ಹಳದಿ ಸೀರೆಯಲ್ಲಿ ದೇಸಿ ಗರ್ಲ್.. ಪ್ರಿಯಾಂಕಾ ಚೋಪ್ರಾ ಫೋಟೋಗೆ ಅಭಿಮಾನಿಗಳ ಮೆಚ್ಚುಗೆ - ಪ್ರಿಯಾಂಕಾ ಚೋಪ್ರಾ ಫೋಟೋ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇನ್ಸ್ಟಾಗ್ರಾಮ್ನಲ್ಲಿ ಹಳದಿ ಬಣ್ಣದ ಸೀರೆಯುಟ್ಟ ಫೋಟೋ ಶೇರ್ ಮಾಡಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಭಾರತವಲ್ಲದೇ ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ನಟನೆ ಮಾತ್ರವಲ್ಲದೇ ಮೋಟಿಯೇಷನಲ್ ಸ್ಪೀಚ್ ಮೂಲಕ ಯುವ ಜನತೆಯ ಮನ ಮುಟ್ಟಿದ್ದಾರೆ. ಇಷ್ಟೇ ಅಲ್ಲ ಅವರ ಡ್ರೆಸ್ಸಿಂಗ್ ಸೆನ್ಸ್ ಅದ್ಭುತ ಎಂಬುದು ಅಭಿಮಾನಿಗಳ ಅಭಿಪ್ರಾಯ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಆಗಾಗ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇದೀಗ ಇನ್ಸ್ಟಾಗ್ರಾಮ್ನಲ್ಲಿ ಹಳದಿ ಬಣ್ಣದ ಸೀರೆಯುಟ್ಟ ಫೋಟೋ ಶೇರ್ ಮಾಡಿದ್ದಾರೆ. ಅದಕ್ಕೆ ಸಾರಿ ಸಾರಿ ನೈಟ್ಸ್ ಎಂದು ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. ದೇಸಿ ಗರ್ಲ್ನ ವೆಸ್ಟ್ರರ್ನ್ & ದೇಸಿ ಸ್ಟೈಲ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೆಡ್ ಬುಷ್ ಪ್ರಚಾರ: ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿ ಸೈಕಲ್ ರ‍್ಯಾಲಿ ಮಾಡಿದ ಡಾಲಿ & ಟೀಮ್
ಕರ್ವಾ ಚೌತ್‌ಗೆ ಮುಂಚಿತವಾಗಿ ಅವರು ಹಂಚಿಕೊಂಡ ಈ ಫೋಟೋದಲ್ಲಿ, ಹಳದಿ ಸೀರೆಯುಟ್ಟು ಕಪ್ಪು ಬ್ಯಾಗ್ ಹಿಡಿದಿದ್ದಾರೆ. ಚೋಕರ್, ಬಳೆಗಳನ್ನು ತೊಟ್ಟಿದ್ದಾರೆ. ಕಡು ಲಿಪ್‌ಸ್ಟಿಕ್ ಹಾಕಿ, ಬಿಂದಿಯಿಟ್ಟಿದ್ದಾರೆ.