ETV Bharat / entertainment

ರಜನಿಕಾಂತ್ ಜನ್ಮದಿನ: 'ತಲೈವಾ' ಸಿನಿಪಯಣ, ಮುಂದಿನ ಸಿನಿಮಾಗಳ ಮಾಹಿತಿ ನಿಮಗಾಗಿ - Rajinikanth upcoming movies

Rajinikanth Birthday: ಅಭಿಮಾನಿಗಳ ಪ್ರೀತಿಯ ತಲೈವರ್ ಇಂದು 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.

Rajinikanth birthday
ರಜನಿಕಾಂತ್ ಜನ್ಮದಿನ
author img

By ETV Bharat Karnataka Team

Published : Dec 12, 2023, 2:10 PM IST

ರಜನಿಕಾಂತ್.. ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟ. ಸುಮಾರು 5 ದಶಕಗಳಿಂದ ನಟನ ಸಿನಿಮಾಗಳು ಅವರ ನಟನಾ ಕೌಶಲ್ಯಗಳನ್ನು ಸಾಬೀತುಪಡಿಸುತ್ತಿವೆ. ಅಭಿಮಾನಿಗಳು ರಜನಿಕಾಂತ್ ಅವರನ್ನು ಪ್ರೀತಿಯಿಂದ 'ಸೂಪರ್ ಸ್ಟಾರ್', 'ತಲೈವಾ' ಎಂದು ಕರೆಯುತ್ತಾರೆ. ಯುವ ಪೀಳಿಗೆಗೆ ಸ್ಫೂರ್ತಿ ಇವರು. ಅಭಿಮಾನಿಗಳ ಪ್ರೀತಿಯ ತಲೈವರ್ ಇಂದು 73ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟನಿಗೆ ಕುಟುಂಬಸ್ಥರು, ಆಪ್ತರು, ಸಿನಿ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಸೂಪರ್​ ಸ್ಟಾರ್​ನ ಸಿನಿಪಯಣ ಮೆಲುಕು ಹಾಕಲಾಗುತ್ತಿದೆ. ಅಭಿನಮಾನಿಗಳು ಮುಂದಿನ ಸಿನಿಮಾಗಳ ಬಗ್ಗೆ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

1975ರಲ್ಲಿ ಸಿನಿಪಯಣ ಆರಂಭ: 1950ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಜನಿಸಿದರು. ಶಿವಾಜಿ ರಾವ್ ಗಾಯಕ್ವಾಡ್ ನಟನ ಮೂಲ ಹೆಸರು. 1975ರ ಸಂದರ್ಭ ಬಣ್ಣದ ಲೋಕದಲ್ಲಿ ವೃತ್ತಿಜೀವನ ಆರಂಭಿಸಿದ ರಜನಿಕಾಂತ್​ ಭಾರತೀಯ ಚಿತ್ರರಂಗದಲ್ಲಿ ಶ್ರೇಷ್ಠ ನಟನಾಗಿ ಗುರುತಿಸಿಕೊಂಡಿದ್ದಾರೆ. 73ರ ಹರೆಯದಲ್ಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ. ವಿನಮ್ರ ವ್ಯಕ್ತಿತ್ವದ ಮೂಲಕ ಜನಮನ ಸೆಳೆದ ನಟ ಈವರೆಗೆ ಸುಮಾರು 170 ಸಿನಿಮಾಗಳಲ್ಲಿ ನಟಿಸಿದ್ದಾರೆ. 1975ರಲ್ಲಿ ಅಪೂರ್ವ ರಾಗಂಗಳ್​​​ ಎಂಬ ತಮಿಳು ಸಿನಿಮಾ ಮೂಲಕ ನಟನೆ ಆರಂಭಿಸಿದ ರಜನಿ ಅವರು ತೆಲುಗು, ಕನ್ನಡ, ಹಿಂದಿ, ಬೆಂಗಾಲಿ, ಮಲಯಾಳಂ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ಕೊಟ್ಟ ಕೊಡುಗೆಗಳಿಗಾಗಿ ಪದ್ಮಭೂಷಣ, ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆಯಂತಹ ಅತ್ಯುನ್ನತ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮರಾಠಿ ಪೊಲೀಸ್ ಕಾನ್​ಸ್ಟೇಬಲ್​​ ಮಗನಾಗಿ ಜನಿಸಿದ ರಜನಿಕಾಂತ್ ಅವರ ಬಾಲ್ಯ ಕಷ್ಟಕರವಾಗಿತ್ತು. ಹಣಕಾಸಿನ ಸಮಸ್ಯೆಗಳಿದ್ದವು. ತಮ್ಮ ಕುಟುಂಬಕ್ಕೆ ಸಾಥ್ ನೀಡಲು ಕೂಲಿ, ಬಸ್ ಕಂಡಕ್ಟರ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲಾ ಅಡೆತಡೆಗಳನ್ನೆದುರಿಸಿ ಸದ್ಯ ಇಂಡಿಯನ್​ ಸಿನಿಮಾ ಇಂಡಸ್ಟ್ರಿಯ ಸೂಪರ್​ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

ನಟನಾ ಸಾಮರ್ಥ್ಯ ಸಾಬೀತು; ತಮ್ಮ ವೃತ್ತಿಜೀವನದ ಆರಂಭದಲ್ಲಿ, ಕಮರ್ಷಿಯಲ್​​ ಮತ್ತು ಕ್ಲಾಸಿಕ್ ಚಿತ್ರಗಳೆರಡರ ಮೇಲೂ ಗಮನ ಹರಿಸಿದರು. ಮೊದಲ ಸಿನಿಮಾಗಳಾದ ಮುಳ್ಳುಂ ಮಲರುಂ, ಅಪೂರ್ವ ರಾಗಂಗಳ್, ತಿಲ್ಲು ಮುಲ್ಲು, ಪತಿನಾರು ವಯದಿನಿಲೆ ಸೇರಿದಂತೆ ಹಲವು ಸಿನಿಮಾಗಳಲ್ಲಿನ ಪಾತ್ರಗಳು ನಟನ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿ, ಚಿತ್ರೋದ್ಯಮದಲ್ಲಿ ಅವರ ಸ್ಥಾನವನ್ನು ಭದ್ರಪಡಿಸಿದವು. ಈವರೆಗೆ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ಫ್ಯಾಮಿಲಿ ಡ್ರಾಮಾಗಳು ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಲು ಸಹಾಯ ಮಾಡಿವೆ. ಆನ್-ಸ್ಕ್ರೀನ್ ಪಾತ್ರಗಳು ಅನೇಕರ ನಿಜ ಜೀವನದ ಪಾತ್ರಗಳನ್ನು ಹೋಲುತ್ತಿದ್ದವು. ಈ ಮೂಲಕ ಅಭಿಮಾನಿಗಳಿಗೆ ಅಮೂಲ್ಯ ಸಂದೇಶಗಳು ಸಿಕ್ಕಿವೆ. ವಾಣಿಜ್ಯ ಚಿತ್ರಗಳ ಜೊತೆಗೆ ಕಂಟೆಂಟ್​ ಆಧಾರಿತ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಬಾಕ್ಸ್ ಆಫೀಸ್ ಕಿಂಗ್: ಶ್ರೀ ರಾಘವೇಂದ್ರ, ಚಂದ್ರಮುಖಿ, ಆರಿಲಿರಿಂದು ಅರುವತು ವರೈ, ಬಿಲ್ಲ, ಅಣ್ಣಾಮಲೈ ಸೇರಿದಂತೆ ಹಲವು ಸಿನಿಮಾಗಳು ಪಾತ್ರಗಳ (Character-driven) ಮಹತ್ವ ಸಾರುವ ಚಲನಚಿತ್ರಗಳಾಗಿವೆ. ಇವರು ದಕ್ಷಿಣ ಚಿತ್ರರಂಗದ ಬಾಕ್ಸ್ ಆಫೀಸ್ ಕಿಂಗ್ ಆಗಿ ಗುರುತಿಸಿಕೊಂಡಿದ್ದಾರೆ. ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿವೆ. ಹಲವು ಬಾಕ್ಸ್ ಆಫೀಸ್ ದಾಖಲೆಗಳನ್ನು ಹೊಂದಿದ್ದಾರೆ. ನಟನ '2.0' ಈವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ತಮಿಳು ಚಿತ್ರ. ಕಬಾಲಿ ನಟ ನಿರಂತರವಾಗಿ ಹಿಟ್‌ಗಳನ್ನು ಕೊಡುತ್ತಾ ಬಂದಿದ್ದು, ಇತ್ತೀಚಿನ 'ಜೈಲರ್' ಕೂಡ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದೆ.

ಮುಂದಿನ ಸಿನಿಮಾಗಳು: ಪುತ್ರಿ ಐಶ್ವರ್ಯಾ ರಜನಿಕಾಂತ್ ಆ್ಯಕ್ಷನ್​ ಕಟ್​ ಹೇಳಿರುವ ಬಹುನಿರೀಕ್ಷಿತ ಸಿನಿಮಾ 'ಲಾಲ್​ ಸಲಾಮ್​'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್​ ಹಂತದಲ್ಲಿದ್ದು, ಮೊಯ್ದೀನ್ ಭಾಯ್ ಪಾತ್ರದಲ್ಲಿ ರಜನಿ ನಟಿಸಿದ್ದಾರೆ. 2024ರ ಸಂಕ್ರಾಂತಿ ಸಂದರ್ಭ ಸಿನಿಮಾ ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: ವೈಷ್ಣೋದೇವಿ ಸನ್ನಿಧಿಯಲ್ಲಿ ಶಾರುಖ್​​ ಖಾನ್​: ಪಠಾಣ್​​, ಜವಾನ್ ಬಳಿಕ 'ಡಂಕಿ'ಗಾಗಿ ದೇಗುಲಕ್ಕೆ ಬಂದ ಸ್ಟಾರ್

ತಲೈವರ್ 170 ರಜನಿಕಾಂತ್​ ಅವರ ಮತ್ತೊಂದು ಬಹುನಿರೀಕ್ಷಿತ ಸಿನಿಮಾ. ತಾತ್ಕಾಲಿಕ ಶೀರ್ಷಿಕೆಯುಳ್ಳ ಈ ಸಿನಿಮಾಗೆ ಟಿಜೆ ಜ್ಞಾನವೆಲ್​​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಅಮಿತಾಭ್​ ಬಚ್ಚನ್​ ಸೇರಿದಂತೆ ಹಲವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. 2024ರಲ್ಲಿ ಸಿನಿಮಾವನ್ನು ಬಿಡುಗಡೆಗೊಳಿಸುವ ಯೋಜನೆ ಚಿತ್ರತಂಡದ್ದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.