ETV Bharat / entertainment

ಎವರ್​ಗ್ರೀನ್ ಹೀರೋ ರಮೇಶ್ ಅರವಿಂದ್ ಹುಟ್ಟುಹಬ್ಬ.. ಶಿವಾಜಿ ಸುರತ್ಕಲ್ 2 ಟೀಸರ್ ರಿಲೀಸ್ - Ramesh Aravind life

ರಮೇಶ್ ಅರವಿಂದ್​ಗೆ ಹುಟ್ಟುಹಬ್ಬ ಹಿನ್ನೆಲೆ 8951599009 ಮತ್ತು 8951699009 ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸುವ ಮೂಲಕ ನೀವು ರಮೇಶ್​ ಅರವಿಂದ್​ ಅವರಿಗೆ ಶುಭಾಶಯ ತಿಳಿಸಬಹುದು.

Actor Ramesh Aravind birthday
ರಮೇಶ್ ಅರವಿಂದ್ ಹುಟ್ಟುಹಬ್ಬ
author img

By

Published : Sep 10, 2022, 12:41 PM IST

ಬಹುಭಾಷಾ ನಟ, ಚಂದನವನದ ಎವರ್​ಗ್ರೀನ್ ಹೀರೋ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್​ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 59ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಚಿತ್ರರಂಗ ಸೇರಿದಂತೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ಬ್ಯುಸಿಯಾಗಿರುವ ನಟ ರಮೇಶ್ ಅರವಿಂದ್ 1964ರ ಸೆಪ್ಟೆಂಬರ್​ 10ರಂದು ತಮಿಳುನಾಡಿನ ಕುಂಭಕೋಣಂನಲ್ಲಿ ಗೋವಿಂದಚಾರಿ ಅರವಿಂದ್ ಮತ್ತು ಸರೋಜಾ ಅವರ ಪುತ್ರನಾಗಿ ಜನಿಸಿದರು. 1991ರಲ್ಲಿ ಅರ್ಚನಾ ಅವರನ್ನು ಮದುವೆಯಾದ ಅವರು ನಿಹಾರಿಕಾ ಮತ್ತು ಅರ್ಜುನ್​​ ಎಂಬ ಇಬ್ಬರು ಮಕ್ಕಳನ್ನೊಳಗೊಂಡ ಸುಂದರ ಕುಟುಂಬ ಹೊಂದಿದ್ದಾರೆ.

Actor Ramesh Aravind birthday
ರಮೇಶ್​ ಅರವಿಂದ್​ಗೆ ಶುಭಾಶಯ ತಿಳಿಸಬಹುದು...

ಇವರು ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಪ್ರತಿಭಾನ್ವಿತ ನಟ. ಇದರ ಜೊತೆಗೆ ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿಯೂ ಸೇರಿ ಒಟ್ಟು ಆರು ಭಾಷೆಗಳ ಚಿತ್ರರರಂಗದಲ್ಲಿ ಕೆಲಸ ಮಾಡಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟು 34 ವರ್ಷಗಳಾಗಿದ್ದು ಸುಮಾರು 140 ಸಿನಿಮಾಗಳಲ್ಲಿ ಅಭಿನಯಿಸಿರುವುದು ಹೆಮ್ಮೆಯ ವಿಷಯ. ಕಿರುತೆರೆಯಲ್ಲಿ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಶೋ ನಿರೂಪಿಸಿ ಭೇಷ್ ಎನಿಸಿಕೊಂಡಿದ್ದಾರೆ. ಹಲವು ಸಾಧಕರನ್ನು ಪರಿಚಯಿಸುವ ಈ ಶೋ ಭಾರಿ ಜನಮೆಚ್ಚುಗೆ ಪಡೆದುಕೊಂಡಿತು. ಇದಲ್ಲದೇ ಹಲವು ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Actor Ramesh Aravind birthday
ಎವರ್​ಗ್ರೀನ್ ಹೀರೋ ರಮೇಶ್ ಅರವಿಂದ್

ವೃತ್ತಿ ಜೀವನಕ್ಕೆ ಕಾಲಿಟ್ಟು ಸತಿ ಲೀಲಾವತಿ, ಡ್ಯುಎಟ್, ಅಮೇರಿಕಾ ಅಮೇರಿಕಾ, ನಮ್ಮೂರ ಮಂದಾರ ಹೂವೆ, ಆಪ್ತಮಿತ್ರ, ಉಲ್ಟಾ ಪಲ್ಟಾ, ಹೂಮಳೆ, ಚಂದ್ರಮುಖಿ ಪ್ರಾಣಸಖಿ, ರಾಮ ಶಾಮ ಭಾಮ, ಕೋತಿಗಳು ಸಾರ್ ಕೋತಿಗಳು, ಕತ್ತೆಗಳು ಸಾರ್ ಕತ್ತೆಗಳು, ಶಿವಾಜಿ ಸುರತ್ಕಲ್, ಅನುರಾಗ ಸಂಗಮ ಮತ್ತು ಅಮೃತವರ್ಷಿಣಿ ಅಂತಹ ಪ್ರಮುಖ ಚಿತ್ರಗಳಲ್ಲಿ ನಟಿಸಿದ್ದಾರೆ. ಅತ್ಯುತ್ತಮ ನಟ ಪ್ರಶಸ್ತಿ, ಫಿಲ್ಮ್ ಫೇರ್ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗನ್ನು ಮುಡಿಗೇರಿಸಿಕೊಂಡಿದ್ದಾರೆ.

Actor Ramesh Aravind birthday
ಎವರ್​ಗ್ರೀನ್ ಹೀರೋ ರಮೇಶ್ ಅರವಿಂದ್

2018ರಿಂದ ಈಚೆಗೆ ಅವರ ನಟನೆಯ ಬೆರಳೆಣಿಕೆ ಸಿನಿಮಾಗಳು ಮಾತ್ರ ರಿಲೀಸ್ ಆಗಿವೆ. 2020ರಲ್ಲಿ ‘ಶಿವಾಜಿ ಸುರತ್ಕಲ್’ ಸಿನಿಮಾ ತೆರೆಗೆ ಬಂದು ಮೆಚ್ಚುಗೆ ಪಡೆದುಕೊಂಡಿತು. ಈಗ ಈ ಚಿತ್ರದ ಸೀಕ್ವೆಲ್ ಬರುತ್ತಿದೆ. ಥ್ರಿಲ್ಲಿಂಗ್ ಜೊತೆಗೆ ಅಪ್ಪ-ಮಗಳ ಬಾಂಧವ್ಯದ ಕತೆಯಿರುವ ಶಿವಾಜಿ ಸುರತ್ಕಲ್ 2 ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಅಭಿಮಾನಿಗಳಿಗೆ ಗಿಫ್ಟ್​ ನೀಡಿದ್ದಾರೆ.

  • " class="align-text-top noRightClick twitterSection" data="">

ಇನ್ನು, ತಮ್ಮ ಸಾವಿರಾರು ಅಭಿಮಾನಿಗಳಿಗೆ ತಮ್ಮ ಹುಟ್ಟು ಹಬ್ಬಕ್ಕೆ ಶುಭಾಶಯ ಅಥವಾ ಕೆಲವು ವಿಚಾರಗಳ ಬಗ್ಗೆ ಮಾತನಾಡೋದಕ್ಕೆ ತಮ್ಮ ಫೋನ್‌ ನಂಬರ್ ಕೊಟ್ಟಿರುವ ಮೊದಲ ಸೆಲೆಬ್ರಿಟಿ ಆಗಿದ್ದಾರೆ. ಹೌದು, ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಫೋನ್ ನಂಬರ್‌ಗಳನ್ನು ಯಾರಿಗೂ ಸಿಗದ ರೀತಿ ನೋಡಿಕೊಳ್ಳುತ್ತಾರೆ. ಕಾಪಾಡಿಕೊಳ್ಳುತ್ತಾರೆ. ಆದರೆ ರಮೇಶ್ ಅರವಿಂದ್ ಅವರು ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಎಂದು ಫೋನ್ ನಂಬರ್ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ RRR ದಾಖಲೆ ಬ್ರೇಕ್​ ಮಾಡಿದ 'ಬ್ರಹ್ಮಾಸ್ತ್ರ'.. ಟೀಕೆ ನಡುವೆಯೂ ಒಳ್ಳೆಯ ಕಲೆಕ್ಷನ್​​

ಅಭಿಮಾನಿಗಳು 8951599009 ಮತ್ತು 8951699009 ಮೊಬೈಲ್​ ಸಂಖ್ಯೆಗೆ ವಾಟ್ಸಪ್​ ಸಂದೇಶ ಕಳಿಸುವ ಮೂಲಕ ರಮೇಶ್​ ಅರವಿಂದ್​ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು. ಇದರ ಜೊತೆಗೆ ರಮೇಶ್​ ಅರವಿಂದ್​ ಅವರಿಗೆ ಏನಾದರೂ ಪ್ರಶ್ನೆಗಳನ್ನೂ ಕೇಳಬಹುದು. ಹೀಗೆ ಮೆಸೇಜ್ ಮಾಡುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೇ ನಮೂದಿಸಿರಬೇಕು. ಮೆಸೇಜ್​ ಮಾಡಿದ ಪ್ರತಿಯೊಬ್ಬರಿಗೂ ರಮೇಶ್​ ಅರವಿಂದ್​ ಅವರೇ ಸ್ವತಃ ಪ್ರತಿಕ್ರಿಯೆ ನೀಡಲಿದ್ದಾರೆ. ಎಲ್ಲರಿಗಿಂತ ವಿಭಿನ್ನವಾಗಿ ಶುಭಾಶಯ ತಿಳಿಸಿದವರಿಗೆ ಖುದ್ದಾಗಿ ರಮೇಶ್ ಅರವಿಂದ್ ಕರೆ ಮಾಡಿ ಮಾತನಾಡಲಿದ್ದಾರೆ ಎನ್ನುವುದು ವಿಶೇಷ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.