ಸ್ಯಾಂಡಲ್ವುಡ್ನಲ್ಲೀಗ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಲವ್ ಸ್ಟೋರಿಯದ್ದೇ ಮಾತು. ದುಬೈ ಪ್ರವಾಸ ಮುಗಿಸಿ ವಾಪಸ್ ಕೈ ಕೈ ಹಿಡಿದು ಬಂದದ್ದೇ ತಡ ಇವರಿಬ್ಬರ ಪ್ರೇಮಾಂಕುರದ ಚರ್ಚೆ ಆರಂಭಗೊಂಡಿದೆ. ಇದೀಗ ಹರಿಪ್ರಿಯಾ ತಮ್ಮ ನಿಶ್ಚಿತಾರ್ಥದ ಸುಂದರ ಕ್ಷಣಗಳನ್ನು ಹಂಚಿಕೊಂಡು ಶೀಘ್ರದಲ್ಲೇ ಮದುವೆ ಇದೆ ಎಂಬ ಸುಳಿವು ಕೊಟ್ಟಿದ್ದಾರೆ.
- " class="align-text-top noRightClick twitterSection" data="
">
ಕೆಲ ದಿನಗಳ ಹಿಂದೆ ದುಬೈನಿಂದ ವಾಪಸ್ ಬಂದ ಈ ಜೋಡಿಯ ಫೋಟೋ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿತ್ತು. ಬಳಿಕ ಇದ್ದಕ್ಕಿದ್ದಂತೆ ನಿಶ್ಚಿತಾರ್ಥದ ಫೋಟೋಗಳು ಸಹ ವೈರಲ್ ಆದವು. ಮಾರನೇ ದಿನ ಹರಿಪ್ರಿಯಾ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಊಹಾಪೋಹಗಳಿಗೆ ತುಪ್ಪ ಸುರಿದಂತಿತ್ತು.

ನಂತರ ನಟ ವಸಿಷ್ಠ ಸಿಂಹ ಅವರೊಂದಿಗೆ ಸ್ನೇಹ ಹೇಗಾಯಿತು?, ಸ್ನೇಹ ಸಂಬಂಧದಲ್ಲಿ ಕ್ರಿಸ್ಟಲ್ ಎಂಬ ನಾಯಿ ಮರಿಯ ಪಾತ್ರ ಎಷ್ಟಿದೆ ಎಂಬುದರ ಕುರಿತು ಹರಿಪ್ರಿಯಾ ಮಾಹಿತಿ ಹಂಚಿಕೊಂಡಿದ್ದರು. ಆದರೆ ನಾವಿಬ್ಬರು ಪ್ರೇಮಿಗಳು ಎಂದು ಎಲ್ಲೂ ಹೇಳಿಕೊಂಡಿಲ್ಲ ಈ ಜೋಡಿ. ಇದೀಗ ನಿಶ್ಚಿತಾರ್ಥ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದು, ಆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಅಗ್ರಸ್ಥಾನ ಪಡೆದಿವೆ.

ಇದನ್ನೂ ಓದಿ: ಹೆಸರಿಡದ ಚಿತ್ರಕ್ಕೆ ಧ್ವನಿ ಕೊಟ್ಟ ಸ್ಯಾಂಡಲ್ವುಡ್ ಲವ್ಬರ್ಡ್ಸ್