ವಜ್ರಕಾಯ, ಕಿರಿಗೂರಿನ ಗಯ್ಯಾಳಿಗಳು ಹಾಗು ಪೆಟ್ರೋಮ್ಯಾಕ್ಸ್ ಅಂತಹ ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಐಡೆಂಟಿಟಿ ಹೊಂದಿರುವ ನಟಿ ಕಾರುಣ್ಯ ರಾಮ್. ಪೆಟ್ರೋಮ್ಯಾಕ್ಸ್ ಸಿನಿಮಾ ಬಳಿಕ ಪರಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕನ್ನಡತಿ ಕಾರುಣ್ಯ ರಾಮ್ ಅವರಿಗೆ ಹೈಬ್ರೀಡ್ ತಳಿಯ ಶ್ವಾನಗಳು ಅಂದ್ರೆ ಪಂಚಪ್ರಾಣ. ಇದೀಗ ಐದು ಲಕ್ಷ ರೂಪಾಯಿ ಬೆಲೆಯ ಶ್ವಾನವೊಂದನ್ನು ಕಾರುಣ್ಯ ರಾಮ್ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು, ಟಿಬೆಟಿಯನ್ ಮ್ಯಾಸ್ಟಿಫ್ ಎಂಬ ಶ್ವಾನವನ್ನು ಕಾರುಣ್ಯ ರಾಮ್ ಖರೀದಿಸಿದ್ದಾರೆ. ಇದು ಪ್ರಪಂಚದ ದುಬಾರಿ ಮೌಲ್ಯದ ಶ್ವಾನಗಳಲ್ಲಿ ಒಂದು. ಇದರ ಬೆಲೆ ಬರೋಬ್ಬರಿ 5 ಲಕ್ಷ ರೂಪಾಯಿ. ಸದ್ಯ ಈ ಶ್ವಾನಕ್ಕೆ ಬಘೀರ ಅಂತಾ ನಾಮಕರಣ ಮಾಡಲಾಗಿದೆ.
![Actress Karunya Ram bought a dog worth one lakh rupees](https://etvbharatimages.akamaized.net/etvbharat/prod-images/16946182_newssss.jpg)
ಬಾಲ್ಯದಿಂದಲೂ ಶ್ವಾನ ಪ್ರಿಯೆ ಆಗಿರುವ ಕಾರುಣ್ಯ ರಾಮ್ ಮನೆಯಲ್ಲಿ ಅಮೆರಿಕನ್ ಬುಲ್ಲಿ ಇದೆ. ಅದಕ್ಕೆ ಸಿಂಬ ಅಂತಾ ಹೆಸರು ಇಡಲಾಗಿದೆ. ಈಗ ಟಿಬೆಟಿಯನ್ ಮ್ಯಾಸ್ಟಿಫ್ ಶ್ವಾನವನ್ನು ಖರೀದಿಸಿದ್ದಾರೆ. ಕಾರುಣ್ಯ ರಾಮ್ ಸಿನಿಮಾ ಚಿತ್ರೀಕರಣ ಇಲ್ಲದ ಸಮಯದಲ್ಲಿ ಹೆಚ್ಚಾಗಿ ಈ ಶ್ವಾನಗಳ ಜೊತೆ ಕಾಲ ಕಳೆಯುತ್ತಾರೆ. ಅಷ್ಟೇ ಅಲ್ಲ, ನನ್ನ ಗುಡ್ ಫ್ರೆಂಡ್ ಈ ಬಘೀರ ಹಾಗು ಸಿಂಬಾ ಎಂದು ತಿಳಿಸಿದ್ದಾರೆ ನಟಿ ಕಾರುಣ್ಯ ರಾಮ್.
ಇದನ್ನೂ ಓದಿ: ಹೊಸ ಪ್ರತಿಭೆಗಳ '2nd ಲೈಫ್' ಟ್ರೈಲರ್ ರಿಲೀಸ್