ETV Bharat / entertainment

ಹಿರಿಯ ನಟ ಶ್ರೀನಿವಾಸ ಮೂರ್ತಿ ಬಣ್ಣದ ಬದುಕಿಗೆ 50ರ ಸಂಭ್ರಮ - ಈಟಿವಿ ಭಾರತ ಕನ್ನಡ

75ನೇ ವರ್ಷಕ್ಕೆ ಕಾಲಿಟ್ಟಿರುವ ಹಿರಿಯ ನಟ ಶ್ರೀನಿವಾಸ ಮೂರ್ತಿ ಸಿನಿ ಲೋಕದಲ್ಲಿ 50 ವರ್ಷ ಪೂರೈಸಿದ್ದಾರೆ.

srinivasa murthy
ಶ್ರೀನಿವಾಸ ಮೂರ್ತಿ
author img

By

Published : May 11, 2023, 1:38 PM IST

ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಅಮೋಘ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಹಿರಿಯ ನಟ ಶ್ರೀನಿವಾಸ ಮೂರ್ತಿ. ಇತ್ತೀಚೆಗಷ್ಟೇ ಅವರು 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಅವರ ಬಣ್ಣದ ಬದುಕು ಕೂಡ 50 ವರ್ಷ ಪೂರೈಸಿದೆ. ಈ ಎರಡು ಸಂಭ್ರಮಗಳನ್ನು ಆಚರಿಸಲು ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 'ತರಕಾರಿ ಚೆನ್ನಿ' ಹಾಗೂ 'ಸದಾರಮೆ ಕಳ್ಳ' ಎಂಬ ಎರಡು ನಾಟಕಗಳನ್ನು ಪ್ರದರ್ಶಿಸಲಾಗಿತ್ತು. ಈ ಸಂಧರ್ಭದಲ್ಲಿ ಹಿರಿಯ ನಟ ಶ್ರೀನಿವಾಸಮೂರ್ತಿ ಸಿನಿಮಾ ಎಂಟ್ರಿ ಹಾಗೂ ತಮ್ಮ‌ ಸಿನಿ ಜರ್ನಿಯ ಕೆಲವೊಂದು ಅಚ್ಚರಿ ಸಂಗತಿಗಳನ್ನ ಹಂಚಿಕೊಂಡರು.

ತಮಿಳು ಚಿತ್ರದಲ್ಲಿ ನಾಯಕನಾಗಿ ನಟನೆ: "ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಂದು ಸರ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆ. ಆ ವೇಳೆ ನಾಟಕದಲ್ಲಿ ಅಭಿನಯಿಸಲು ಪ್ರಾರಂಭ ಮಾಡಿದೆ. ಒಂದು ಸಲ ನನ್ನ ನಾಟಕವನ್ನು ನೋಡಿದ ಬಂಗಾರಪ್ಪನವರು ನನ್ನನ್ನು ಅಭಿನಂದಿಸಿದರು. ಅಲ್ಲಿಂದ ನನ್ನ ನಟನೆ ಮತ್ತಷ್ಟು ಹೆಚ್ಚಾಯಿತು. ತಮಿಳಿನ ಒಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೆ. ಆ ಚಿತ್ರ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಿಗೆ ತೊಂದರೆಯಾಯಿತು. 'ಅಪ್ಪು' ಚಿತ್ರದ ನಂತರ ಪುರಿ ಜಗನ್ನಾಥ್ ಅವರು ತೆಲುಗು ಚಿತ್ರರಂಗಕ್ಕೆ ನನ್ನ ಕರೆದಿದ್ದರು. ಆದರೆ ಕನ್ನಡದಲ್ಲೇ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸುತ್ತಿದ್ದೆ. ಹಾಗಾಗಿ ಅಲ್ಲಿಗೆ ಹೋಗಲಿಲ್ಲ. ರಜನಿಕಾಂತ್ ಅವರು ಸಹ ನೀವು ಯಾಕೆ ತಮಿಳಿನಲ್ಲಿ ನಟಿಸಬಾರದು? ಎಂದು ಕೇಳುತ್ತಿರುತ್ತಾರೆ" ಎಂದು ತಮಗೆ ಬೇರೆ ಭಾಷೆಗಳಿಂದ ಬಂದಿದ್ದ ಅವಕಾಶಗಳ ಕುರಿತು ಮಾತನಾಡಿದರು.

ಇದನ್ನೂ ಓದಿ: ಅಜ್ಜಿ, ವಿಶೇಷಚೇತನ ಸಹೋದರಿ ಜೊತೆಗೆ ಬಂದು ಸ್ವಗ್ರಾಮದಲ್ಲಿ ಹಕ್ಕು ಚಲಾಯಿಸಿದ ನಟ ಡಾಲಿ ಧನಂಜಯ್​​

ವರನಟ ಡಾ.ರಾಜ್​ಕುಮಾರ್, ಸಾಹಸ ಸಿಂಹ ಡಾ.ವಿಷ್ಣುವರ್ಧನ್, ರೆಬಲ್​ ಸ್ಟಾರ್​ ಡಾ.ಅಂಬರೀಶ್, ಕರ್ನಾಟಕದ ಕುಳ್ಳ ದ್ವಾರಕೀಶ್, ಹಿರಿಯ ನಟ‌ರಾದ ರಾಮಕೃಷ್ಣ, ಅಶೋಕ್, ರವಿಚಂದ್ರನ್, ಶಿವ ರಾಜ್​ಕುಮಾರ್, ಪುನೀತ್ ರಾಜ್‍ಕುಮಾರ್, ಸುದೀಪ್, ಗಣೇಶ್, ಧ್ರುವ ಸರ್ಜಾ ಸೇರಿದಂತೆ ಅನೇಕ ನಟರ ಸಿನಿಮಾಗಳಲ್ಲಿ ಶ್ರೀನಿವಾಸ್​ ಮೂರ್ತಿ ತೆರೆ ಹಂಚಿಕೊಂಡಿದ್ದಾರೆ.

ಅದರಲ್ಲೂ ಡಾ.ರಾಜ್‌ಕುಮಾರ್ ಅವರ ಬಹುತೇಕ ಸಿನಿಮಾಗಳಲ್ಲಿ ಶ್ರೀನಿವಾಸ್ ಮೂರ್ತಿ ಖಾಯಂ ನಟರಾಗಿ ಇರುತ್ತಿದ್ದರು. ಆ ಮಟ್ಟಿಗೆ ಅಣ್ಣಾವ್ರ ಕುಟುಂಬದ ಜೊತೆ ಶ್ರೀನಿವಾಸ್ ಮೂರ್ತಿ ಬಾಂಧವ್ಯವನ್ನು ಹೊಂದಿದ್ದರು. ಈ ಸ್ನೇಹ ಶಿವ ರಾಜ್​ಕುಮಾರ್ ಹಾಗು ಪುನೀತ್ ರಾಜ್‍ಕುಮಾರ್ ಸಿನಿಮಾಗಳಲ್ಲೂ ಮುಂದುವರೆಯಿತು. ಎಂತಹದ್ದೇ ಪಾತ್ರವನ್ನು ಕೊಟ್ಟರೂ ಸಲೀಸಾಗಿ ನಟಿಸುವ ಶ್ರೀನಿವಾಸ್​ ಮೂರ್ತಿ ಚಿತ್ರರಂಗದಲ್ಲಿ ತನ್ನದೇ ಬೇಡಿಕೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ಮಲೈಕಾ ಅರೋರಾ ಜೊತೆಗೆ ಹೆಜ್ಜೆ ಹಾಕಿದ ಪುತ್ರ ಅರ್ಹಾನ್ ಖಾನ್: ನೆಟ್ಟಿಗರಿಗೆ ಪ್ರತಿಕ್ರಿಯೆ ಹೀಗಿದೆ ನೋಡಿ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.