ETV Bharat / entertainment

'ರಾಕಿ ಭಾಯ್​ ಮೀಟ್ಸ್​ ರಾಧಿಕಾ': ಹಳೆಯ ವಿಡಿಯೋ ಹಂಚಿಕೊಂಡ 'ಮಿಸ್ಸಸ್​ ರಾಮಾಚಾರಿ' - ಈಟಿವಿ ಭಾರತ ಕನ್ನಡ

ಇಂದು ಕೆಜಿಎಫ್​ 2 ಸಿನಿಮಾ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಹಳೆ ವಿಡಿಯೋವೊಂದನ್ನು ನಟಿ ರಾಧಿಕಾ ಪಂಡಿತ್​ ಹಂಚಿಕೊಂಡಿದ್ದಾರೆ.

radhika
'ರಾಕಿ ಭಾಯ್​ ಮೀಟ್ಸ್​ ರಾಧಿಕಾ'
author img

By

Published : Apr 14, 2023, 3:52 PM IST

Updated : Apr 14, 2023, 3:57 PM IST

ಕಳೆದ ವರ್ಷ ಇದೇ ದಿನದಂದು ತೆರೆಕಂಡು ಚಿತ್ರರಂಗದಲ್ಲಿ ಧೂಳೆಬ್ಬಿಸಿದ್ದ 'ಕೆಜಿಎಫ್​ 2' ವರ್ಷ ಪೂರೈಸಿದೆ. ಇಡೀ ಭಾರತೀಯ ಸಿನಿ ರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಈ ಸಿನಿಮಾಗೆ ಸಲ್ಲುತ್ತದೆ. ಅಲ್ಲದೇ ರಾಕಿಂಗ್​ ಸ್ಟಾರ್​ ಯಶ್​ಗೆ ವಿಶೇಷ ಮನ್ನಣೆ ತಂದುಕೊಟ್ಟ ಚಿತ್ರವಿದು. ಈ ಸಿನಿಮಾದಿಂದಲೇ ಯಶ್​ ಅವರು 'ರಾಕಿ ಭಾಯ್​' ಅಂತಲೇ ಕರೆಸಿಕೊಂಡರು. ಇಂದಿಗೆ ಕೆಜಿಎಫ್​ 2 ತೆರೆ ಕಂಡು ಒಂದು ವರ್ಷ ಪೂರೈಸಿರುವ ಖುಷಿಯಲ್ಲಿ ಚಿತ್ರತಂಡವಿದೆ. ಹೀಗಾಗಿ ಚಿತ್ರವನ್ನು ವಿವಿಧ ರೀತಿಯಲ್ಲಿ ನೆನಪಿಸಿಕೊಳ್ಳುವಂತಹ ಕೆಲಸಗಳು ಆಗುತ್ತಿದೆ. ಅದರಂತೆ ಯಶ್​ ಪತ್ನಿ, ನಟಿ ರಾಧಿಕಾ ಪಂಡಿತ್​ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕೆಜಿಎಫ್​ 1 ನೋಡಿದ್ದ ಪ್ರೇಕ್ಷಕರಿಗೆ ಕೆಜಿಎಫ್​ 2 ಮನರಂಜನೆಯ ರಸದೌತಣ ನೀಡಿತ್ತು. ಯಶ್​ ಸ್ಟೈಲ್​, ಅತ್ಯದ್ಭುತ ಅಭಿನಯ, ಮೇಕಿಂಗ್​ ಶೈಲಿ, ಕಥೆ ರವಾನಿಸಿದ ರೀತಿ ಎಲ್ಲವೂ ಅಭಿಮಾನಿಗಳ ಮನ ಮುಟ್ಟಿತ್ತು. 1,200 ಕೋಟಿ ರೂ.ಗೂ ಅಧಿಕ ಕಲೆಕ್ಷನ್​ ಮಾಡುವ ಮೂಲಕ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಅದೆಷ್ಟು ಬೇಗ ದಿನಗಳು ಉರುಳಿ ಹೋಯಿತು. ಸಿನಿಮಾ ಬಿಡುಗಡೆಗೊಂಡು ಒಂದು ವರ್ಷವೇ ಆಯಿತು. ಯಶ್​ ಅವರ ಈ ಹಿಟ್​ ಸಿನಿಮಾಗೆ ಪತ್ನಿ ರಾಧಿಕಾ ಅವರ ಬೆಂಬಲವೂ ಇದ್ದೇ ಇತ್ತು. ಇದೀಗ ಅವರು ಕೆಜಿಎಫ್​ 2 ಸೆಟ್​ನ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ.

ಯಶ್​ ಅವರು ರಾಕಿ ಭಾಯ್​ ಪಾತ್ರಕ್ಕಾಗಿ ರೆಡಿ ಆಗಿದ್ದರು. ಈ ವೇಳೆ ಅಲ್ಲಿಗೆ ರಾಧಿಕಾ ಪಂಡಿತ್​ ಅವರು ಮಗಳು ಐರಾಳನ್ನು ಎತ್ತಿಕೊಂಡು ಬರುತ್ತಾರೆ. "ನಾನು 70ರ ದಶಕದಲ್ಲಿದ್ದೀನಿ.​ ಈ ಲುಕ್​ ಸಖತ್​ ಆಗಿ ಕಾಣಿಸುತ್ತಿದೆ" ಎಂದು ರಾಧಿಕಾ ಮೆಚ್ಚುಗೆ ಸೂಚಿಸಿದ್ದಾರೆ. ಈ ವೇಳೆ ರಾಕಿ ಭಾಯ್​ ಪತ್ನಿಯನ್ನು ತಬ್ಬಿಕೊಂಡು ಒಂದು ಕಿಸ್​ ನೀಡುತ್ತಾರೆ. ಬಳಿಕ ಮಗಳು ಐರಾಳ ಜೊತೆ ಸಂಭಾಷೆಯನ್ನು ನಡೆಸುವ ಚಿಕ್ಕ ಬ್ಯೂಟಿಫುಲ್​ ದೃಶ್ಯ ಇದಾಗಿದೆ. ವಿಡಿಯೋಗೆ "ರಾಕಿ ಭಾಯ್​ ಮೀಟ್ಸ್​ ರಾಧಿಕಾ" ಎಂಬ ಕ್ಯಾಪ್ಶನ್​ ನೀಡಿದ್ದಾರೆ.

ಈ ವಿಡಿಯೋಗೆ ಅಭಿಮಾನಿಗಳು ಪ್ರೀತಿಯ ಸುರಿಮಳೆಗೈದಿದ್ದಾರೆ. ಬಗೆ ಬಗೆಯ ಬರಹಗಳಿಂದ ಕಮೆಂಟ್​ ವಿಭಾಗವನ್ನು ತುಂಬಿದ್ದಾರೆ. ಕೆಜಿಎಫ್​ 2 ಒಂದು ವರ್ಷ ಪೂರೈಸಿರುವ ಸಂಭ್ರಮದ ಬಗ್ಗೆ ಹೊಂಬಾಳೆ ಫಿಲ್ಮ್ಸ್​ ಕೂಡ ಟ್ವೀಟ್​ ಮಾಡಿದೆ. 'ಒಂದು ವರ್ಷದ ಹಿಂದೆ, #KGFCchapter 2 ಉಸಿರುಕಟ್ಟುವ ಕ್ರಿಯೆ, ತೀವ್ರವಾದ ಭಾವನೆಗಳು ಮತ್ತು ದೊಡ್ಡ ಪಾತ್ರಗಳಿಂದ ತುಂಬಿದ ಮರೆಯಲಾಗದ ಪ್ರಯಾಣ. ಚಿತ್ರದ ಬಿಡುಗಡೆಯು ಅಭಿಮಾನಿಗಳೊಂದಿಗಿನ ಹಬ್ಬಕ್ಕಿಂತ ಕಡಿಮೆ ಏನಲ್ಲ' ಎಂದು ಬರೆದುಕೊಂಡಿದೆ.

ಕೆಜಿಎಫ್​ 2 ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನವಿದೆ. ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ ಮಾಡಿದೆ. 2022 ರಲ್ಲಿ ಬಿಡುಗಡೆಯಾಗಿ ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಭಾರತದ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕಿದೆ. ನಟ ಯಶ್​, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್​, ಪ್ರಕಾಶ್ ರಾಜ್​, ರಾವ್ ರಮೇಶ್ ಸೇರಿದಂತೆ ಅನೇಕರು ನಟನೆ ಮಾಡಿದ್ದಾರೆ.

ಇದನ್ನೂ ಓದಿ: ಒಂದು ವರ್ಷದ ಸಂಭ್ರಮದಲ್ಲಿ ಇತಿಹಾಸ ಸೃಷ್ಟಿಸಿದ 'KGF 2': ರಾಕಿಭಾಯ್​ ಮುಂದಿನ ಚಿತ್ರಕ್ಕೆ ಹೆಚ್ಚಿದ ಕುತೂಹಲ

Last Updated : Apr 14, 2023, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.