ETV Bharat / entertainment

ಬ್ಲ್ಯಾಕ್​ ಕಾಸ್ಟ್ಯೂಮ್​​​​​ನಲ್ಲಿ ಪತಿ ಜೊತೆ ಸ್ಟನ್ನಿಂಗ್​ ಫೋಟೋ ಹಂಚಿಕೊಂಡ ನಟಿ ದೀಪಿಕಾ - ಕಾಫಿ ವಿತ್​ ಕರಣ್​

ಕಾಫಿ ವಿತ್​ ಕರಣ್​ ಸೀಸನ್​ 8ರ ಮೊದಲ ಸೀಸನ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ದೀಪ್​ವೀರ್​ ಜೋಡಿ. ಇದೀಗ ಫೋಟೋವೊಂದನ್ನು ಹಂಚಿಕೊಂಡು ಸದ್ದು ಮಾಡುತ್ತಿದೆ.

Ranveer and Deepika Padukone couple
ರಣವೀರ್​ ಹಾಗೂ ದೀಪಿಕಾ ಪಡುಕೋಣೆ ಜೋಡಿ
author img

By ETV Bharat Karnataka Team

Published : Oct 25, 2023, 2:08 PM IST

ಬಾಲಿವುಡ್​ ಕ್ಯೂಟ್​ ಕಪಲ್​ ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್​ ಜೋಡಿ ಕರಣ್​ ಜೋಹರ್​ ಹೋಸ್ಟ್​ ಮಾಡುತ್ತಿರುವ ಪ್ರಸಿದ್ಧ ಟಾಕ್​ ಶೋ ಕಾಫಿ ವಿತ್​ ಕರಣ್​ ಸೀಸನ್​ 8 ರಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. 2018 ರಲ್ಲಿ ಹಸೆಮಣೆ ಏರಿದ ದೀಪ್​ವೀರ್​ ಜೋಡಿಯ ತಮಾಷೆಯ ಸಂವಾದವನ್ನು ಅಭಿಮಾನಿಗಳು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಸೀಸನ್​ 8ರ ಮೊದಲ ಸಂಚಿಕೆಯಲ್ಲಿ ಈ ಜೋಡಿ ಭಾಗವಹಿಸುತ್ತಿದ್ದು, ಈ ಸೀಸನ್​ನ ಮೊದಲ ಸಂಚಿಕೆ ಗುರುವಾರ ಮಧ್ಯರಾತ್ರಿ ಪ್ರಸಾರವಾಗಲಿದೆ.

ಇಂದು ತಮ್ಮ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ದೀಪಿಕಾ ಪಡುಕೋಣೆ ಪತಿ ರಣವೀರ್​ ಜೊತೆಗಿರುವ ಸ್ಟನ್ನಿಂಗ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಲವ್ಲಿ ಕಪಲ್​ ಕ್ಯೂಟ್​ ಪೋಟೋಗಳನ್ನು ನೋಡಿ ಅಭಿಮಾನಿಗಳು ಮಂತ್ರಮುಗ್ಧರಾಗಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್​ ಒಬ್ಬರಿಗೊಬ್ಬರು ಹತ್ತಿರ ನಿಂತು, ಕಣ್ಣುಗಳನ್ನು ಮುಚ್ಚಿ, ಪ್ರೀತಿಯಿಂದ ಮೂಗುಗಳನ್ನು ಸ್ಪರ್ಶಿಸುತ್ತಿರುವುದು ಕಾಣಬಹುದು. ಪರಸ್ಪರ ಮೃದುವಾಗಿ ಕೈಗಳನ್ನು ಹಿಡಿದು, ಸಂತೋಷದ ಮುಗುಳುನಗೆಯೊಂದಿಗೆ ಆ ಕ್ಷಣವನ್ನು ಎಂಜಾಯ್​ ಮಾಡುತ್ತಿರುವ ಜೋಡಿಯನ್ನು ಕಂಡು ಅಭಿಮಾನಿಗಳು ವಾಹ್​ ಎಂದಿದ್ದಾರೆ.

ನಟ ರಣವೀರ್​ ಕಪ್ಪು ಸ್ಯಾಟಿನ್​ ಧರಿಸಿದ್ದು, ಕುತ್ತಿಗೆಯ ಸುತ್ತಲೂ ಸ್ಕಾರ್ಫ್​ ಹಾಕಿಕೊಂಡಿದ್ದಾರೆ. ದೀಪಿಕಾ ಕಪ್ಪು ಬಾಡಿಕಾನ್​ ಟೀ ಉದ್ದದ ಉಡುಗೆಯಲ್ಲಿ ಮಿಂಚಿದ್ದಾರೆ. ಉಡುಗೆಗೆ ಒಪ್ಪುವಂತಹ ಕನಿಷ್ಠ ಆಭರಣಗಳನ್ನು ಧರಿಸಿದ್ದಾರೆ.

ಓಂ ಶಾಂತಿ ಓಂ ಚಿತ್ರದ ನಟಿ ದೀಪಿಕಾ ತಮ್ಮ ಪ್ರೀತಿಯ ಪತಿ ರಣವೀರ್​ ಅವರನ್ನು ಕ್ಯಾಪ್ಷನ್​ನಲ್ಲಿ ಟ್ಯಾಗ್​ ಮಾಡಿದ್ದಾರೆ. ಜೊತೆಗೆ ಕ್ಯಾಪ್ಷನ್​ನಲ್ಲಿ ಕಾಫಿ ಕಪ್​ ಇಮೋಜಿ ಕೂಡ ಹಾಕಿದ್ದು, ಕಾಫಿ ವಿತ್​ ಕರಣ್​ ಮುಂದಿನ ಸಂಚಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಸುಳಿವು ನೀಡಿದ್ದಾರೆ.

ಇದರ ಮಧ್ಯೆ ಸಿನಿಮಾಗಳ ಬಗ್ಗೆ ನೋಡುವುದಾದರೆ ರಣವೀರ್​ ಸಿಂಗ್​ ಹಾಗೂ ದೀಪಿಕಾ ಪಡುಕೋಣೆ ಶೀಘ್ರದಲ್ಲೇ ರೋಹಿತ್​ ಶೆಟ್ಟಿ ಅವರ ಮುಂಬರುವ ಚಿತ್ರ ಸಿಂಗಮ್​ ಎಗೇನ್​ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗಷ್ಟೇ ಶಕ್ತಿ ಶೆಟ್ಟಿ ಎಂಬ ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದು, ಅದರ ಫಸ್ಟ್​ ಲುಕ್​ ಸಾಮಾಜಿಕ ಜಾಲತಾಣದಲ್ಲಿ ಅನಾವರಣಗೊಂಡಿತ್ತು. ಈ ಸಿನಿಮಾದ್ಲಿ ಅಜಯ್​ ದೇವಗನ್​, ಟೈಗರ್​ ಶ್ರಾಫ್​ ಹಾಗೂ ಅಕ್ಷಯ್​ ಕುಮಾರ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ ದೀಪಿಕಾ ಹೃತಿಕ್​ ರೋಷನ್​ ಅಭಿನಯದ ಫೈಟರ್​ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.

ಇದನ್ನೂ ಓದಿ : ಕೆಂಪು ಬಣ್ಣದ ಲ್ಯಾಂಬೋರ್ಗಿನಿ ಕಾರು ಖರೀದಿಸಿದ ನಟಿ ಶ್ರದ್ಧಾ ಕಪೂರ್​.. ಬೆಲೆ ಎಷ್ಟು ಗೊತ್ತಾ ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.