ETV Bharat / entertainment

ಹನ್ಸಿಕಾ ಮದುವೆ ಶಾಸ್ತ್ರಗಳು ಪ್ರಾರಂಭ: ಐಷಾರಾಮಿ ಹೋಟೆಲ್ ಆದ ಪುರಾತನ ಕೋಟೆ

ನಟಿ ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಕಥರಿಯಾ ಅವರ ಮದುವೆ ಶಾಸ್ತ್ರಗಳು ಪ್ರಾರಂಭವಾಗಿವೆ. ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯುತ್ತಿದ್ದು ಆತ್ಮೀಯರು ಸೇರಿದಂತೆ ಕುಟುಂಬಸ್ಥರು ಈಗಾಗಲೇ ಜೈಪುರ ತಲುಪಿದ್ದಾರೆ. ಮದುವೆಗೂ ಮುನ್ನ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು ಈ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಾಕ್ಷಿ ಆಗಿದ್ದಾರೆ. ಡಿಸೆಂಬರ್ 4ರಂದು ಹನ್ಸಿಕಾ ಮೋಟ್ವಾನಿ ಕೊರಳಿಗೆ ಸೊಹೇಲ್ ಕಥರಿಯಾ ಮಾಂಗಲ್ಯ ಧಾರಣೆ ಮಾಡಲಾಗಿದ್ದಾರೆ.

Actress Hansika Motwani Royal Wedding
ಮೆಹಂದಿ ಹಚ್ಚಿಕೊಳ್ಳುತ್ತಿರುವ ನಟಿ ಹನ್ಸಿಕಾ
author img

By

Published : Dec 2, 2022, 6:38 PM IST

ಜೈಪುರ: ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಮದುವೆಗೆ ಭಾರಿ ಸಿದ್ಧತೆ ನಡೆದಿದೆ. ಉದ್ಯಮಿ ಸೊಹೇಲ್ ಕಥರಿಯಾ ಜೊತೆ ಹಸೆಮಣೆ ಏರಲಿದ್ದು ಮೆಹಂದಿ ಸೇರಿದಂತೆ ಬಗೆ ಬಗೆಯ ಕಾರ್ಯಕ್ರಮಗಳು ನಡೆದಿವೆ. 450 ವರ್ಷಗಳಷ್ಟು ಹಳೆಯದಾದ ಜೈಪುರದ ಪುರಾತನ ಮಂಡೋಟಾ ಅರಮನೆ ಅವರ ಮದುವೆಗೆ ಸಾಕ್ಷಿಯಾಗುಲಿದ್ದು ಸದ್ಯ ಲೈಟಿಂಗ್ಸ್​ನಿಂದ ಸಿಂಗಾರಗಳಿಸಲಾಗಿದೆ. ಕೆಂಪು ಡ್ರೆಸ್‌ ಧರಿಸಿದ್ದ ಅವರು ಸೋಫಾದ ಮೇಲೆ ಕುಳಿತು ಮೆಹಂದಿ ಹಚ್ಚಿಕೊಳ್ಳುತ್ತಿರುವ ಫೋಟೋ ಜಾಲತಾಣದಲ್ಲಿ ಜಾಗ ಪಡೆದಿದೆ. ಈ ವೇಳೆ, ಅವರು ಚಿತ್ರವೊಂದರ ಹಾಡಿಗೆ ನೃತ್ಯ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಹಾಡಿನಲ್ಲಿ ಭಾವಿ ಪತಿ ಸೊಹೈಲ್ ಕೂಡ ಇದ್ದಾರೆ.

ಸೊಹೈಲ್ ಪೀಚ್ ಬಣ್ಣದ ಪಠಾನಿ ಸೂಟ್ ಧರಿಸಿದ್ದರು. ಹಸೆಮಣೆ ಏರುವ ಮುನ್ನ ಈ ಸುಂದರ ಘಳಿಗೆ ಕಂಡು ಇಬ್ಬರು ಮುಗುಳು ನಗೆ ಬೀರಿದರು. ನವೆಂಬರ್ 20 ರಂದೇ ಮುಂಡೋಟಾ ಅರಮನೆಗೆ ಬಂದಿರುವ ಈ ತಾರಾ ಜೋಡಿ ಇಲ್ಲಿಯವರೆಗೆ ಬಗೆ ಬಗೆಯ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದೆ. ಊಟ - ಉಪಚಾರದಿಂದ ಹಿಡಿದು ಫೋಟೋಶೂಟ್​ ವರೆಗೂ ಹನ್ಸಿಕಾ ಅಪ್​ಡೇಟ್​ ಮಾಡುತ್ತಲೇ ಬಂದಿದ್ದಾರೆ. ಇಂದು (ಡಿಸೆಂಬರ್ 2) ರಾತ್ರಿಯಿಂದನೇ ಮದುವೆ ಸಮಾರಂಭ ಪ್ರಾರಂಭವಾಗಲಿದ್ದು ಡಿಸೆಂಬರ್ 3ರಿಂದ ಅರಿಶಿಣ ಶಾಸ್ತ್ರದ ಸಂಭ್ರಮ ನಡೆಯಲಿದೆ. ಡಿಸೆಂಬರ್ 4ರಂದು ಹನ್ಸಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ ಸೊಹೇಲ್.

Actress Hansika Motwani Royal Wedding
ಐಷಾರಾಮಿ ಹೋಟೆಲ್ ಆದ ಪುರಾತನ ಕೋಟೆ

ಐಷಾರಾಮಿ ಹೋಟೆಲ್ ಆದ ಯುದ್ಧದ ಕೋಟೆ: ಮುಂಡೋಟಾ ಕೋಟೆಯು ಈ ಮೊದಲು ಯುದ್ಧದ ಕೋಟೆಯಾಗಿದ್ದು, ಇದೀಗ ಐಷಾರಾಮಿ ಹೋಟೆಲ್ ಆಗಿ ಕಂಗೊಳಿಸುತ್ತಿದೆ. ಈ ಅರಮನೆಯನ್ನು ಇತ್ತೀಚೆಗೆ ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು ಒಂದು ಭಾಗವು ಸೂಟ್ ಮತ್ತು ಒಂದು ಭಾಗವು ಯುದ್ಧದ ಕೋಟೆಯಾಗಿದೆ. ಈ ಕೋಟೆಯಲ್ಲಿ ಸುಮಾರು ನಾಲ್ಕೂವರೆ ನೂರು ವರ್ಷಗಳ ಹಿಂದೆ ನರುಕ ರಜಪೂತ ರಾಜರು ನೆಲೆಸಿದ್ದರು ಎಂದು ಹೇಳಲಾಗುತ್ತದೆ.

Actress Hansika Motwani Royal Wedding
ಐಷಾರಾಮಿ ಹೋಟೆಲ್ ಆದ ಪುರಾತನ ಕೋಟೆ

ಸದ್ಯ ಅವರ ತಲೆಮಾರು ಈ ಅರಮನೆಯನ್ನು ಕಾಪಾಡಿಕೊಂಡು ಬಂದಿದೆ. ಅಲ್ಲಿ ರಜಪೂತ ರಾಜರ ನೋಟ, ಅವರ ವೈಭವ, ಶೌರ್ಯ ಎಲ್ಲವನ್ನೂ ನೋಡಬಹುದು. ಈ ಅರಮನೆಯಲ್ಲಿ ಅತ್ಯುತ್ತಮ ಕೊಠಡಿಗಳ ಜೊತೆಗೆ ಈಜುಕೊಳದ ಸೌಲಭ್ಯಗಳೂ ಲಭ್ಯವಿವೆ. ಡೆಸ್ಟಿನೇಶನ್ ವೆಡ್ಡಿಂಗ್‌ಗೆ ಈ ಅರಮನೆ ಹೆಸರುವಾಸಿಯಾಗಿದೆ. ಇಷ್ಟು ಹಳೆಯದಾಗಿದ್ದರೂ ಈ ಕೋಟೆಯ ಮೂಲ ರಚನೆಯು ಇಂದಿಗೂ ಅಷ್ಟೇ ಆಕರ್ಷಕವಾಗಿ ಕಾಣುತ್ತದೆ.

Actress Hansika Motwani Royal Wedding
ಐಷಾರಾಮಿ ಹೋಟೆಲ್ ಆದ ಪುರಾತನ ಕೋಟೆ

ನೋಡಲು ಸುಂದರವಾಗಿ ಕಾಣುವ ಕೋಟೆಯಲ್ಲಿ ಕುದುರೆ ಲಾಯವಿದ್ದು ಕುದುರೆಗಳನ್ನು ಸಹ ಇಡಲಾಗುತ್ತದೆ. ಈ ಸೂಟ್‌ನ ಬಾಡಿಗೆ ಲಕ್ಷ ರೂಪಾಯಿಗಳಲ್ಲಿದೆ. ಅದ್ಧೂರಿ, ಐಷಾರಾಮಿ, ಪುರಾತನಕ್ಕೆ ಹೆಸರುವಾಸಿಯಾಗಿದ್ದು, ಈ ಕೋಟೆಯಲ್ಲಿ ನೀವು ಕುದುರೆ ಸವಾರಿ ಮಾಡಲು ಬಯಸಿದರೆ, ಅದಕ್ಕೂ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ, ಈ ಹೆರಿಟೇಜ್ ಹೋಟೆಲ್‌ನಲ್ಲಿ ಆಧುನಿಕ ರೀತಿಯ ರಾಯಲ್ ಲೈಫ್​ ಕಾಣಸಿಗುತ್ತದೆ.

Actress Hansika Motwani Royal Wedding
ಐಷಾರಾಮಿ ಹೋಟೆಲ್ ಆದ ಪುರಾತನ ಕೋಟೆ

ಕೋಟೆಯ ಇತಿಹಾಸ ವೈಭವಯುತವಾಗಿದೆ: 450ಕ್ಕೂ ಹೆಚ್ಚು ಸುದೀರ್ಘ ಇತಿಹಾಸ ಹೊಂದಿರುವ ಈ ಕೋಟೆ ಹಲವು ಪರಂಪರೆಯನ್ನು ಹೇಳುತ್ತದೆ. 14ನೇ ಶತಮಾನದ ಆರಂಭದಲ್ಲಿ ನರುಕ ರಜಪೂತರು ಕಲ್ವಾಡ ಎಂಬ ಗ್ರಾಮದ ಸಮೀಪ ಈ ಕೋಟೆಯನ್ನು ನಿರ್ಮಿಸಿದರು ಅನ್ನೋದು ಇತಿಹಾಸಕಾರರ ಮಾತು. ಈ ಕೋಟೆ ವಾಸ್ತುಶಿಲ್ಪದ ಅಪರೂಪದ ಮಾದರಿಗಳಲ್ಲಿ ಒಂದಾಗಿದ್ದು ಸದ್ಯ ಇಂತಹ ಅದ್ಧೂರಿ ಮದುವೆಗಳಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ ಎಂಬ ಮಾತಿದೆ.

ಇದನ್ನೂ ಓದಿ: ಹರಿಪ್ರಿಯಾ - ವಸಿಷ್ಠ ಸಿಂಹ ನಿಶ್ಚಿತಾರ್ಥ.. ಆಪ್ತರ ಸಮ್ಮುಖದಲ್ಲಿ ನಡೆಯಿತು ಸಮಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.