ETV Bharat / entertainment

ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್​ ಲೀಗ್ ಆರಂಭಕ್ಕೂ ಮುನ್ನ ಶಿಖರ್​ ಧವನ್​ ಭೇಟಿ​ಯಾದ ನಟ ಸುದೀಪ್ - ಶಿಖರ್​ ಧವನ್​ ಭೇಟಿ​ಯಾದ ನಟ ಸುದೀಪ್

ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್​ ಲೀಗ್ ಆರಂಭಕ್ಕೂ ಮುನ್ನ ನಟ ಕಿಚ್ಚ ಸುದೀಪ್ ಅವರು ಭಾರತೀಯ ಕ್ರಿಕೆಟ್​ ತಂಡದ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಅವರನ್ನು ಭೇಟಿ​ ಮಾಡಿದ್ದಾರೆ. ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ.

Actor Sudeep meet team india cricketer shikhar dhawan

author img

By

Published : Feb 6, 2023, 3:24 PM IST

ಸಿನಿಮಾ ಹೊರತುಪಡಿಸಿ ನಟ​ ಕಿಚ್ಚ ಸುದೀಪ್ ಅವರಿಗೂ ಕ್ರಿಕೆಟ್​ಗೂ ಬಿಡಿಸಲಾರದ ನಂಟು. ಬಣ್ಣದ ಲೋಕದಿಂದ ಬಿಡುವು ಮಾಡಿಕೊಂಡು ಆಗಾಗ ಕ್ರಿಕೆಟ್​ ಅಂಗಳಕ್ಕೂ ಕಾಲಿಡುವ ಸುದೀಪ್​, ತಾವೂ ಕೂಡ ಓರ್ವ ಉತ್ತಮ ಕ್ರಿಕೆಟ್​ ಪಟು ಅಂತ ಹಲವು ಬಾರಿ ನಿರೂಪಿಸಿಕೊಟ್ಟವರು. ಸದ್ಯ ಅವರು ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್​ ಲೀಗ್​​ಗೆ (ಸಿಸಿಎಲ್​) ಭರ್ಜರಿ ಸಿದ್ಧತೆ ಕೂಡ ನಡೆಸಿದ್ದಾರೆ.

ಇದೇ ಖುಷಿಯಲ್ಲಿರುವ ಅವರು ಇದೀಗ ಭಾರತೀಯ ಕ್ರಿಕೆಟ್​ ತಂಡದ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಅವರನ್ನು ಭೇಟಿ​ ಮಾಡಿದ್ದಾರೆ. ಈ ಸಂತಸದ ಕ್ಷಣವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ, ಗಬ್ಬರ್​​ ಸಿಂಗ್ ಶಿಖರ್​ ಧವನ್​ ಅವರಿಗೆ ಬರುವ ಐಪಿಎಲ್ 2023ರ ಪಂದ್ಯಕ್ಕೆ​ ಶುಭಾಶಯ ಕೂಡ ತಿಳಿಸಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್​ನಲ್ಲಿ ಶಿಖರ್​ ಧವನ್​ ಅವರನ್ನು ಭೇಟಿ ಮಾಡಿದ ನಾಲ್ಕು ಚಂದದ ಫೋಟೋಗಳನ್ನು ಹಂಚಿಕೊಂಡಿರುವ ಸುದೀಪ್​, ‘ಎಂತಹ ಅದ್ಭುತ ಮತ್ತು ಪರಿಪೂರ್ಣ ರಾತ್ರಿ. ಮುಂಬರುವ ಇಂಡಿಯನ್​ ಪ್ರೀಮಿಯರ್​ ಲೀಗ್​​ (IPL) ಗಾಗಿ ನನ್ನ ಸಹೋದರನಿಗೆ ಶುಭಾಶಯಗಳು ಎಂದು ಆ ಫೋಟೋಗಳಿಗೆ ಅಂದದ ಶೀರ್ಷಿಕೆ ಹಾಕಿದ್ದಾರೆ. ಅದರಲ್ಲಿ ಇಬ್ಬರು ಬಿಗಿದಪ್ಪಿಕೊಂಡಿರುವ ಒಂದು ಫೋಟೋ ಕೂಡ ಇದೆ.

ಇದನ್ನೂ ಓದಿ: ಕನ್ನಡಿಗ ರಿಕಿ ಕೇಜ್​ ಮುಡಿಗೆ ಮತ್ತೊಂದು ಗ್ರ್ಯಾಮಿ ಗರಿ.. ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸಿದ ಸಂಗೀತ ಸಂಯೋಜಕ

ಭೇಟಿ ಹಿನ್ನೆಲೆಗೆ ಕಾರಣ: ಸುದೀಪ್​ ಅವರು ಕರ್ನಾಟಕ ಸೆಲೆಬ್ರಿಟಿ ಕ್ರಿಕೆಟ್​ ಪಂದ್ಯವನ್ನು ಆಯೋಜಿಸಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ಇದೊಂದು ಸ್ಯಾಂಡಲ್​ವುಡ್​ನ ಎಲ್ಲ ಸೆಲೆಬ್ರಿಟಿಗಳು ಸೇರಿಸಿಕೊಂಡು ಆಡುವ ಪಂದ್ಯ. ಈ ವರ್ಷದ ಲೀಗ್​ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು ಪ್ರತಿ ತಂಡಕ್ಕೂ ಒಬ್ಬ ಅಂತಾರಾಷ್ಟ್ರೀಯ​ ಕ್ರಿಕೆಟ್​ ಪಟು ಕಾಣಿಸಿಕೊಳ್ಳಲಿದ್ದಾರೆ.

ಸುದೀಪ್​ ಅವರ ತಂಡಕ್ಕೆ ಶಿಖರ್​ ಧವನ್ ಸಾರಥಿಯಾಗಲಿದ್ದಾರೆ ಎಂಬ ಮಾತುಗಳು ಇವೆ. ಆದರೆ, ಈ ಬಗ್ಗೆ ತಾರೆಯರಾರೂ ಖಚಿತಪಡಿಸಿಲ್ಲ. ಸದ್ಯದಲ್ಲೇ ಯಾವ ತಂಡದಲ್ಲಿ ಯಾವ ಅಂತಾರಾಷ್ಟ್ರೀಯ ಕ್ರಿಕೆಟ್​ ಪಟು ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.

ಈ ಲೀಗ್ ಫೆಬ್ರವರಿ 18ರಿಂದ ಆರಂಭಗೊಳ್ಳಲಿದ್ದು ಮಾರ್ಚ್​ 19ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಭಾರತ ಚಿತ್ರರಂಗದ ಅನೇಕ ಕಲಾವಿದರು ಈ ಸೆಲೆಬ್ರಿಟಿ ಕ್ರಿಕೆಟ್​ ಲೀಗ್​​ನಲ್ಲಿ​​ ಪಾಲ್ಗೊಳ್ಳುತ್ತಿದ್ದಾರೆ. ಬೇರೆ ಬೇರೆ ನಗರಗಳು ಪಂದ್ಯದ ಆತಿಥ್ಯ ವಹಿಸಿಕೊಳ್ಳಲಿವೆ. ಅಂದ ಹಾಗೆಯೇ, ಶಿಖರ್​​ ಧವನ್ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ​​ಪಂಜಾಬ್​ ಕಿಂಗ್ಸ್​ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಅದಕ್ಕಾಗಿ ಅವರು ಕೂಡ ತಯಾರಿ ನಡೆಸಿದ್ದಾರೆ. ಇತ್ತೀಚಿನ ಟಿ20 ಸರಣಿಯಿಂದ ಹೊರಗುಳಿದ ಶಿಖರ್​​ ಧವನ್ ಐಪಿಎಲ್​ 2023ರಲ್ಲಿ ತನ್ನ ಅಬ್ಬರದ ಆಟ ತೋರಿಸಲಿದ್ದಾರೆ.

ಇದನ್ನೂ ಓದಿ: 3 ಮಿಲಿಯನ್​ ವೀಕ್ಷಣೆ ಕಂಡ 'ಕಬ್ಜ' ಚಿತ್ರದ ಮಾಸ್ ಸಾಂಗ್​: ರೆಟ್ರೋ ಅವತಾರದಲ್ಲಿ ಅಬ್ಬರಿಸಿದ ರಿಯಲ್ ಸ್ಟಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.