ಗಾಡ್ ಫಾದರ್ ಇಲ್ಲದಿದ್ರೂ, ಹಲವು ಏರಿಳಿತಗಳ ನಡುವೆ ಅಮೋಘ ಅಭಿನಯ ಮಾಡಿ, ಅಭಿಮಾನಿಗಳಿಗೆ ಅತ್ಯುತ್ತಮ ಸಿನಿಮಾಗಳನ್ನು ಕೊಟ್ಟು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಶೈನ್ ಆಗುತ್ತಿರುವ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್. ಕಿಚ್ಚ, ಅಭಿನಯ ಚಕ್ರವರ್ತಿ, ಹೆಬ್ಬುಲಿ ಹೀಗೆ ಹಲವಾರು ಹೆಸರುಗಳಿಂದ ಕರೆಸಿಕೊಂಡಿರುವ ನಟ. ಸುದೀಪ್ ಲೈಫ್ ಸ್ಟೈಲ್ ಹಾಗೂ ಫಿಟ್ನೆಸ್ಗೆ ಬೋಲ್ಡ್ ಆಗಿರುವವರ ಸಂಖ್ಯೆ ಅಪಾರ. 50ರ ಹೊಸ್ತಿಲಲ್ಲಿರೋ ಕಿಚ್ಚನ ಎನರ್ಜಿಗೆ ಸಾಟಿ ಯಾರು?.
ಯುವಕನಂತೆ ಆಕರ್ಷಿಸುವ ಕಿಚ್ಚನ ಫಿಟ್ನೆಸ್ ಸೀಕ್ರೆಟ್ ಏನಪ್ಪಾ ಅನ್ನೋದು ಅವರನ್ನು ಪ್ರೀತಿಸುವ ಕೋಟ್ಯಂತರ ಅಭಿಮಾನಿಗಳು ಮತ್ತು ಸಿನಿಮಾ ಮಂದಿಯ ಪ್ರಶ್ನೆ. ಸ್ವತಃ ಕಿಚ್ಚ ಅವರೇ ಈಟಿವಿ ಭಾರತ ಜೊತೆ ಮಾತನಾಡಿ ಕೆಲ ಮಾಹಿತಿ ಹಂಚಿಕೊಂಡಿದ್ದಾರೆ. ಕಿಚ್ಚ ತಮ್ಮ ಮೊದಲ ಸ್ಪರ್ಶ ಸಿನಿಮಾದಲ್ಲಿ ಇದ್ದಂತೆಯೇ ಈಗಲೂ ಇದ್ದಾರೆ. ಕೊಂಚ ಮೀಸೆ ಗಡ್ಡ ಬಿಟ್ಟಿದ್ದಾರೆ ಅನ್ನೋದಷ್ಟೇ ವ್ಯತ್ಯಾಸ. ಇತ್ತೀಚಿನ ಪೈಲ್ವಾನ್ ಚಿತ್ರದ ನಂತರ ಜಿಮ್ನಲ್ಲಿ ವರ್ಕ್ ಔಟ್ ಶುರು ಮಾಡಿರೋ ಕಾರಣ ಈ ವಯಸ್ಸಿನಲ್ಲೂ ಸಖತ್ ಫಿಟ್ ಆಗಿ ಕಾಣ್ತಾರೆ.
ಸಿನಿಮಾ, ಬ್ಯುಸಿ ಶೆಡ್ಯೂಲ್ ಗಮನಿಸಿದವರು ಹೇಗೆ ಫಿಟ್ನೆಸ್ ಮ್ಯಾನೇಜ್ ಮಾಡ್ತಿದ್ದಾರೆ ಅಂತಾ ಕೇಳೋದು ಸಹಜ. ಆದ್ರೆ ಅವರ ಅರೋಗ್ಯದ ಗುಟ್ಟು ಅರೋಗ್ಯಕರ ದಿನಚರಿ ಅನ್ನೋದು ಉತ್ತರ. ಸಾಮಾನ್ಯವಾಗಿ ಸ್ಟಾರ್ ನಟರು ಸಖತ್ ಬ್ಯಸಿಯಾಗಿರುತ್ತಾರೆ. ಪಾರ್ಟಿ, ಪ್ರೋಗ್ರಾಂ ಅಂತಾ ಲೇಟ್ ನೈಟ್ ಮನೆ ತಲುಪುತ್ತಾರೆ. ಯಾವಾಗ ಟೈಮ್ ಸಿಗುತ್ತೋ ಆಗ ಜಿಮ್, ಗ್ಯಾಪ್ನಲ್ಲಿ ಊಟ ತಿಂಡಿ ಮಾಡ್ತಾರೆ ಅಂತಾ ಜನ ಅಂದಾಜು ಮಾಡ್ತಾರೆ. ಅಲ್ಲದೇ ಕೆಲ ನಟರ ಲೈಫ್ ಸ್ಟೈಲ್ ಕೂಡಾ ಅದೇ ರೀತಿ ಇರುತ್ತೆ. ಅದರೆ ಕಿಚ್ಚ ಸುದೀಪ್ ಅವರ ಲೈಫ್ ಸ್ಟೈಲ್ ನಿಜಕ್ಕೂ ಅಚ್ಚರಿಯಾಗಿದೆ. ಸುದೀಪ್ ಫಿಟ್ನೆಸ್ ಸೀಕ್ರೆಟ್ ಬಗ್ಗೆ ಸ್ವತಃ ಕಿಚ್ಚ ಅವರೇ ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.
ಹೌದು ಕಿಚ್ಚ ಅವರೇ ಹೇಳಿದಂತೆ, ಬೆಳಗ್ಗೆ 5 ಗಂಟೆಗೆ ಎದ್ದು ಆ್ಯಕ್ಟೀವ್ ಆಗುವ ಕಿಚ್ಚ 6 ಗಂಟೆ ವೇಳೆಗೆ ಬೆಳಗ್ಗಿನ ಉಪಹಾರ ಮುಗಿಸಿ ಬಿಡ್ತಾರೆ. ಅದಾದ ನಂತರ ಕೊಂಚ ರಿಲ್ಯಾಕ್ಸ್. ಬಳಿಕ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗುವ ಕಿಚ್ಚ 11 ಗಂಟೆ ವೇಳೆಗೆ ಊಟ ಮುಗಿಸಿ ಮತ್ತೆ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗುತ್ತಾರೆ. ಇದರ ನಡುವೆ ಕ್ರಿಕೆಟ್, ಜಿಮ್ ಆಕ್ಟೀವಿಟೀಸ್ನಲ್ಲಿ ಬ್ಯುಸಿಯಾಗುವ ಕಿಚ್ಚ ಮಧ್ಯಾಹ್ನದ ವೇಳೆ ನಿದ್ದೆ ಮಾಡೋದು ತೀರಾ ಕಮ್ಮಿ ಅಂತಾರೆ.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ವರ್ಕ್ ಔಟ್ ವಿಡಿಯೋ ವೈರಲ್
ಸಂಜೆ ವೇಳೆಗೆ ಫ್ಯಾಮಿಲಿ ಇಲ್ಲ ಸ್ನೇಹಿತರ ಜೊತೆ ಉತ್ತಮ ಸಮಯ ಕಳೆಯುವ ಕಿಚ್ಚ, ಪಾರ್ಟಿ ಕೂಡ ಮಾಡ್ತಾರೆ. ಅದರೆ ಕಿಚ್ಚನ ಪಾರ್ಟಿ ಸಂಜೆ 6 ರಿಂದ 7 ಗಂಟೆ ಒಳಗೆ ಮುಗಿಯುತ್ತದೆ. ಜೊತೆಗೆ ರಾತ್ರಿಯ ಊಟ ಮುಗಿಸಿ ಅರ್ಧ ಗಂಟೆ ಗ್ಯಾಪ್ ಕೊಟ್ಟು ನಿದ್ರೆಗೆ ಜಾರುವ ಕಿಚ್ಚ ಮತ್ತೆ ಮರುದಿನ ಬೆಳಗ್ಗೆ 5 ಗಂಟೆಯೊತ್ತಿಗೆ ಎದ್ದು ಬಿಡ್ತಾರೆ. ಉತ್ತಮ ಲೈಫ್ ಸ್ಟೈಲ್ ರೂಢಿಸಿಕೊಂಡಿದ್ದಾರೆ. ಅಲ್ಲದೇ ಹೋಟೆಲ್ ಫುಡ್ಗಳಿಂದ ಕೊಂಚ ದೂರ ಇರುವ ಕಿಚ್ಚ ಮನೆಯಲ್ಲಿ ರೆಡಿಯಾದ ಆಹಾರ ಇಲ್ಲವೇ ತನಗೆ ಬೇಕಾದ ಅಡುಗೆಯನ್ನು ತಾವೇ ರೆಡಿ ಮಾಡಿಕೊಳ್ತಾರೆ.
ನಾನ್ವೆಜ್ ಪ್ರಿಯಾರಾಗಿರುವ ಕಿಚ್ಚ ಸುಮಾರು 40ಕ್ಕೂ ಹೆಚ್ಚು ವೆರೈಟಿ ಡಿಶಸ್ ಮಾಡ್ತಾರೆ ಅನ್ನೋದು ಇಂಟ್ರೆಸ್ಟಿಂಗ್ ವಿಚಾರ. ಒಟ್ಟಿನಲ್ಲಿ ಸಿನಿಮಾ, ರಿಯಾಲಿಟಿ ಶೋ, ಕ್ರಿಕೆಟ್ ಅಂತಾ ಸದಾ ಬ್ಯುಸಿಯಾಗಿರೋ ಅಭಿನಯ ಚಕ್ರವರ್ತಿಯ ಫಿಟ್ನೆಸ್ ರೂಲ್ಸ್ ಮಾತ್ರ ಬ್ರೇಕ್ ಮಾಡಲ್ಲ.
ಹಿಂದೂ, ಕ್ರಿಶ್ಚಿಯನ್ ಪದ್ಧತಿಯಂತೆ ಕ್ರಿಕೆಟಿಗ ಪಾಂಡ್ಯ ಮರುಮದುವೆ: ಫೋಟೋಗಳಲ್ಲಿ ನೋಡಿ