ETV Bharat / entertainment

ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಜೊತೆ ನಟ ಸಲ್ಮಾನ್ ಡ್ಯಾನ್ಸ್‌: ವಿಡಿಯೋ - ಸಾಥಿಯಾ ಯೇ ಟ್ಯೂನ್ ಕ್ಯಾ ಕಿಯಾ

ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಇನ್‌ಸ್ಟಾ ರೀಲ್ಸ್ ವೈರಲ್ ಆಗಿದೆ.

Actor Salman Reels with Boxer Nikhat
ಬಾಕ್ಸರ್ ನಿಖತ್ ಜೊತೆ ನಟ ಸಲ್ಮಾನ್ ರೀಲ್ಸ್
author img

By

Published : Nov 9, 2022, 10:25 AM IST

Updated : Nov 9, 2022, 3:01 PM IST

ಭಾರತದ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಖುಷಿ ಕ್ಷಣಗಳ ವಿಡಿಯೋ ಗಮನ ಸೆಳೆಯುತ್ತಿದೆ.

"ನಾನು ಸಲ್ಮಾನ್ ಅವರ ಅಪ್ಪಟ ಅಭಿಮಾನಿ. ಅವರನ್ನು ಭೇಟಿಯಾಗುವುದು ನನ್ನ ದೊಡ್ಡ ಕನಸು. ಮೊದಲು ಒಲಂಪಿಕ್ಸ್‌ನಲ್ಲಿ ಪದಕ ಗೆದ್ದು, ಮುಂಬೈಗೆ ತೆರಳಿ ಸಲ್ಮಾನ್ ಖಾನ್ ಅವರನ್ನು ಭೇಟಿಯಾಗಬೇಕು" ಎಂದು ಸಂದರ್ಶನಗಳಲ್ಲಿ ನಿಖತ್ ಈ ಹಿಂದೆ ಹೇಳಿದ್ದರು. ಈ ವಿಡಿಯೋಗೆ ಸಲ್ಮಾನ್ ಕೂಡ ಪ್ರತಿಕ್ರಿಯಿಸಿದ್ದರು. ಅಲ್ಲದೇ ಸಲ್ಮಾನ್, ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನ ಗೆದ್ದಾಗ ನಿಖತ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು.

ಇದೀಗ ಇವರಿಬ್ಬರೂ ಸೇರಿ ಇನ್ ಸ್ಟಾ ರೀಲ್ಸ್ ಮಾಡಿದ್ದಾರೆ. ನಿಖತ್ ಅವರ ಕನಸು ನನಸಾಗಿದೆ. ಸಲ್ಮಾನ್ ರ ಲವ್ ಚಿತ್ರದ 'ಸಾಥಿಯಾ ಯೇ ಟ್ಯೂನ್ ಕ್ಯಾ ಕಿಯಾ' ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ನಿಖತ್ 2022 ರ ಮೇ 19 ರಂದು ಟರ್ಕಿಯ ಇಸ್ತಾಂಬುಲ್‌ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ ಹೆಗ್ಗಳಿಕೆ ಹೊಂದಿದ್ದಾರೆ.

ಇದನ್ನೂ ಓದಿ: ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​​ನಲ್ಲಿ ಚಿನ್ನ ಗೆದ್ದ ನಿಖತ್​​.. ಇತಿಹಾಸ ಸೃಷ್ಟಿಸಿದ ಭಾರತೀಯ ಬಾಕ್ಸರ್​

Last Updated : Nov 9, 2022, 3:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.