ಕಳೆದ ಕೆಲ ದಿನಗಳಿಂದ ಬಾಲಿವುಡ್ನ ತಾರಾ ದಂಪತಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳು ಹರಿದಾಡುತ್ತಲೇ ಇವೆ. ಇದಕ್ಕೆ ಈ ಜೋಡಿ ಇನ್ಸ್ಟಾಗ್ರಾಮ್ನಲ್ಲಿ ಫ್ಲರ್ಟಿ ಚಾಟ್ ಮೂಲಕ ತೆರೆ ಎಳೆದಿದ್ದರು. ಅಲ್ಲದೇ ನಟ ರಣ್ವೀರ್ ಸಿಂಗ್ ಒಮ್ಮೆ ತಾವು ಚೆನ್ನಾಗಿದ್ದೇವೆ ಎಂಬುದನ್ನು ತಿಳಿಸಿದ್ದರು. ಇದೀಗ ನಟಿ ದೀಪಿಕಾ ಪಡುಕೋಣೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ತಾವಿಬ್ಬರೂ ಖುಷಿಯಾಗಿಯೇ, ಸುಖ ಸಂಸಾರ ನಡೆಸುತ್ತಿದ್ದೇವೆ ಎಂಬುದನ್ನು ಸ್ಪಷ್ಟಪಡಿಸಿ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ನನ್ನ ಪತಿ ರಣ್ವೀರ್ ಸಿಂಗ್ ಸಂಗೀತೋತ್ಸವದಲ್ಲಿ ಭಾಗಿಯಾಗಿದ್ದರು. ಇದೀಗ ವಾಪಸ್ ಮನೆಗೆ ಬಂದಿದ್ದು, ನನ್ನನ್ನು ನೋಡಿ ಸಂತಸಗೊಂಡಿದ್ದಾರೆ ಎಂದು ದೀಪಿಕಾ ಹೇಳಿದ್ದಾರೆ. ರಣವೀರ್, ನಾನು ಕೆಲಸಗಳಲ್ಲಿ ಮಗ್ನರಾಗಿದ್ದೇವೆ. ಹೀಗಾಗಿ ಇಬ್ಬರಿಗೂ ಒಟ್ಟಿಗೆ ಸಮಯ ಕಳೆಯಲು ಅವಕಾಶ ಸಿಗುತ್ತಿಲ್ಲ ಎಂದು ದೀಪಿಕಾ ಈ ಹಿಂದೆ ಹೇಳಿದ್ದರು. ಇನ್ನೂ ದೀಪಿಕಾ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದರು. ರಣವೀರ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅಬುಧಾಬಿಯಲ್ಲಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಕೆಲ ಸಮಯದ ಹಿಂದೆ ದೀಪ್ವೀರ್ ದಂಪತಿ ನಡುವೆ ಬಿರುಕು ವದಂತಿ ಹಬ್ಬಿತ್ತು. ದೀಪಿಕಾ ಮತ್ತು ರಣವೀರ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಉಮೈರ್ ಸಂಧು ಟ್ವೀಟ್ ಇದಕ್ಕೆ ಕಾರಣ. ಈ ಟ್ವೀಟ್ ನಂತರ ದೀಪ್ವೀರ್ ದಂಪತಿ ನಡುವೆ ಬಿರುಕು ವದಂತಿ ಜೋರಾಗಿಯೇ ಹಬ್ಬಿತು.
ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಈ ಕುರಿತು ರಣವೀರ್ ಸಿಂಗ್ ಅವರಿಗೆ ನೇರವಾಗಿ ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ 'ನಾನು ಮತ್ತು ದೀಪಿಕಾ ಪಡುಕೋಣೆ 2012ರಲ್ಲಿ ಡೇಟಿಂಗ್ ಮಾಡಲು ಆರಂಭಿಸಿದೆವು. 2022ಕ್ಕೆ 10 ವರ್ಷ ಆಯ್ತು, ಎಲ್ಲವೂ ಸರಿ ಇದೆ, ಆ ದೇವರಿಗೆ ಧನ್ಯವಾದ' ಎಂದು ಹೇಳುವ ಮೂಲಕ ತಾವಿಬ್ಬರೂ ಇನ್ನೂ ಅನ್ಯೋನ್ಯವಾಗಿಯೇ ಇದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದರು.
ಇತ್ತೀಚೆಗೆ ಇನ್ಸ್ಟಾಗ್ರಾಮ್ನಲ್ಲಿ ಪಿಂಕ್ ಲುಕ್ ಅವತಾರದ ಚಿತ್ರಗಳನ್ನು ನಟ ರಣ್ವೀರ್ ಸಿಂಗ್ ಅವರು ಶೇರ್ ಮಾಡಿದ್ದರು. ಪತ್ನಿ ದೀಪಿಕಾ "Edible" (ಖಾದ್ಯ, ತಿನ್ನಲು ಯೋಗ್ಯ) ಎಂದು ಕಾಮೆಂಟ್ ಹಾಕಿದ್ದರು. ರಣವೀರ್ ಅವರು ದೀಪಿಕಾಗೆ ಕಿಸ್ ಇಮೋಜಿ ಮೂಲಕ ಉತ್ತರಿಸಿದ್ದಾರೆ. ಈ ಜೋಡಿ ಎಂದಿನಂತೆ ಖುಷಿಯಾಗಿ ಇದೆ ಎನ್ನುವುದಕ್ಕೆ ಈ ಇನ್ಸ್ಟಾಗ್ರಾಮ್ ಫ್ಲರ್ಟಿ ಚಾಟ್ ಸಂಭಾಷಣೆ ಸಾಕ್ಷಿಯಾಗಿತ್ತು.
ಈ ವರ್ಷ ರಣವೀರ್ ಸಿಂಗ್ ಫಿಲ್ಮ್ಫೇರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅದನ್ನು ಸ್ವೀಕರಿಸುವಾಗ ವೇದಿಕೆ ಮೇಲೆ ದೀಪಿಕಾ ಅವರನ್ನೂ ಕರೆದರು. 'ನನ್ನ ಯಶಸ್ಸಿನ ಗುಟ್ಟು ನನ್ನ ಪತ್ನಿ ದೀಪಿಕಾ ಪಡುಕೋಣೆ' ಎಂದು ರಣವೀರ್ ಹೇಳಿದ್ದ ವಿಡಿಯೋ ತುಣುಕು ವೈರಲ್ ಆಗಿತ್ತು. ಇದಲ್ಲದೇ ಬಹುತೇಕ ವೇದಿಕೆಗಳಲ್ಲಿ ರಣ್ವೀರ್ ಅವರು ದೀಪಿಕಾ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದಾರೆ.
-
Meanwhile: Ranveer about Deepika in today’s event #DeepikaPadukone #RanveerSingh #Deepveer https://t.co/Jn6vfb3ZKs pic.twitter.com/MTS7GfzpjZ
— . (@rs____321) September 27, 2022 " class="align-text-top noRightClick twitterSection" data="
">Meanwhile: Ranveer about Deepika in today’s event #DeepikaPadukone #RanveerSingh #Deepveer https://t.co/Jn6vfb3ZKs pic.twitter.com/MTS7GfzpjZ
— . (@rs____321) September 27, 2022Meanwhile: Ranveer about Deepika in today’s event #DeepikaPadukone #RanveerSingh #Deepveer https://t.co/Jn6vfb3ZKs pic.twitter.com/MTS7GfzpjZ
— . (@rs____321) September 27, 2022
ಇನ್ನೂ ಸಿನಿಮಾ ವಿಚಾರಕ್ಕೆ ಬಂದರೆ ರಣವೀರ್, ರೋಹಿತ್ ಶೆಟ್ಟಿ ಅವರ ಸರ್ಕಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೀಪಿಕಾ ಅವರು ಶಾರೂಕ್ ಹಾಗೂ ಹೃತಿಕ್ ರೋಷನ್ ಜೊತೆಗಿನ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಇದನ್ನೂ ಓದಿ: ದೀಪ್ವೀರ್ ದಾಂಪತ್ಯದಲ್ಲಿ ಬಿರುಕು ವದಂತಿ.. ಮೌನ ಮುರಿದ ನಟ ರಣ್ವೀರ್ ಸಿಂಗ್
ದೀಪ್ವೀರ್ ಜೋಡಿ ನವೆಂಬರ್ 14, 2018 ರಂದು ಮದುವೆ ಆಗಿ ಸುಖ ಸಂಸಾರ ಸಡೆಸುತ್ತಿದೆ. ಆದರೆ ಇತ್ತೀಚೆಗೆ ಅವರ ಜೀವನದಲ್ಲಿ ಬಿರುಕು ಮೂಡಿದೆ ಎಂದು ಸುದ್ದಿಯಾಗಿತ್ತು. ಇದಕ್ಕೆ ಈ ಜೋಡಿ ಪತ್ಯಕ್ಷ ಮತ್ತು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದರೂ ಗುಸುಗುಸು ಕಡಿಮೆ ಆಗಿರಲಿಲ್ಲ. ಇದೀಗ ನಟಿ ದೀಪಿಕಾ ಪಡುಕೋಣೆ ತಾವು ಪ್ರೀತಿಯಲ್ಲೇ ಇದ್ದೇವೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.