ನೀರ್ದೋಸೆ ಬೆಡಗಿ ಹರಿಪ್ರಿಯಾ ಅವರು ನಟ ವಸಿಷ್ಠ ಸಿಂಹ ಜೊತೆ ಕೆಲ ದಿನಗಳ ಹಿಂದಷ್ಟೇ ಸಪ್ತಪದಿ ತುಳಿದಿದ್ದಾರೆ. ವೈವಾಹಿಕ ಜೀವನ ಆರಂಭಿಸಿರುವ ನಟಿ ಅಭಿಮಾನಿಗಳ ಜೊತೆ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕದಲ್ಲಿದ್ದಾರೆ. ನಿನ್ನೆಯಷ್ಟೇ ಹರಿಪ್ರಿಯಾ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಮಹಿಳಾ ದಿನಾಚರಣೆ ಮತ್ತು ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಕಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಜೊತೆಗೆ ತಮ್ಮ ನೆಚ್ಚಿನ ನಟಿಗೆ ಪ್ರತಿಯಾಗಿ ವಿಶ್ ಮಾಡಿದ್ದಾರೆ.
- " class="align-text-top noRightClick twitterSection" data="
">
ವಿಡಿಯೋದಲ್ಲಿ ಹರಿಪ್ರಿಯಾ ಸೀರೆ ಉಟ್ಟು ಸಾಂಪ್ರದಾಯಿಕ ಲುಕ್ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಫ್ಯಾನ್ಸ್ಗಳು 'ಗಾರ್ಜಿಯಸ್' ಎಂಬುದಾಗಿ ಕಮೆಂಟ್ ಮಾಡುತ್ತಿದ್ದು, ನಟಿಯ ಅಂದವನ್ನು ಹೊಗಳುತ್ತಿದ್ದಾರೆ. ಜೊತೆಗೆ ಕೆಂಪು ಹೃದಯದ ಎಮೋಜಿಯನ್ನು ಕಳುಹಿಸುತ್ತಿದ್ದಾರೆ. ಸೀತಾ ಮಾತೆ, ವಂಡರ್ಫುಲ್ ವುಮೆನ್ ಎಂದೆಲ್ಲಾ ಹರಿಪ್ರಿಯಾರನ್ನು ಅಭಿಮಾನಿಗಳು ಸಂಬೋಧಿಸುತ್ತಿದ್ದಾರೆ.
ಇದನ್ನೂ ಓದಿ: ಶರಿಯತ್ ಕಾನೂನು ಬಿಕ್ಕಟ್ಟಿಗೆ ಪರಿಹಾರ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಮರು ಮದುವೆಯಾದ ಸಿನಿಮಾ ನಟ
ಪ್ರೀತಿಸಿ ಮದುವೆಯಾದ ಸಿಂಹಪ್ರಿಯಾ: ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಜೋಡಿಗಳ ಸಾಲಿಗೆ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಸೇರಿದ್ದಾರೆ. ಜನವರಿ 26 ರಂದು ಸ್ಯಾಂಡಲ್ವುಡ್ ಲವ್ ಬರ್ಡ್ಸ್ಗಳಾಗಿ ಗುರುತಿಸಿಕೊಂಡಿದ್ದ ಬಹುಬೇಡಿಕೆ ತಾರಾ ಜೋಡಿ ಹಸೆಮಣೆ ಏರಿದ್ದರು. ಮೂರು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದರು. ಕಳೆದ ಮೂರು ವರ್ಷಗಳಿಂದ ಡೇಟಿಂಗ್ನಲ್ಲಿದ್ದ ಈ ಜೋಡಿ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಕಳೆದ ಡಿಸೆಂಬರ್ ತಿಂಗಳವರೆಗೆ ಜೊತೆಯಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
ಅಲ್ಲದೇ ಇವರಿಬ್ಬರು ಮದುವೆಯಾಗಬಹುದು ಎಂದು ಯಾರೂ ಕೂಡ ಊಹಿಸಿರಲಿಲ್ಲ. ಆದರೆ, ನಾಲ್ಕು ತಿಂಗಳ ಹಿಂದೆ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಖತ್ ಸುದ್ದಿ ಮಾಡಿತ್ತು. ದುಬೈ ಪ್ರವಾಸ ಮುಗಿಸಿ ಇಬ್ಬರು ಜೊತೆಯಾಗಿ ಕೈ ಕೈ ಹಿಡಿದುಕೊಂಡು ಮಾಧ್ಯಮದ ಮುಂದೆ ಕಾಣಿಸಿಕೊಂಡಿದ್ದರು. ಇವರಿಬ್ಬರ ಏರ್ಪೋರ್ಟ್ ಫೋಟೋ ಸಖತ್ ವೈರಲ್ ಆಗಿತ್ತು. ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಗೌಪ್ಯವಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು.
ಇದನ್ನೂ ಓದಿ: "ವಾವ್, ಫ್ಯಾಬ್ ಲುಕ್"- 'ಮ್ಯಾನ್' ಮೋಷನ್ ಪೋಸ್ಟರ್ ಹಂಚಿಕೊಂಡ ನಟಿ ಹನ್ಸಿಕಾ
ಅಲ್ಲದೇ ಸಿಂಹಪ್ರಿಯಾ ತಮ್ಮ ನಿಶ್ಚಿತಾರ್ಥದ ಫೋಟೋ ಮತ್ತು ಪ್ರೀತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸ್ವತಃ ಅವರೇ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು. ನಾವು ಪ್ರೀತಿಸುತ್ತಿದ್ದೆವು, ಈಗ ಮನೆಯವರ ಒಪ್ಪಿಗೆಯಂತೆ ಅರೇಂಜ್ ಮ್ಯಾರೇಜ್ ಆಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಕೊನೆಗೂ ಜನವರಿ 26 ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ನಡೆದಿದ್ದು, ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿತು. ಆತ್ಮೀಯರು, ಕುಟುಂಬಸ್ಥರು, ಸೆಲೆಬ್ರಿಟಿಗಳು ಮದುವೆ ಫಂಕ್ಷನ್ನಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ 2 ದಾಖಲೆ ಸರಿಗಟ್ಟಲಿದೆ ಕಬ್ಜ ಸಿನಿಮಾ ಬಿಡುಗಡೆ.. 4000 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಸಂಭವ