ETV Bharat / entertainment

ಅರ್ಜುನ್​ ಕಪೂರ್​ ಹುಟ್ಟುಹಬ್ಬ ಆಚರಿಸಲು ಗೆಳೆಯನ ಮನೆಗೆ ಬಂದ ನಟಿ ಮಲೈಕಾ ಅರೋರಾ - ಬಹು ವಯಸ್ಸಿನ ಅಂತರದ ಈ ಸಂಬಂಧ

ಒಟ್ಟೊಟ್ಟಿಗೆ ಪ್ರವಾಸಿತಾಣ, ಮೋಜು ಮಸ್ತಿ ನಡುವೆ ಕ್ಯಾಮೆರಾ ಕಣ್ಣಿನಲ್ಲಿ ಈ ಜೋಡಿಗಳು ಸೆರೆಯಾಗುತ್ತಲೇ ಇರುತ್ತಾರೆ. ಇದೀಗ ಇವರಿಬ್ಬರು ವಿಶೇಷ ದಿನಕ್ಕೆ ಒಟ್ಟಾಗಿ ಪ್ಯಾಪಾರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ.

Actress Malaika Arora came to Arjun Kapoor's friend's house to celebrate his birthday

author img

By

Published : Jun 26, 2023, 11:09 AM IST

ಮುಂಬೈ: ನಟಿ ಮಲೈಕಾ ಮತ್ತು ಅರ್ಜುನ್​ ಕಪೂರ್​ ಸಂಬಂಧ ಈಗಾಗಲೇ ಬಹಿರಂಗವಾಗಿದ್ದು, ಇಬ್ಬರೂ ಈ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಬಹು ವಯಸ್ಸಿನ ಅಂತರದ ಈ ಸಂಬಂಧದ ಬಗ್ಗೆ ಮಲೈಕಾ ಮತ್ತು ಅರ್ಜುನ್​ ಇಬ್ಬರೂ ಗಂಭೀರವಾಗಿಯೇ ಇದ್ದಾರೆ. ಇದನ್ನು ಇತ್ತೀಚೆಗೆ ನಡೆದ ಕಾಫಿ ವಿತ್​ ಕರಣ್​ ಶೋ ಅಲ್ಲಿ ನಟ ಅರ್ಜುನ್​ ಕೂಡ ತಿಳಿಸಿದ್ದರು. ಒಟ್ಟೊಟ್ಟಿಗೆ ಪ್ರವಾಸಿತಾಣ, ಮೋಜು ಮಸ್ತಿ ನಡುವೆ ಕ್ಯಾಮೆರಾಗೆ ಈ ಜೋಡಿಗಳು ಸೆರೆಯಾಗುತ್ತಲೇ ಇರುತ್ತಾರೆ.

ಇದೀಗ ಇವರಿಬ್ಬರು ವಿಶೇಷ ದಿನಕ್ಕೆ ಒಟ್ಟಾಗಿ ಪ್ಯಾಪಾರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ನಟ ಅರ್ಜುನ್​ ಕಪೂರ್​ ಹುಟ್ಟುಹಬ್ಬದ ಹಿನ್ನಲೆ ಇವರು ಕಾಣಿಸಿಕೊಂಡಿದ್ದಾರೆ. ಗೆಳೆಯ ಅರ್ಜುನ್​ ಕಪೂರ್​ ಹುಟ್ಟ ಹಬ್ಬದ ಹಿನ್ನಲೆ ನಟಿ ಮಲೈಕಾ ಗೆಳೆಯನ ಮನೆಯಲ್ಲಿ ಸೆರೆ ಸಿಕ್ಕಿದ್ದಾರೆ. ತಮ್ಮ ಬಳ್ಳಿಯಂತಹ ಬಳುಕುವ ದೇಹದೊಂದಿಗೆ ಸಖತ್​ ಔಟ್​ಫಿಟ್​ನಲ್ಲಿ ನಾಚಿದ್ದಾರೆ. ಪ್ರತಿ ಬಾರಿ ದೇಶದ ಹೊರಗೆ ಪರಸ್ಪರ ಹುಟ್ಟು ಹಬ್ಬ ಆಚರಿಸುವ ಈ ಜೋಡಿ ಈ ಬಾರಿ ಮಾತ್ರ ಆ ಸಂಪ್ರದಾಯಕ್ಕೆ ತಿಲಾಂಜಲಿ ಹಾಕಿದೆ. ತಮ್ಮ 38ನೇ ಹುಟ್ಟುಹಬ್ಬದಂದು ಇಬ್ಬರು ತಮ್ಮ ಅಮೂಲ್ಯ ಸಮಯವನ್ನು ಮನೆಯಲ್ಲಿಯೇ ಕಳೆಯಲು ನಿರ್ಧರಿಸಿದ್ದಾರೆ.

ಅರ್ಜುನ್​ ಕಪೂರ್​ ಮನೆಗೆ ಸಂಜೆ ಬಂದ ನಟಿ ಮಲೈಕಾ ಬಿಳಿ, ಕಿತ್ತಳೆ ಬಣ್ಣದ ಸ್ಲಿವ್​​ಲೆಸ್​​ ಪ್ರಿಂಟ್​ ಮಿಡಿ ಡ್ರೆಸ್​ನಲ್ಲಿ ಮಿಂಚಿದರು. ಲೋವೆ ಬ್ರಾಂಡ್​ನ ಈ ಸ್ಲಿಟ್​ ಡ್ರೆಸ್​ ಅವರಿಗೆ ಮುದ್ದಾಗಿ ಕಾಣುತ್ತಿತ್ತು. ಈ ನಡುವೆ ನೀ ಹೈ ಟಂಗ್​ ಶೂ ತೊಟ್ಟಿದ್ದ ಅವರು ಕುತ್ತಿಗೆಗೆ ಕ್ಯೂಬನ್​ ಚೈನ್​ ತೊಟ್ಟಿದ್ದರು.

ಇನ್ನು ಈ ಬರ್ತಡೇ ಪಾರ್ಟಿಗೆ ನಟ ಅರ್ಜುನ್​ ಅವರ ತಂಗಿ ಅಶುಲಾ ಕಪೂರ್​ ಕೂಡ ಸೇರಿದ್ದಾರೆ. ಅವರು ಹಳದಿ ಬಣ್ಣದ ಉಡುಪಿನಲ್ಲಿ ಕಣ್ಸಳೆದಿದ್ದಾರೆ.

ಇನ್ನು ನಟ ಅರ್ಜುನ್​ ಕಪೂರ್​ ಅಸ್ಮಾನ್​ ಭಾರಧ್ವಾಜ್​ ಅವರ ನಿರ್ದೇಶನದ ಕುಟ್ಟಿಯಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಟಬು, ನಸೀರ್​ದ್ದೀನ್​ ಶಾ ಮತ್ತು ಕೊಂಕಣ್​ ಸೇನ್​ ಶರ್ಮಾ ಹಾಗೂ ರಾಧಿಕಾ ಮದನ್​ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಅವರು ಅಜಯ್​ ಬಹಲ್​ ಅವರ ಸಾಹಸ ಥ್ರಿಲ್ಲರ್​ ಹೊಂದಿರುವ ಕಥೆ ಲೇಡಿ ಕಿಲ್ಲರ್​ನಲ್ಲಿ ಮಿಂಚುತ್ತಿದ್ದಾರೆ.

ಈ ಚಿತ್ರದಲ್ಲಿ ಅವರಿಗೆ ನಟಿ ರಾಕುಲ್​ ಪ್ರೀತ್​ ಸಿಂಗ್​ ಮತ್ತು ಭುಮಿ ಪಡ್ನೇಕರ್​ ಜೊತೆಯಾಗಲಿದ್ದಾರೆ. ಇತ್ತ ನಟಿ ಮಲೈಕಾ ಕೂಡ ಹಲವಾರು ಪ್ರಾಜೆಕ್ಟ್​​ಗಳಲ್ಲಿ ಬ್ಯುಸಿಯಾಗಿದ್ದಾರೆ. 49 ವರ್ಷದ ಈ ನಟಿ ತಮ್ಮದೇ ಫಟ್ನೆಸ್​ ಸ್ಟುಡಿಯೋ ಹೊಂದಿದ್ದು, ಫುಡ್​ ಡೆಲಿವರ್​ ಸರ್ವಿಸ್​ ನ್ಯೂಡ್​ ಬೌಲ್​​ ಅನ್ನು ಕೂಡ ನಿರ್ವಹಿಸುತ್ತಿದ್ದಾರೆ. ಜೊತೆಗೆ ದಿ ಲೇಬಲ್​ ಲೈಫ್​​ ಕ್ಲಾತ್​​ ಬ್ರಾಂಡ್​ನ ಸ್ಟೈಲ್​ ಎಡಿಟರ್​ ಕೂಡ ಆಗಿದ್ದಾರೆ. ನಟಿ ಮಲೈಕಾ- ಅರ್ಬಜ್​ ಖಾನ್​ ಅವರ ವಿಚ್ಛೇದನ ಬಳಿಕ ನಟ ಅರ್ಜುನ್​ ಕಪೂರ್​​ ಜೊತೆಗೆ ಡೇಟಿಂಗ್​ನಲ್ಲಿದ್ದಾರೆ.

ಇದನ್ನೂ ಓದಿ: Guntur Kaaram: ಪೂಜಾ ಹೆಗ್ಡೆ ಸ್ಥಾನಕ್ಕೆ ಶ್ರೀಲೀಲಾ - 'ಗುಂಟೂರು ಕಾರಂ'ಗೆ ಮೀನಾಕ್ಷಿ ಛೌಧರಿ ಹೊಸ ಎಂಟ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.