ಚಿತ್ರರಂಗಕ್ಕೆ ಬಂದು ಹನ್ನೊಂದು ವರ್ಷಗಳಾಯಿತು. ಈತನಕ ಹೊಸತು ಎನಿಸಿದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದೇನೆ. ಕಲಾವಿದರು ಸ್ವಲ್ಪ ರಿಸ್ಕ್ ಆದರೂ ಪರವಾಗಿಲ್ಲ. ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬುದು ನನ್ನ ಆಸೆ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.

ನಟಿ ರಾಗಿಣಿ ದ್ವಿವೇದಿ
ನಟಿ ರಾಗಿಣಿ ದ್ವಿವೇದಿ
author img

By

Published : Jul 12, 2022, 8:58 PM IST

Updated : Jul 13, 2022, 11:21 AM IST

ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯಲ್ಲೂ ತನ್ನ ಗ್ಲ್ಯಾಮರ್ ಜೊತೆ ಅಭಿನಯದಿಂದ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಕನ್ನಡದ ವೀರ ಮದಕರಿ ಸಿನಿಮಾ ಮೂಲಕ ತಮ್ಮ ಸಿನಿಮಾ ಪಯಣ ಆರಂಭಿಸಿದವರು. ಇದೀಗ, ಸಾರಿ ಕರ್ಮ ರಿಟರ್ನ್ಸ್ ಅಂತಿದ್ದಾರೆ.

ಯಾಕೆ ರಾಗಿಣಿ ಸಾರಿ ಕೇಳ್ತಾ ಇದ್ದಾರೆ ಅಂದುಕೊಂಡ್ರಾ? ನಿಮ್ಮ ಊಹೆ ತಪ್ಪು. ಇದು ರಾಗಿಣಿ ದ್ವಿವೇದಿ ಅಭಿನಯಿಸುತ್ತಿರುವ ಮೊದಲ ಸೂಪರ್ ಹೀರೋಯಿನ್ ಸಿನಿಮಾ. ಸೈಲೆಂಟ್ ಆಗಿ ಚಿತ್ರೀಕರಣ ಮಾಡ್ತಾ ಇರುವ 'ಸಾರಿ ಕರ್ಮ ರಿಟರ್ನ್ಸ್' ಚಿತ್ರದ ಲಿರಿಕಲ್ ಸಾಂಗ್ ಜೊತೆಗೆ ಮೋಷನ್ ಪೋಸ್ಟರ್ ಬಿಡುಗಡೆಯನ್ನು ಸಹ ಮಾಡಲಾಯಿತು.

ಕರ್ನಾಟಕ‌ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ. ಮ. ಹರೀಶ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಸಾರಿ ಚಿತ್ರದ ಬಗ್ಗೆ ಮಾತು ಶುರು ಮಾಡಿದ ರಾಗಿಣಿ ದ್ವಿವೇದಿ, ನಾನು ಚಿತ್ರರಂಗಕ್ಕೆ ಬಂದು ಹನ್ನೊಂದು ವರ್ಷಗಳಾಯಿತು. ಈತನಕ ಹೊಸತು ಎನಿಸಿದ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದೀನಿ. ಕಲಾವಿದರು ಸ್ವಲ್ಪ ರಿಸ್ಕ್ ಆದರೂ ಪರವಾಗಿಲ್ಲ. ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬುದು ನನ್ನ ಆಸೆ ಎಂದರು.

ನಾನು ಆ ರೀತಿ ಮಾಡಿಕೊಂಡು ಬರುತ್ತಿದ್ದೇನೆ. ನನಗೆ ಮೊದಲಿನಿಂದಲೂ ಸೂಪರ್ ಹೀರೋ ಅಂದರೆ ಇಷ್ಟ. ಈಗ ಅದೇ ಪಾತ್ರ ನನಗೆ ಸಿಕ್ಕಿರುವುದು ಖುಷಿಯಾಗಿದೆ. ನಿರ್ದೇಶಕ ಬ್ರಹ್ಮ ಸೇರಿದಂತೆ ಎಲ್ಲಾ ತಂತ್ರಜ್ಞರು, ಸೂಪರ್ ಹೀರೊ ಕಾನ್ಸೆಪ್ಟ್ ಅಡಿ ಈ ಸಿನಿಮಾವನ್ನ ಮಾಡುತ್ತಿದ್ದಾರೆ ಅಂದರು. ಇನ್ನು ರಾಗಿಣಿ ದ್ವಿವೇದಿ ಮುಖ್ಯ ಭೂಮಿಕೆಯಲ್ಲಿರೋ ಈ ಚಿತ್ರದಲ್ಲಿ ಸಿಂಗರ್ ಕಮ್ ನಟ ಅರ್ಜುನ್ ಶರ್ಮ ಜೋಡಿಯಾಗಿದ್ದಾರೆ.

ನಿರ್ದೇಶಕ ಬ್ರಹ್ಮ ಮಾತನಾಡಿ, ನಾನು ಮೂಲತಃ ವಿಎಫ್ಎಕ್ಸ್ ತಂತ್ರಜ್ಞ. ಈ ಹಿಂದೆ ಸಿದ್ದಿಸೀರೆ ಚಿತ್ರ ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ. ಇದು ಸೂಪರ್ ಹೀರೊ ಕಾನ್ಸೆಪ್ಟ್​​ನ ಚಿತ್ರ. ರಾಗಿಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದು ಕನ್ನಡದ ಮೊದಲ ಸೂಪರ್ ಹೀರೋ ಕಾನ್ಸೆಪ್ಟ್​​ನ ಚಿತ್ರ ಎನ್ನಬಹುದು. ಈ ಹಿಂದೆ ಕೆಲವು ಚಿತ್ರ ಬಂದಿದೆ ಎನ್ನುತ್ತಾರೆ.

ಆದರೆ, ಮೋಷನ್ ಕ್ಯಾಪ್ಚರ್ ಎಂಬ ವಿಶೇಷ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡುತ್ತಿರುವ ಮೊದಲ ಸೂಪರ್ ಹೀರೊ ಕಾನ್ಸೆಪ್ಟ್ ನ ಕನ್ನಡ ಚಿತ್ರವಿದು. ಆ ಕುರಿತು ಈಗಾಗಲೇ ಮೇಕಿಂಗ್ ವಿಡಿಯೋ ಸಹ ಬಿಡುಗಡೆ ಮಾಡಿದ್ದೇವೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ ಎಂದರು.

ಇನ್ನು ಈ ಚಿತ್ರದಲ್ಲಿ ಅಫ್ಜಲ್ ಕೂಡ ನಟಿಸಿದ್ದಾರೆ. ಈ ಚಿತ್ರಕ್ಕೆ ಮೂರು ಜನ ಸಂಗೀತ ನಿರ್ದೇಶಕರು. ಅದರಲ್ಲಿ ಒಬ್ಬರಾಗಿರುವ ರಾಜು ಎಮ್ಮಿಗನೂರು ಎರಡು ಹಾಡನ್ನ ಕಂಪೋಸ್ ಮಾಡಿದ್ದು, ರಾಜೀವ್ ಛಾಯಾಗ್ರಾಹಣ ಈ ಚಿತ್ರಕ್ಕಿದೆ. ನವೀನ್ ಕುಮಾರ್ ಈ ಚಿತ್ರದ ನಿರ್ಮಾಪಕರು. ಜೈ ಕೃಪ್ಲಾನಿ ಹಾಗೂ ಜೇನ್ ಜಾರ್ಜ್ ಸಹ ನಿರ್ಮಾಪಕರು. ಅಫ್ಜಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬಹುತೇಕ ಚಿತ್ರೀಕರಣ ಮಗಿಸಿರೋ ಸಾರಿ ಕರ್ಮ ರಿಟರ್ನ್ಸ್ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

Last Updated : Jul 13, 2022, 11:21 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.