ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಫ್ಯಾಮಿಲಿ ಜೊತೆ ಹೆಚ್ಚು ಟೈಮ್ ಸ್ಪೆಂಡ್ ಮಾಡುತ್ತಾರೆ. ಹೆಂಡತಿ ಮತ್ತು ಮಕ್ಕಳ ಜೊತೆಗಿನ ಮೆಮೊರೇಬಲ್ ಮೊಮೆಂಟ್ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಶೇರ್ ಮಾಡುತ್ತಿರುತ್ತಾರೆ. ನಿನ್ನೆಯಷ್ಟೇ ರಿಷಬ್ ಮಗಳ ಹುಟ್ಟುಹಬ್ಬವಿತ್ತು. ಹೀಗಾಗಿ ಮುದ್ದಿನ ಮಗಳ ಕ್ಯೂಟ್ ವಿಡಿಯೋ ಹಂಚಿಕೊಂಡಿದ್ದಾರೆ.
ಅಪ್ಪನಿಗೆ ಮಗಳೆಂದರೆ ತುಸು ಹೆಚ್ಚೇ ಪ್ರೀತಿ. ರಿಷಬ್ ಶೆಟ್ಟಿಯವರಿಗೂ ಹಾಗೆಯೇ, ಮಗಳು ರಾದ್ಯಾಳನ್ನು ತುಂಬಾನೇ ಮುದ್ದು ಮಾಡುತ್ತಾರೆ. ಇದೀಗ ಮಗಳ ವಿಡಿಯೋವನ್ನು ಪೋಸ್ಟ್ ಮಾಡಿರುವ ಅವರು, "ನಮ್ಮ ಪುಟ್ಟ ರಾಜಕುಮಾರಿ ಬೆಳೆಯುವುದನ್ನು ನೋಡುವುದೇ ಖುಷಿ. ಹ್ಯಾಪಿ ಬರ್ತ್ಡೇ ರಾದ್ಯಾ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ರಾದ್ಯಾಳ ಮೇಲೆ ಸದಾ ಇರಲಿ." ಎಂದು ಶುಭ ಹಾರೈಸಿದ್ದಾರೆ. ವಿಡಿಯೋದಲ್ಲಿ ರಿಷಬ್ ಶೆಟ್ಟಿ ಮಗಳ ಕ್ಯೂಟ್ ಎಕ್ಸ್ಪ್ರೆಶನ್ಸ್, ಮುದ್ದಾದ ನಗು, ತುಂಟಾಟವನ್ನು ಕಾಣಬಹುದು. ಜೊತೆಗೆ ಇದೇ ವಿಡಿಯೋವನ್ನು ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಕೂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
-
Watching our little princess grow has been the best sight of our lives!
— Rishab Shetty (@shetty_rishab) March 4, 2023 " class="align-text-top noRightClick twitterSection" data="
Happy birthday, our baby girl Raadya ♥️
ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ರಾದ್ಯಾಳ ಮೇಲೆ ಸದಾ ಇರಲಿ. pic.twitter.com/7j9o8o4AE1
">Watching our little princess grow has been the best sight of our lives!
— Rishab Shetty (@shetty_rishab) March 4, 2023
Happy birthday, our baby girl Raadya ♥️
ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ರಾದ್ಯಾಳ ಮೇಲೆ ಸದಾ ಇರಲಿ. pic.twitter.com/7j9o8o4AE1Watching our little princess grow has been the best sight of our lives!
— Rishab Shetty (@shetty_rishab) March 4, 2023
Happy birthday, our baby girl Raadya ♥️
ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ರಾದ್ಯಾಳ ಮೇಲೆ ಸದಾ ಇರಲಿ. pic.twitter.com/7j9o8o4AE1
ಇದನ್ನೂ ಓದಿ: ಪವರ್ ಸ್ಟಾರ್ ಯಶಸ್ವಿ ಹಾದಿಯಲ್ಲಿ ಯುವ ರಾಜ್ಕುಮಾರ್: ಅಪ್ಪು ಕಾರ್ ನಂಬರ್ ಯುವ ಸಿನಿಮಾದಲ್ಲಿ ಬಳಕೆ
ಫ್ಯಾಮಿಲಿ ಮ್ಯಾನ್ ರಿಷಬ್: ಮಾರ್ಚ್ 1 ರಂದು ಪ್ರಗತಿ ಶೆಟ್ಟಿ ಅವರ ಹುಟ್ಟುಹಬ್ಬವಿತ್ತು. ನನ್ನ ಹೆಂಡತಿಯೇ ನನಗೆ ಶಕ್ತಿ, ಧೈರ್ಯ, ಭರವಸೆ ಎಂದು ರಿಷಬ್ ಶೆಟ್ಟಿ ಅನೇಕ ಸಂದರ್ಭದಲ್ಲಿ ಹೇಳಿದ್ದಾರೆ. ಹುಟ್ಟುಹಬ್ಬದಂದು ಪತ್ನಿಗೆ ವಿಶೇಷವಾಗಿಯೇ ವಿಶ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಿಷಬ್, ಪ್ರಗತಿ ಶೆಟ್ಟಿಗೆ ಹಸ್ತಲಾಘವ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡು, ಹ್ಯಾಪಿ ಬರ್ತ್ಡೇ ಸ್ವೀಟ್ ಹಾರ್ಟ್! ನಿರಂತರ ಬೆಂಬಲಕ್ಕಾಗಿ ಮತ್ತು ನನ್ನೆಲ್ಲಾ ಕೆಲಸಗಳಿಗೂ ಶಕ್ತಿಯಾಗಿ ನಿಂತ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು.. ನೂರು ಕಾಲ ಖುಷಿಯಾಗಿ ಬಾಳು " ಎಂದು ವಿಶ್ ಮಾಡಿದ್ದರು.
ಸದಾ ಫ್ಯಾಮಿಲಿ ಜೊತೆ ಎಲ್ಲಾ ಮೊಮೆಂಟ್ಗಳನ್ನು ರಿಷಬ್ ಶೆಟ್ಟಿ ಎಂಜಾಯ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಕಾಂತಾರ ಸಿನಿಮಾದ ನಟನೆಗಾಗಿ ಶೆಟ್ರಿಗೆ ದಾದಾ ಸಾಹೇಬ್ ಫಾಲ್ಕೆ ಚಿತ್ರೋತ್ಸವ ಪ್ರಶಸ್ತಿ ಅರಸಿ ಬಂದಿತ್ತು. ಈ ಸುಂದರ ಕ್ಷಣವನ್ನು ಕೂಡ ಹೆಂಡತಿ, ಮಕ್ಕಳ ಜೊತೆಗೆ ಶೇರ್ ಮಾಡಿಕೊಂಡಿದ್ದರು. ತಮಗೆ ಸಿಕ್ಕಿದ ಪ್ರಶಸ್ತಿಯನ್ನು ಮುಂದಿರಿಸಿ ಹೆಂಡತಿ, ತಮ್ಮಿಬ್ಬರು ಮಕ್ಕಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಅಷ್ಟೇ ಅಲ್ಲದೇ ಪ್ರಗತಿ ಕೂಡ ಗಂಡನಿಗೆ ಶುಭ ಹಾರೈಸಿ ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.
ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ದೇಶ, ವಿದೇಶದಲ್ಲಿ ಭಾರಿ ಜನಮೆಚ್ಚುಗೆ ಗಳಿಸಿದೆ. ಇದೀಗ ಕಾಂತಾರ 2 ಚಿತ್ರದ ನಿರೀಕ್ಷೆಯಲ್ಲಿದ್ದಾರೆ ಲಕ್ಷಾಂತರ ಚಿತ್ರಪ್ರೇಮಿಗಳು. ಕಾಂತಾರ ತುಳು, ಕನ್ನಡ, ಮಲಯಾಳಂ, ಹಿಂದಿ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ಇದನ್ನೂ ಓದಿ: ಕನ್ನಡಕ್ಕೆ ಮತ್ತೊಂದು ದೊಡ್ಡ ಗೆಲುವಿನ ಲಕ್ಷಣ: ಕಬ್ಜ ಟ್ರೇಲರ್ ಅನಾವರಣಗೊಳಿಸಿದ ಅಮಿತಾಭ್ ಬಚ್ಚನ್