ಬೆಂಗಳೂರು: 'ಮುಂದಿನ ದಿನಗಳಲ್ಲಿ ರಜನಿಕಾಂತ್ ಸರ್ ಜೊತೆ ನಟಿಸುವುದಿದೆ. ಅದಕ್ಕೂ ಮುನ್ನ ನಟ ಧನುಷ್ ಜೊತೆ ತೆರೆ ಹಂಚಿಕೊಳ್ಳಲಿದ್ದೇನೆ. ಚಿತ್ರ ಯಾವುದು? ಪಾತ್ರ ಯಾವುದು ಎಂಬುದರ ಬಗ್ಗೆ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ತಿಳಿಯಲಿದೆ' ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ವೇದ ಚಿತ್ರದ ಬಿಡುಗಡೆಗೂ ಮುನ್ನ ಇತ್ತೀಚೆಗೆ ಈಟಿವಿ ಭಾರತ ನಡೆಸಿದ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿರುವ ಅವರು, ರಜನಿಕಾಂತ್ ಸರ್ ಜೊತೆಗಿನ ಕಾಂಬಿನೇಷನ್ ಇನ್ನೂ ಆಗಿಲ್ಲ. ಆದರೆ, ಧನುಷ್ ಜೊತೆ ಶೀಘ್ರದಲ್ಲೇ ಸಿನಿಮಾ ಆರಂಭವಾಗಲಿದೆ. ಅವರಂದ್ರೆ ನನಗೆ ತುಂಬಾ ಇಷ್ಟ ಎಂದು ಧನುಷ್ ನಟನಾ ಚಾತುರ್ಯವನ್ನು ಹೊಗಳಿದರು.
ನಮ್ಮ ಬ್ಯಾನರ್ ಅಡಿಯಲ್ಲಿ ಮುಂಬರುವ ದಿನಗಳಲ್ಲಿ ಹೊಸಬರಿಗೆ ಅವಕಾಶ ಸಿಗಲಿದೆ. ಕೇವಲ ನನ್ನ ಸಿನಿಮಾಗಳಿಗೆ ಮಾತ್ರವಲ್ಲ. ಚೆನ್ನಾಗಿರುವ ಕಥೆಗಳು ಬಂದರೆ ನಮ್ಮ ಬ್ಯಾನರ್ ಅಡಿಯಲ್ಲಿ ಬೆಳೆಯುವ ಹುಡುಗರಿಗೆ ಖಂಡಿತ ಅವಕಾಶ ಮಾಡಿಕೊಡಲಾಗುವುದು ಎಂದು ಭರವಸೆ ಕೊಟ್ಟರು.
ನಾನು ಈ ಕಥೆ ಒಪ್ಪಿಕೊಂಡಿದ್ದು ಮೊದಲ ಲಾಕ್ಡೌನ್ ಸಮಯದಲ್ಲಿ. ಆಗ ಭೈರಾಗಿ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ನಿರ್ದೇಶಕ ಹರ್ಷ ಕಥೆ ಹೇಳಿದ್ದರು. ಆಗ ವೇದ ಸಿನಿಮಾವನ್ನು ಬೇರೆ ನಿರ್ಮಾಪಕರು ಮಾಡುವವರಿದ್ದರು. ಆ ನಿರ್ಮಾಪಕರ ಜೊತೆ ನಾವು ಮಾತನಾಡಿ ವೇದದ ನಿರ್ಮಾಣ ಹೊಣೆಯನ್ನು ತೆಗೆದುಕೊಂಡೆವು ಎಂದು ಹೇಳಿದರು.
ಇದನ್ನೂ ಓದಿ: ನಟ ದರ್ಶನ್ ಅವಮಾನಿಸಿದ ಪ್ರಕರಣ: ಮೂವರು ಕಿಡಿಗೇಡಿಗಳ ಬಂಧನ