ETV Bharat / entertainment

ಗಡಿ ದಾಟಿ ಪ್ರಶಂಸೆ ಗಿಟ್ಟಿಸಿಕೊಂಡ ಕಾಂತಾರ.. ರಿಷಬ್​ ಬೆನ್ನು ತಟ್ಟಿದ ಗೋವಾ ಸಿಎಂ - Goa CM Pramod Sawant

ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Rishab shetty met Goa CM Pramod Sawant
ರಿಷಬ್​ ಶೆಟ್ಟಿ ಪ್ರಮೋದ್ ಸಾವಂತ್ ಭೇಟಿ
author img

By

Published : Nov 25, 2022, 4:25 PM IST

ಭಾರತೀಯ ಚಿತ್ರರಂಗದಲ್ಲಿ ಕಾಂತಾರ ಸಿನಿಮಾದ್ದೇ ಹವಾ. ಚಿತ್ರ ಬಿಡುಗಡೆ ಆಗಿ 50 ದಿನ ಕಳೆದರೂ ಕ್ರೇಜ್​ ಕಡಿಮೆಯಾಗಿಲ್ಲ. ಈಗಾಗಲೇ ಕನ್ನಡ ಅಲ್ಲದೇ ಹಿಂದಿ, ತೆಲುಗು, ತಮಿಳು, ಮಲೆಯಾಳಂನಲ್ಲಿ ಬಿಡುಗಡೆ ಆಗಿ 400 ಕೋಟಿ ಕಲೆಕ್ಷನ್​ ಮಾಡಿರುವ ಕಾಂತಾರ ತುಳು ಭಾಷೆಯಲ್ಲೂ ಬಿಡುಗಡೆ ಆಗಲು ಸಜ್ಜಾಗಿದೆ.

  • Met and interacted with Actor, Writer, Filmmaker @shetty_rishab at Mahalaxmi, Panaji.

    His film Kantara has received popular acclaim. Discussed various issues and reiterated the support of Govt of Goa for the film production in Goa. pic.twitter.com/sWoWL9ANer

    — Dr. Pramod Sawant (@DrPramodPSawant) November 24, 2022 " class="align-text-top noRightClick twitterSection" data=" ">

ಗಡಿ ದಾಟಿ ಸದ್ದು ಮಾಡುತ್ತಿರುವ ರಿಷಬ್ ಅವರ ಈ ಚಿತ್ರಕ್ಕೆ ಗೋವಾ ಸಿಎಂ ಪ್ರಮೋದ್ ಸಾವಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ಮತ್ತು ಗೋವಾ ಸಿಎಂ ಇಬ್ಬರೂ ನಿನ್ನೆ ಸಂಜೆ ಭೇಟಿ ಆಗಿದ್ದಾರೆ. ಗೋವಾದಲ್ಲಿ ನಡೆಯುತ್ತಿರುವ ಇಂಟರ್​ನ್ಯಾಷನಲ್​​ ಫಿಲ್ಮ್​ ಫೆಸ್ಟಿವಲ್​ ಆಫ್​ ಇಂಡಿಯಾದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದು, ಅವರ ಚಿತ್ರದ ಬಗ್ಗೆ ಹಾಡಿ ಹೊಗಳಿದ್ದಾರೆ ಸಿಎಂ ಸಾವಂತ್.

ನಾನು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರನ್ನು ಭೇಟಿಯಾಗಿ ನಿಜವಾಗಿಯೂ ಉತ್ತಮ ಸಮಯವನ್ನು ಕಳೆದಿದ್ದೇನೆ. ನಮ್ಮ ಕಾಂತಾರ ಚಿತ್ರವನ್ನು ನೀವು ಇಷ್ಟಪಟ್ಟಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಚಿತ್ರಕ್ಕೆ ನೀವು ನೀಡಿದ ಮೆಚ್ಚುಗೆ ನನ್ನ ಹೃದಯ ತುಂಬಿದೆ ಎಂದು ನಟ ರಿಷಬ್​ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಸಿನಿಮಾಗಳು ಭಾಷೆಯ ತಡೆಗೋಡೆಗಳನ್ನು ಒಡೆಯುತ್ತಿವೆ: ರಿಷಬ್ ಶೆಟ್ಟಿ

ನಟ, ಬರಹಗಾರ, ಚಲನಚಿತ್ರ ನಿರ್ಮಾಪಕ ರಿಷಬ್​ ಶೆಟ್ಟಿ ಅವರನ್ನು ಭೇಟಿ ಮಾಡಿ ಸಂವಾದ ನಡೆಸಿದೆ. ಅವರ ಕಾಂತಾರ ಚಿತ್ರ ಜನಮನ್ನಣೆ ಗಳಿಸಿದೆ. ಸಿನಿಮಾ ಸಂಬಂಧ ವಿವಿಧ ವಿಷಯಗಳ ಕುರಿತು ಚರ್ಚಿಸಿದರು ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಟ್ವೀಟ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.