ಕನ್ನಡ ಚಿತ್ರರಂಗದಲ್ಲಿ ತುಪ್ಪದ ಬೆಡಗಿ ಎಂದೇ ಫೇಮಸ್ ಆಗಿದ್ದಾರೆ ನಟಿ ರಾಗಿಣಿ ದ್ವಿವೇದಿ. ಕಳೆದ ಒಂದು ದಶಕದಿಂದ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ರಾಗಿಣಿ ದ್ವಿವೇದಿಗೆ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 33ನೇ ವಸಂತಕ್ಕೆ ಕಾಲಿಟ್ಟಿರುವ ರಾಗಿಣಿ ದ್ವಿವೇದಿ, ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಸಾರಿ ಕರ್ಮ ರಿಟರ್ನ್ಸ್ ಸಿನಿಮಾದ ಚಿತ್ರತಂಡದೊಂದಿಗೆ ಹಾಗೂ ನಿರ್ಮಾಪಕ ಕೆ.ಮಂಜು ಸಮ್ಮುಖದಲ್ಲಿ ರಾಗಿಣಿ ದ್ವಿವೇದಿ ಕೇಕ್ ಕಟ್ ಮಾಡಿ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ.
10 ವರ್ಷಗಳ ಸಿನಿ ಜರ್ನಿ: ಹತ್ತು ವರ್ಷದ ಸಿನಿಮಾ ಜರ್ನಿಯಲ್ಲಿ ರಾಗಿಣಿ ಏಳು ಬೀಳುಗಳನ್ನ ಕಂಡಿದ್ದಾರೆ. ಸಿನಿಮಾ ಅಲ್ಲದೇ ಮಂಗಳಮುಖಿಯರ ಬೆಳವಣಿಗೆಗೆ ಸಾಕಷ್ಟು ಕೆಲಸಗಳನ್ನ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿರುವ ವೃದ್ಧ ದಂಪತಿಗಳಿಗಾಗಿ ಓಲ್ಡ್ ಏಜ್ ಹೋಮ್ ಸೌಲಭ್ಯ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚು ಕೆಲಸಗಳನ್ನ ರಾಗಿಣಿ ತಮ್ಮ ಜೆನ್ ನೆಕ್ಟ್ ಚಾರಿಟಬಲ್ ವತಿಯಿಂದ ಮಾಡ್ತಾ ಇದ್ದಾರೆ.
ಸದ್ಯ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿರುವ ರಾಗಿಣಿ, ಸಾರಿ ಕರ್ಮ ರಿಟರ್ನ್ಸ್ ಸಿನಿಮಾದಲ್ಲಿ ವಿಭಿನ್ನ ಪಾತ್ರ ಮಾಡುತ್ತಿದ್ದಾರಂತೆ. ಈ ಸಿನಿಮಾವನ್ನು ಕೆನಡಾ ಮೂಲದ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುತ್ತಿದೆ. ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇರೋ ರಾಗಿಣಿ ದ್ವಿವೇದಿ ನಟನೆಯ ಬೇರೆ ಭಾಷೆಯ ಸಿನಿಮಾಗಳು, ಈ ವರ್ಷ ಬಿಡುಗಡೆ ಆಗಲಿವೆ.
ಇದನ್ನೂ ಓದಿ:ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ವಂಚನೆ ಪ್ರಕರಣ ದಾಖಲು
ಒತ್ತಡಗಳು ಸಹಜ: ಇನ್ನು ಸಿನಿಮಾ ಲೋಕದಲ್ಲಿ ಬೆಳೆಯಬೇಕು ಅಂದಾಗ ಸಾಕಷ್ಟು ಒತ್ತಡ ಇರುತ್ತೆ. ಹಾಗಾಗಿ ನಮ್ಮ ದೇಹ, ಸೌಂದರ್ಯದ ಬಗ್ಗೆ ನಮಗೆ ಪ್ರೀತಿ ಇರಬೇಕು. ಹಾಗೆ ನಮ್ಮನ್ನ ನಾವು ಪ್ರೀತಿಸಬೇಕು. ಅದನ್ನ ಬಿಟ್ಟು ಒತ್ತಡಕ್ಕೆ ಒಳಗಾಗಿ, ಇನ್ನು ಚೆನ್ನಾಗಿ ಕಾಣಬೇಕು ಅಂತಾ ಸಾವನ್ನ ಮೈ ಮೇಲೆ ಎಳೆದುಕೊಳ್ಳಬಾರದು ಅಂತಾ ನಟಿ ರಾಗಿಣಿ ಯುವ ನಟಿಯರಿಗೆ ಕಿವಿ ಮಾತು ಹೇಳಿದರು.
ಸಿನಿಮಾ ಜೊತೆಗೆ ರಾಗಿಣಿ ದ್ವಿವೇದಿ ಕೆಲ ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಮಾಡಿದರು. ಇದರೊಟ್ಟಿಗೆ ಈಗ ಸಮಾಜಮುಖಿ ಕೆಲಸಗಳನ್ನ ಮಾಡ್ತಾ ಇರುವ ರಾಗಿಣಿ ದ್ವಿವೇದಿ ರಾಜಕೀಯಕ್ಕೆ ಬರ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.