ಮುಂಬೈ: ತಮ್ಮ ಅದ್ಬುತ ನೃತ್ಯಗಳ ಮೂಲಕ ಅನೇಕ ಮಂದಿ ಹೃದಯಕ್ಕೆ ಕನ್ನ ಹಾಕಿದವರು ನಟಿ ನೋರಾ ಫತೇಹಿ. ಈ ದಿನ ಅವರ ಜನ್ಮದಿನ. 31ನೇ ವರ್ಷಕ್ಕೆ ಕಾಲಿಡುತ್ತಿರುವ ನೋರಾ, ಕೆಲಸ ಅರಸಿ ಕೆನಡಾದಿಂದ ಭಾರತಕ್ಕೆ ಬಂದವರು. ಕೈಯಲ್ಲಿ ಪುಡಿಗಾಸು ಹಿಡಿದುಕೊಂಡು ಬಂದ ನೋರಾ ಇಂದು ಜನಗತ್ತಿನಾದ್ಯಂತ ಗುರುತಿಸುವಷ್ಟು ಹೆಸರು ಸಂಪಾದಿಸಿದ್ದಾರೆ. ಫಿಫಾ ಫುಟ್ಬಾಲ್ ವರ್ಲ್ಡ್ ಕಪ್ 2022 ನಲ್ಲಿ ಪ್ರದರ್ಶನಕ್ಕೆ ಅವಕಾಶ ಪಡೆದ ನೋರಾಗೆ ಬಾಲಿವುಡ್ ಕೂಡ ಸ್ವಾಗತ ಕೋರಿತು.
- " class="align-text-top noRightClick twitterSection" data="
">
ಕೇವಲ ಕೆನಾಡಿಯನ್ ನಟಿಯಾಗಿರದೇ ನೋರಾ, ಮಾಡೆಲ್, ಉತ್ತಮ ನೃತ್ಯಗಾರ್ತಿ, ನಿರ್ಮಾಪತಿ, ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. 'ಝಲಕ್ ದಿಲಾಜಾ -9'ನೇ ಸೀಸನ್ ಅಲ್ಲಿ ಸ್ಪರ್ಧಿಯಾಗಿದ್ದ ನೋರಾ ಇಂದು ಅದೇ ಡ್ಯಾನ್ಸಿಂಗ್ ರಿಯಾಲಿಟಿ ಶೋಗೆ ತೀರ್ಪುಗಾರರಾಗಿದ್ದಾರೆ.
ನೋರಾ ಆರಂಭಿಕ ಸಂಬಳ 3 ಸಾವಿರ ರೂ. : ಫೆ. 2 1992ರಲ್ಲಿ ಟೊರೊಂಟೊದಲ್ಲಿ ಜನಿಸಿದ ನೋರಾಗೆ ಭಾರತದ ಪೌರತ್ವ ಇರಲಿಲ್ಲ. ದೊಡ್ಡ ಕೆಲಸವನ್ನು ಅರಿಸುತ್ತ ಮೊದಲ ಬಾರಿಗೆ ಅವರು ಭಾರತಕ್ಕೆ ಬಂದರು. ಸಂದರ್ಶನವೊಂದರಲ್ಲಿ ಅವರೇ ಹೇಳಿದಂತೆ, ಕೇವಲ 5000 ಸಾವಿರ ರೂ ಹಿಡಿದು ಅವರು ಭಾರತಕ್ಕೆ ಬಂದಿದ್ದರಂತೆ, ಇಲ್ಲಿಗೆ ಬಂದ ಬಳಿಕ ಏಜೆನ್ಸಿಯಲ್ಲಿ 3 ಸಾವಿರ ರೂಪಾಯಿಗೆ ಕೆಲಸಕ್ಕೆ ಸೇರಿದರಂತೆ.
- " class="align-text-top noRightClick twitterSection" data="
">
16 ವರ್ಷಕ್ಕೆ ಕೆಲಸಕ್ಕೆ ಸೇರಿದ ನಟಿ: ಬಾಲಿವುಡ್ಗೆ ಬರುವ ಮೊದಲ ನೂರ್ ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ವೇಟರ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನೋರಾ ಅವರು ತಮ್ಮ 16ರಿಂದ 18ವರ್ಷದ ವರೆಗೆ ಹಣಕಾಸಿನ ಬಿಕ್ಕಟ್ಟಿನ ಹಿನ್ನೆಲೆ ವೇಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೇ ಕಾಫಿ ಶಾಪ್, ಕಾಲ್ ಸೆಂಟರ್ನಲ್ಲಿ ಟೆಲಿಕಾಲರ್ ಮತ್ತು ಲಾಟರಿ ಮಾರಾಟ ಕೂಡ ಮಾಡಿದ್ದಾರೆ
ನೋರಾ ಬಾಲಿವುಡ್ ಪ್ರವೇಶ: ಭಾರತಕ್ಕೆ ಬಂದ ಬಳಿಕ ಏಜೆನ್ಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನೋರಾ ಇದೇ ವೇಳೆ, ಬಾಲಿವುಡ್ ಅವಕಾಶವನ್ನು ಎದುರು ನೋಡುತ್ತಿದ್ದರು. 2014ರಲ್ಲಿ ರೋರ್ ಟೈಗರ್ಸ್ ಆಫ್ ದ ಸುಂದರ್ಬಗಸ್ ಮೂಲಕ ಅವಕಾಶ ಪಡೆದರು, ಆಕೆ ಗುರುತಿಸಿಕೊಳ್ಳಲಿಲ್ಲ. 2015ರಲ್ಲಿ 8 ಚಿತ್ರಗಳ ಅವಕಾಶದ ಜೊತೆಗೆ ಬಿಗ್ ಬಾಸ್- 9ರ ಸ್ಪರ್ಧಿಯಾಗಿ ಆಯ್ಕೆಗೊಂಡರು. ಈ ಮೂಲಕ ಅವರು ತೆಲುಗಿನಲ್ಲಿ ಜ್ಯೂ ಎನ್ಟಿಆರ್ ಅವರ ಟೆಂಪರ್ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು. ಇದೇ ವೇಳೆ ದಕ್ಷಿಣದ ಬ್ಲಾಕ್ ಬಸ್ಟರ್ ಚಿತ್ರವಾದ ಬಾಹುಬಲಿ - ದಿ ಬಿಗನಿಂಗ್ನಲ್ಲಿ ಅವರು ಐಟಂ ಹಾಡಿಗೆ ಸೊಂಟ ಬಳಕಿಸಿದರು. ತಮ್ಮ 8 ವರ್ಷದ ಸಿನಿ ಜೀವನದಲ್ಲಿ 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
- " class="align-text-top noRightClick twitterSection" data="
">
ಮಾಧ್ಯಮದ ವರದಿ ಅನುಸಾರ, ಸದ್ಯ ಕೋಟ್ಯಂತರ ರೂಪಾಯಿ ಒಡತಿ ಆಗಿರುವ ನೋರಾ, ಇಂದು ತಮ್ಮ ಒಂದು ದಿನದ ಪ್ರದರ್ಶನಕ್ಕೆ 40 ರಿಂದ 50 ಲಕ್ಷ ರೂ ಪಡೆಯುತ್ತಾರಂತೆ. ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಂಚಿಕೊಳ್ಳಲು ಅವರು 5 ರಿಂದ 7 ಲಕ್ಷ ಸಂಭಾವನೆ ಪಡೆಯುತ್ತಾರೆ. ಸದ್ಯ ನೋರಾ ಒಟ್ಟಾರೆ ಆಸ್ತಿ ಮೌಲ್ಯ 30 ಕೋಟಿ ಆಗಿದೆ. ಮೂರು ಸಾವಿರದಲ್ಲಿ ಜೀವನ ನಡೆಸುತ್ತಿದ್ದ ನೋರಾ ಜೀವನ ಕಳೆದ ಏಳು ವರ್ಷದಲ್ಲಿ ಸಾಕಷ್ಟು ಬದಲಾಗಿದೆ.
- " class="align-text-top noRightClick twitterSection" data="
">
ಇದನ್ನೂ ಓದಿ: ಗ್ರ್ಯಾಮಿ ಪ್ರದಾನ: 32ನೇ ಪ್ರಶಸ್ತಿ ಗೆದ್ದ ಗಾಯಕಿ ಬೆಯಾನ್ಸ್ ದಾಖಲೆ