ಕರ್ವಾ ಚೌತ್ ಬಹುತೇಕ ನವವಿವಾಹಿತೆಯರು ಆಚರಿಸುವ ಒಂದು ಹಬ್ಬ. ಗಂಡನ ದೀರ್ಘಾಯುಷ್ಯಕ್ಕಾಗಿ ದೇವರನ್ನು ಪ್ರಾರ್ಥಿಸುವುದು ಮತ್ತು ಈ ದಿನದಂದು ಉಪವಾಸ ಮಾಡುವುದು ಕರ್ವಾ ಚೌತ್ ವಿಶೇಷ. ಅದರಲ್ಲೂ ಉತ್ತರ ಭಾರತದಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಅನೇಕ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಉಪವಾಸ ವ್ರತ ಆಚರಿಸುತ್ತಿರುವ ಈ ವೇಳೆ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಅವರಿಗಾಗಿ ವಿಶೇಷವಾದದ್ದನ್ನು ಮಾಡಲು ನಿರ್ಧರಿಸಿದ್ದಾರೆ

ಮಹಿಳೆಯರ ಸಬಲೀಕರಣಕ್ಕಾಗಿ ಯುಪಿ, ಪಂಜಾಬ್, ಬಿಹಾರ್ ಸೇರಿದಂತೆ ಕೆಲ ರಾಜ್ಯಗಳಲ್ಲಿ ಕೇಂದ್ರಗಳನ್ನು ತೆರೆಯುವ ಬಗ್ಗೆ ಸೋನು ಸೂದ್ ಮಾತನಾಡಿದ್ದಾರೆ. ಮಹಿಳೆಯರು ತಮ್ಮನ್ನು ತಾವು ಸಶಕ್ತಗೊಳಿಸಲು ಅಗತ್ಯವಾದ ಸಾಧನಗಳನ್ನು ಒದಗಿಸುವ ಆಲೋಚನೆ ಇದೆ. ದೇಶವು ಪ್ರಗತಿ ಹೊಂದಲು ಮತ್ತು ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಹೊಂದಲು ಇದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮೊದಲ ಕರ್ವಾ ಚೌತ್ ಹಬ್ಬಕ್ಕೆ ಸಾಕ್ಷಿಯಾಗಲಿರುವ ಬಾಲಿವುಡ್ ನವಜೋಡಿಗಳು
ಕೆಲಸಕ್ಕಾಗಿ ಉತ್ತಮ ಅವಕಾಶಗಳನ್ನು ಪಡೆಯಲು ಮತ್ತು ವಿಶೇಷವಾಗಿ ತಮ್ಮ ಕುಟುಂಬಕ್ಕಾಗಿ ಮತ್ತು ಅವರ ಮಕ್ಕಳ ಶಿಕ್ಷಣಕ್ಕಾಗಿ ಗಳಿಸಬೇಕಾದವರಿಗೆ ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡುವ ಮೂಲಕ ಮಹಿಳೆಯರಿಗೆ ಸಹಾಯ ಮಾಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಮಹಿಳೆಯರು ಉತ್ತಮ ಉದ್ಯೋಗಗಳನ್ನು ಪಡೆಯಲು ಮತ್ತು ಅವರ ಸ್ಥಿತಿಯನ್ನು ಸುಧಾರಿಸಲು ಅಗತ್ಯವಾದ ಕೌಶಲ್ಯವನ್ನು ಒದಗಿಸಲು ನಾನು ಬಯಸುತ್ತೇನೆ ಎಂದು ಸೋನು ಹೇಳಿದ್ದಾರೆ.