ETV Bharat / entertainment

ರಸ್ತೆ ಗುಂಡಿ ಮುಚ್ಚಿದ ನಟಿ ಕಾರುಣ್ಯ ರಾಮ್ ತಂಡ: 'ಸಂಸ್ಕಾರ'ಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

author img

By

Published : Mar 2, 2023, 3:08 PM IST

Updated : Mar 2, 2023, 3:28 PM IST

ನಟಿ ಕಾರುಣ್ಯ ರಾಮ್ ತಂಡ ರಾಜರಾಜೇಶ್ವರಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Karunya Ram team closed the road potholes
ರಸ್ತೆ ಗುಂಡಿ ಮುಚ್ಚಿದ ಕಾರುಣ್ಯ ರಾಮ್ ತಂಡ

ವಜ್ರಕಾಯ, ಕಿರುಗೂರಿನ ಗಯ್ಯಾಳಿಗಳು, ಪೆಟ್ರೋಮ್ಯಾಕ್ಸ್ ಚಿತ್ರಗಳ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಹೊಂದಿರುವ ನಟಿ ಕಾರುಣ್ಯ ರಾಮ್. ಅಭಿನಯದ ಜೊತೆಗೆ ತಮ್ಮದೇ ಆದ 'ಸಂಸ್ಕಾರ ಟ್ರಸ್ಟ್' ವತಿಯಿಂದ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.‌ ಇದೀಗ ನಟಿ ಕಾರುಣ್ಯ ರಾಮ್‌ ತಮ್ಮ ರಾಜರಾಜೇಶ್ವರಿ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

  • Little things make difference !yes,team samakar has taken up pathole filling as a challenge..
    Our new initiative is to cover up all deadly patholes in city to ensure save drive to riders as it may be very dangerous to travel through such hurdles causing accidents injury & deaths pic.twitter.com/2XTEsKH0mj

    — Karunya Ram (@Karunya_oficial) March 2, 2023 " class="align-text-top noRightClick twitterSection" data=" ">

ಹೌದು, ಬುಧವಾರ ರಾತ್ರಿ ಹನ್ನೊಂದು ಗಂಟೆ ಹೊತ್ತಲ್ಲಿ ತಮ್ಮ ಸ್ನೇಹಿತರು ಮತ್ತು ಸಹೋದರಿಯ ಜೊತೆ ರಸ್ತೆಗಳಿದ ಕಾರುಣ್ಯ ರಾಮ್​​ ಹತ್ತಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚುವ ‌ಕೆಲಸ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಕಾರುಣ್ಯ ರಾಮ್, ಎರಡು ಘಟನೆಗಳಿಂದಾಗಿ ನಾನು ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚವ ಕೆಲಸ ಮಾಡಬೇಕು ಎನಿಸಿತ್ತು. ಏಕೆಂದರೆ, ನನ್ನ ಸ್ನೇಹಿತರೊಬ್ಬರ ತಂದೆ ತಾಯಿ ವಾಹನ ಓಡಿಸುವಾಗ ರಸ್ತೆ ಗುಂಡಿಯಿಂದಾಗಿ ಬಿದ್ದು ಆಸ್ಪತ್ರೆ ಸೇರಿದ್ದರು. ಅದರಲ್ಲಿ ಓರ್ವರು ಪ್ರಾಣವನ್ನೇ ಕಳೆದುಕೊಂಡರು. ಹಣಕ್ಕಿಂತಲೂ ಜೀವ ಅಮೂಲ್ಯ. ಈ ರೀತಿಯಲ್ಲಿ ಬೇರೆಯವರ ಜೀವ ಬಲಿಯಾಗಬಾರದು ಎನ್ನುವ ಕಾರಣಕ್ಕೆ ನಾನು ಮತ್ತು ಸ್ನೇಹಿತರು ಜೊತೆಗೂಡಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುತ್ತಿದ್ದೇವೆ ಎಂದು ತಿಳಿಸಿದರು.

ವಾಹನ ಸವಾರರದಿಂದ ಅಭಿನಂದನೆ.. ರಾತ್ರಿ 11 ಗಂಟೆಯ ಹೊತ್ತಿಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಶುರು ಮಾಡಿದ ಕಾರುಣ್ಯ ಮತ್ತು ಅವರ ತಂಡಕ್ಕೆ ಆ ರಸ್ತೆಯಲ್ಲಿ ಸಂಚರಿಸುತ್ತಿದ್ದವರು ಅಭಿನಂದನೆ ಸಲ್ಲಿಸಿದರು. ಆ ರಸ್ತೆಯಲ್ಲಿ ಹೋಗುತ್ತಿದ್ದವರು ವಾಹನ ನಿಲ್ಲಿಸಿ, ಉತ್ತಮ ಕೆಲಸ ಮಾಡುತ್ತಿದ್ದೀರಿ ಎಂದು ಬೆನ್ನು ತಟ್ಟಿದರು. ಜೊತೆಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

Little things make great difference ! yes, team samakar has taken up pathole filling as a challenge …
So please notify us by using #samakartrust & tag us @samskartrust with the pic of pathole near by you which need to be fixed join hands to build a better society👍🏼 pic.twitter.com/NXLCRQFhU7

— Karunya Ram (@Karunya_oficial) March 2, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಕಾಂತಾರ 2 ಕಥೆ ಕೆಲಸ ಚುರುಕು.. ಫೋನ್ ಸ್ವಿಚ್​​ ಆಫ್ ಮಾಡಿಕೊಂಡ ಡಿವೈನ್ ಸ್ಟಾರ್

ಸರ್ಕಾರ ಅಥವಾ ಜನಪ್ರತಿನಿಧಿಗಳನ್ನು ಬೈಯುತ್ತಾ ಕೂರುವ ಬದಲು, ನಮ್ಮ ಮನೆ, ಏರಿಯಾ ಸುತ್ತಲೂ ಇರುವ ಒಂದೊಂದು ಗುಂಡಿಯನ್ನು ಮುಚ್ಚಿದರೆ ಸಾಕು. ಗುಂಡಿ ಮುಕ್ತ ಬೆಂಗಳೂರು ಮಾಡಬಹುದು. ಜನರು ಮನಸ್ಸು ಮಾಡಬೇಕಷ್ಟೇ. ಜೀವ ನಮ್ಮದೇ. ಹಾಗಾಗಿ ನಮ್ಮ ಜೀವವನ್ನು ನಾವೇ ಕಾಪಾಡಿಕೊಳ್ಳಬೇಕು. ಇದು ನಾನು ಕಂಡುಕೊಂಡ ಸತ್ಯ. ಈ ಸೂತ್ರವನ್ನು ಎಲ್ಲರೂ ಪಾಲಿಸಿದಾಗ ಬೆಂಗಳೂರಿನ‌ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಿಂದ‌ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತದೆ ಎಂದು ನಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜಿಮ್​ನಲ್ಲಿ ದೇಹ ದಂಡಿಸುತ್ತಿರುವ ಮಹೇಶ್ ಬಾಬು: ಹ್ಯಾಂಡ್​​ಸಮ್​ ಸ್ಟಾರ್​ ಫೋಟೋಗೆ ಫ್ಯಾನ್ಸ್​ ಫಿದಾ

ಇನ್ನು, ಕೆಲ ತಿಂಗಳಗಳ‌ ಹಿಂದೆ ನಟಿ‌ ಕಾರುಣ್ಯ ರಾಮ್ ರಾಜರಾಜೇಶ್ವರಿ ನಗರದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದರು. ಆ ಭಾಗದ ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿಸಿದ್ದರು. ಅಲ್ಲದೇ, ಕೋವಿಡ್ ವೇಳೆಯಲ್ಲೂ ಅವರು ಫುಡ್ ಕಿಟ್ ಹಂಚಿದ್ದರು. ಹೀಗೆ ತಮ್ಮ ಕೈಲಾದ ಸಾಮಾಜಿಕ ‌ಕೆಲಸಗಳನ್ನು ಮಾಡುತ್ತಿರುವ ಕಾರುಣ್ಯ ರಾಮ್ ಕೆಲಸಕ್ಕೆ ಸಿನಿ ಪ್ರೇಮಿಗಳು ಹಾಗೂ ಅಕ್ಕ ಪಕ್ಕದ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • Little things make great difference ! yes, team samakar has taken up pathole filling as a challenge …

Last Updated : Mar 2, 2023, 3:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.