ETV Bharat / entertainment

ದುನಿಯಾ ವಿಜಯ್ ನಿರ್ದೇಶನದ 'ಭೀಮ' ಸಿನಿಮಾಗೆ ಹೇರ್​​ಸ್ಟೈಲ್ ಚೇಂಜ್​ ಮಾಡಿಕೊಂಡ ಖಳನಟ ಸುಧೀಂದ್ರ - ಜಿಂಜಾರ್ ಅಲಿಯಾಸ್ ಶುಂಠಿ

ದುನಿಯಾ ವಿಜಯ್ ನಿರ್ದೇಶನದ 'ಭೀಮ' ಸಿನಿಮಾದಲ್ಲಿ ಕಾಕ್ರೋಚ್ ಸುಧೀ ಜಿಂಜಾರ್ ಅಲಿಯಾಸ್ ಶುಂಠಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಅವರು ತಮ್ಮ ಮನೆಗೆ ಹೆರ್ ಸ್ಟೈಲಿಷ್ ಅವರನ್ನು ಕರೆಸಿಕೊಂಡು ತಮ್ಮ ಕೂದಲಿಗೆ ಹೊಸ ಟಚ್ ಕೊಡಿಸಿದ್ದಾರೆ.

Actor Sudhindra changed hairstyle for Bheema movie
ಹೇರ್​​ಸ್ಟೈಲ್ ಚೇಂಜ್​ ಮಾಡಿಕೊಂಡ ಖಳನಟ ಸುಧೀಂದ್ರ
author img

By

Published : Sep 1, 2022, 7:30 AM IST

ಸೈನ್ ಬೋರ್ಡ್ ಕಲಾವಿದ ಸುಧೀಂದ್ರ ಅಲೆಮಾರಿ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಈವರೆಗೂ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಟಗರು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ‌ ಖಳನಟ ಸುಧೀಂದ್ರ ಈಗ ಅಪಾರ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಟಗರು ಸಿನಿಮಾ ನೋಡಿದವರಿಗೆ ಖಂಡಿತ ಕಾಕ್ರೋಚ್ ಹೆಸರು ನೆನಪಿರುತ್ತದೆ. ಈ ಪಾತ್ರದ ಮೂಲಕವೇ ಖಳನಟ ಸುಧೀಂದ್ರ ರಾತ್ರೋರಾತ್ರಿ ಫೇಮಸ್ ಆಗಿ ಬಹುಬೇಡಿಕೆ ನಟರಾಗಿ ಗುರುತಿಸಿಕೊಂಡಿದ್ದಾರೆ.

ಹೇರ್​​ಸ್ಟೈಲ್ ಚೇಂಜ್​ ಮಾಡಿಕೊಂಡ ಖಳನಟ ಸುಧೀಂದ್ರ

ಬಳಿಕ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳಿದ್ದ ಸಲಗ ಚಿತ್ರದಿಂದ ಮತ್ತಷ್ಟು ಖ್ಯಾತಿ ಪಡೆದ ಕಾಕ್ರೋಚ್ ಸುಧೀ ಸದ್ಯ ಭೀಮ ಚಿತ್ರಕ್ಕಾಗಿ ತಮ್ಮ ಲುಕ್​ ಚೇಂಜ್​ ಮಾಡಿಕೊಡಿದ್ದಾರೆ. ಹೌದು, ತಮ್ಮ ಉದ್ದವಾದ ಕೂದಲಿಗೆ ಕತ್ತರಿ ಹಾಕುವ ಮೂಲಕ ಲುಕ್ ಅನ್ನೇ ಬದಲಾಯಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಭಿನಯ ಚಕ್ರವರ್ತಿ ಸುದೀಪ್​ ಸಾಧನೆಗೆ ಗೌರವ.. ಶೀಘ್ರದಲ್ಲೇ ವಿಶೇಷ ಅಂಚೆ ಲಕೋಟೆ ಬಿಡುಗಡೆ

ದುನಿಯಾ ವಿಜಯ್ ನಿರ್ದೇಶನದ ಭೀಮ ಸಿನಿಮಾದಲ್ಲಿ ಕಾಕ್ರೋಚ್ ಸುಧೀ ಜಿಂಜಾರ್ ಅಲಿಯಾಸ್ ಶುಂಠಿ ಎಂಬ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಕಾಕ್ರೋಚ್ ಸುಧೀ ತಮ್ಮ ಮನೆಗೆ ಹೆರ್ ಸ್ಟೈಲಿಷ್ ಅವರನ್ನು ಕರೆಸಿ ಕೂದಲಿಗೆ ಹೊಸ ಟಚ್ ಕೊಡಿಸಿದ್ದಾರೆ. ಈಗಾಗಲೇ ಟಗರು ಹಾಗು ಸಲಗ ಚಿತ್ರದಲ್ಲಿ ವಿಚಿತ್ರ ಹೆಸರುಗಳಿಂದಲೇ ಫೇಮಸ್ ಆಗಿದ್ದರು. ಈಗ ಭೀಮ ಚಿತ್ರದಲ್ಲಿ ಜಿಂಜಾರ್ ಅಲಿಯಾಸ್ ಶುಂಠಿ ಪಾತ್ರ ಸುಧೀಗೆ ಮತ್ತಷ್ಟು ಪ್ರಖ್ಯಾತಿ ತಂದು ಕೊಡುವ ಸಾಧ್ಯತೆ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.