ETV Bharat / entertainment

ಬೆಂಗಳೂರಿಗೆ ಬಂದಾಗ ಪುನೀತ್ ಅಣ್ಣನನ್ನು ಭೇಟಿ ಮಾಡುತ್ತಿದ್ದೆ: ವಿಜಯ್ ದೇವರಕೊಂಡ - ಲೈಗರ್ ಚಿತ್ರದ ಪ್ರಚಾರ

ಲೈಗರ್ ಚಿತ್ರದ ಪ್ರಚಾರ ಸಲುವಾಗಿ ನಟ ವಿಜಯ್ ದೇವರಕೊಂಡ, ನಟಿ ಅನನ್ಯಾ ಪಾಂಡೆ, ಖಳ ನಟನಾಗಿ ನಟಿಸಿರೋ ವಿಶ್ ರೆಡ್ಡಿ ಬೆಂಗಳೂರಿಗೆ ಆಗಮಿಸಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಚಿತ್ರತಂಡ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

Actor Vijay Devarakonda speaks on Puneeth rajkumar
ಲೈಗರ್ ಚಿತ್ರದ ಪ್ರಚಾರ
author img

By

Published : Aug 19, 2022, 8:08 PM IST

ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗು ಅನನ್ಯಾ ಪಾಂಡೆ ಅಭಿನಯದ ಬಹುನಿರೀಕ್ಷಿತ ಚಿತ್ರ ಲೈಗರ್ ಸದ್ಯ ಟ್ರೈಲರ್ ಹಾಗು ಹಾಡುಗಳಿಂದಲೇ ಸಖತ್ ಸೌಂಡ್ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದೇ ತಿಂಗಳು 25ರಂದು ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಲೈಗರ್ ಚಿತ್ರದ ಪ್ರಚಾರ ಸಲುವಾಗಿ ನಟ ವಿಜಯ್ ದೇವರಕೊಂಡ, ನಟಿ ಅನನ್ಯಾ ಪಾಂಡೆ, ಖಳ ನಟನಾಗಿ ನಟಿಸಿರೋ ವಿಶ್ ರೆಡ್ಡಿ ಬೆಂಗಳೂರಿಗೆ ಆಗಮಿಸಿದ್ದಾರೆ. ಖಾಸಗಿ ಹೋಟೆಲ್​ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಚಿತ್ರತಂಡ ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.

ಮೊದಲಿಗೆ ಕನ್ನಡದಲ್ಲಿ ಎಲ್ಲರೂ ಚೆನ್ನಾಗಿದ್ದೀರಾ ಅಂತಾ ಮಾತು ಶುರು ಮಾಡಿದ ನಟ ವಿಜಯ್ ದೇವರಕೊಂಡ, ಪಾತ್ರಕ್ಕಾಗಿ ಹೆಚ್ಚು ಒತ್ತು ಕೊಡಬೇಕಾಯಿತು. ಬಾಕ್ಸರ್ ಕ್ಯಾರೆಕ್ಟರ್​ಗೆ ತುಂಬಾ ಸಿದ್ಧತೆ ಮಾಡಿದ್ದೆ. ಈ ಕಾರಣಕ್ಕೆ ನನಗೆ ಡಬ್ಬಿಂಗ್ ಮಾಡಲು ಆಗಿಲ್ಲ. ಮುಂದಿನ ಸಿನಿಮಾಗೆ ನಾನು ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತೇನೆ ಎಂದು ತಿಳಿಸಿದರು.

ಲೈಗರ್ ಚಿತ್ರತಂಡ

ಇದರ ಜೊತೆಗೆ ಕನ್ನಡ ಚಿತ್ರರಂಗದ ಯುವರತ್ನ ಪುನೀತ್ ರಾಜ್​ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ವಿಜಯ್ ಮೆಲುಕು ಹಾಕಿದರು. ನಾನು ಬೆಂಗಳೂರಿಗೆ ಬಂದಾಗಲೆಲ್ಲ ಪುನೀತ್ ಅಣ್ಣನನ್ನು ಮೀಟ್ ಮಾಡಿ ಹೋಗುತ್ತಿದ್ದೆ. ಅವರು ನನ್ನ ಸಿನಿಮಾಗಳನ್ನು ನೋಡಿ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಹಾಗೇ ಶಿವಣ್ಣ ಕೂಡ ನನ್ನ ಸಿನಿಮಾ ನೋಡಿ ಫೋನ್ ಮಾಡಿ ಮಾತನಾಡಿದ್ದು ಇದೆ ಅಂತಾ ರಾಜ್​ಕುಮಾರ್ ಕುಟುಂಬದೊಂದಿಗೆ ಇರುವ ಬಾಂಧವ್ಯದ ಬಗ್ಗೆ ತಿಳಿಸಿದರು.

ನಿರ್ದೇಶಕ ಪುರಿ ಜಗನ್ನಾಥ್ ಸರ್ ಅವರು ಪಾತ್ರಕ್ಕಾಗಿ ಮಾಡಿಸಿದ ಸಿದ್ಧತೆ ನಿಜಕ್ಕೂ ಕಷ್ಟ ಎನಿಸಿತ್ತು. ಆ ಪಾತ್ರಕ್ಕೆ ಸರಿಯಾದ ನ್ಯಾಯ ಸಿಗೋವರೆಗೂ ಪುರಿ ಸರ್ ಕೆಲಸ ಮಾಡ್ತಾರೆ ಎಂದರು.

ನಟಿ ಅನನ್ಯಾ ಪಾಂಡೆ ಕೂಡ ಕನ್ನಡದಲ್ಲಿ ಮಾತು ಆರಂಭಿಸಿ, ನಾನು ಈ ಚಿತ್ರದಲ್ಲಿ ಸೋಷಿಯಲ್ ಕ್ರೇಜ್ ಹೊಂದಿರುವ ಹುಡುಗಿ ಪಾತ್ರ ಮಾಡಿದ್ದೇನೆ. ಲೈಗರ್ ನನ್ನ ಕೆರಿಯರ್​ನಲ್ಲಿ ಸದಾ ನೆನಪಿನಲ್ಲಿ ಉಳಿಯುವ ಸಿನಿಮಾ. ನಾನು 20, 30 ಸಿನಿಮಾ ಮಾಡಿದರೂ ಲೈಗರ್ ಚಿತ್ರ ನನ್ನ ಸಿನಿಮಾ ಜೀವನದಲ್ಲಿ ಸ್ಪೆಷಲ್ ಆಗಿ ಇರುತ್ತದೆ ಅಂತಾ ಹೇಳಿದರು.

ಇದನ್ನೂ ಓದಿ: ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ತೆಲುಗು ನಟ ವಿಜಯ್ ದೇವರಕೊಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.