ಕಿರುತೆರೆ ನಟಿ ದೇವೊಲೀನಾ ಭಟ್ಟಾಚಾರ್ಜಿ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಮದುವೆ ಬಗ್ಗೆ ಈವರೆಗೂ ನಟಿ ಯಾವ ಹೇಳಿಕೆಯನ್ನೂ ನೀಡಿಲ್ಲ. ಪತಿ ಯಾರೆಂಬುದನ್ನು ಸ್ವತಃ ನಟಿ ದೇವೊಲೀನಾ ಭಟ್ಟಾಚಾರ್ಜಿ ಅವರೇ ಅಧಿಕೃತವಾಗಿ ಖಚಿತಪಡಿಸಬೇಕಿದೆ.
ಗೆಳೆಯ, ನಟ ವಿಶಾಲ್ ಸಿಂಗ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ವರದಿಯಾಗಿತ್ತು. ಕಳೆದ ದಿನ ಮದುವೆಗೂ ಮುನ್ನದ ಶಾಸ್ತ್ರಗಳ ಫೋಟೋ ಹಂಚಿಕೊಂಡಿದ್ದರು. ಪ್ರತೀ ಶಾಸ್ತ್ರದಲ್ಲೂ ವಿಶಾಲ್ ಸಿಂಗ್ ಕಾಣಿಸಿಕೊಂಡಿದ್ದರು. ವಿಶಾಲ್ ಸಿಂಗ್ ಅವರೇ ವರ ಎಂದು ನೆಟ್ಟಿಗರು ಭಾವಿಸಿದ್ದರು. ಇಂದು ಕೂಡ ವಧುವಿನಂತೆ ತಯಾರಾದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಒಂದಾದ ಮೇಲೊಂದರಂತೆ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದು, ಚಿತ್ರವೊಂದರಲ್ಲಿ ಅವರು ಮಾಂಗಲ್ಯ ಸರ ಧರಿಸಿರೋದನ್ನು ನಾವು ಕಾಣಬಹುದು. ಮಾಂಗಲ್ಯ ಅವರ ಮದುವೆಗೆ ಸಾಕ್ಷಿಯಾಗಿದ್ದು, ಈ ಬಗ್ಗೆ ಸ್ವತಃ ಅವರೇ ಖಚಿತಪಡಿಸಬೇಕಿದೆ.
ನಟ ವಿಶಾಲ್ ಸಿಂಗ್ ಅವರು ದೇವೊಲೀನಾ ಭಟ್ಟಾಚಾರ್ಜಿ ಅವರ ಮದುವೆಯ ಪ್ರತೀ ಶಾಸ್ತ್ರಗಳಲ್ಲೂ ಕಾಣಿಸಿಕೊಂಡು ವಧುವಿನ ಕೈ ಹಿಡಿದು ಕರೆದುಕೊಂಡು ಬರುತ್ತಿರುವ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಗಾಗಿ ನಟ ವಿಶಾಲ್ ಸಿಂಗ್ ಅವರೊಂದಿಗೆ ಮದುವೆ ಆಗಿದ್ದಾರೆಂದು ನಂಬಲಾಗಿತ್ತು. ಆದ್ರೆ ಅಸಲಿಯತ್ತೇ ಬೇರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಸಪ್ತಪದಿ ತುಳಿದ ದೇವೊಲೀನಾ ಭಟ್ಟಾಚಾರ್ಜಿ- ವಿಶಾಲ್ ಸಿಂಗ್
ವರದಿಗಳ ಪ್ರಕಾರ ದೇವೊಲೀನಾ ಅವರನ್ನು ವಿವಾಹ ಆಗಿರುವ ವ್ಯಕ್ತಿ ಅವರ ಜಿಮ್ ತರಬೇತುದಾರ ಎಂದು ಹೇಳಲಾಗಿದೆ. ಇದನ್ನು ಅವರ ಆಪ್ತ ಮೂಲಗಳು ಖಚಿತ ಪಡಿಸಿವೆ. ಆದರೆ, ಅವರ ಹೆಸರನ್ನಾಗಲಿ, ಮದುವೆ ಬಗ್ಗೆ, ಪತಿಯ ಬಗ್ಗೆ ಆಗಲಿ ನಟಿ ಇನ್ನೂ ಯಾವ ಹೇಳಿಕೆಯನ್ನೂ ನೀಡಿಲ್ಲ. ಸ್ವತಃ ದೇವೊಲೀನಾ ಈ ಬಗ್ಗೆ ಹೇಳಿಕೆ ನೀಡುವವರೆಗೂ ನಾವು ಕಾಯಬೇಕಿದೆ.