ETV Bharat / entertainment

ಮದುವೆ ಬಗ್ಗೆ ಬಹಿರಂಗಪಡಿಸಿದ ನಟ ಪ್ರಭಾಸ್: ಎಲ್ಲಿ, ಯಾವಾಗ, ವಧು ಯಾರು? - Kriti Sanon

ನಿನ್ನೆ ಸಂಜೆ ನಡೆದ ಅದ್ಧೂರಿ ಆದಿಪುರುಷ್ ಪ್ರೀ ರಿಲೀಸ್ ಈವೆಂಟ್​ನಲ್ಲಿ ನಟ ಪ್ರಭಾಸ್ ತಮ್ಮ ಮದುವೆ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

Actor Prabhas marriage
ನಟ ಪ್ರಭಾಸ್ ಮದುವೆ
author img

By

Published : Jun 7, 2023, 10:34 AM IST

Updated : Jun 7, 2023, 11:15 AM IST

ಪ್ರಭಾಸ್ ಟಾಲಿವುಡ್‌ನ ಬ್ಯಾಚುಲರ್ ಸ್ಟಾರ್. ಪ್ಯಾನ್​ ಇಂಡಿಯಾ ಸ್ಟಾರ್ ಮದುವೆಯ ಬಗ್ಗೆ ಈಗಾಗಲೇ ಹಲವು ಸುದ್ದಿಗಳು ಮತ್ತು ವದಂತಿಗಳು ಹರಡಿವೆ. ಅದಕ್ಕೆ ಅವರು ಹಲವು ಬಾರಿ ಪ್ರತಿಕ್ರಿಯೆ ಕೂಡ ಕೊಟ್ಟಿದ್ದಾರೆ. ವಯಸ್ಸು 43 ಆದರೂ ಯಾಕಿನ್ನು ಮದುವೆ ಆಗಿಲ್ಲ ಎಂಬ ಪ್ರಶ್ನೆ ಹಲವು ಅಭಿಮಾನಿಗಳದ್ದು.

ಈ ವಿಚಾರವಾಗಿ ಟಾಲಿವುಡ್​ ನಟ ಕೆಲ ದಿನಗಳಿಂದ ಮೌನ ವಹಿಸಿದ್ದಾರೆ. ಅದರ ನಡುವೆಯೇ ಪ್ರಭಾಸ್ ಮತ್ತು ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಆದಿಪುರಷ್ ಸಿನಿಮಾ ಸಹನಟಿ ಕೃತಿ ಸನೋನ್ ಜೊತೆ ಪ್ರೇಮಾಂಕುರವಾಗಿದೆ ಎಂಬ ಸುದ್ದಿ ಹರಡಿತ್ತು. ಆದರೆ ಡೇಟಿಂಗ್​ ವದಂತಿಯನ್ನು ಈ ಜೋಡಿ ಪರಿಗಣನೆಗೆ ತೆಗೆದುಕೊಂಡಿಲ್ಲ.

ನಟ ಪ್ರಭಾಸ್ ಕೊನೆಗೂ ತಮ್ಮ ಮದುವೆಯ ಬಗ್ಗೆ ಆದಿಪುರುಷ್ ಪ್ರೀ ರಿಲೀಸ್ ಸಮಾರಂಭದಲ್ಲಿ (Adipurush prerelease event) ಮಾತನಾಡಿದ್ದಾರೆ. ಅವರು ತಮ್ಮ ಅಭಿಮಾನಿಗಳಿಗೆ ಮದುವೆ ಒಂದು ಸಣ್ಣ ಸುಳಿವು ನೀಡಿದರು. ಮದುವೆಯಾದರೆ ತಿರುಪತಿಯಲ್ಲಿ ಆಗುತ್ತೇನೆ ಎಂದು ತಿಳಿಸಿದರು. "ಯಾವಾಗ ಬೇಕಾದರೂ ತಿರುಪತಿಯಲ್ಲಿ ಆಗುತ್ತೇನೆ" ಎಂದು ಹೇಳಿದರು.

  • " class="align-text-top noRightClick twitterSection" data="">

ಆದಿಪುರುಷ್​ ಟ್ರೇಲರ್​ ಬಗ್ಗೆ ಮಾತನಾಡುತ್ತಾ, ಏಳು ತಿಂಗಳ ಹಿಂದೆ 3ಡಿ ಟೀಸರ್ ಅನ್ನು ಅಭಿಮಾನಿಗಳಿಗೆ ತೋರಿಸಲು ನಿರ್ದೇಶಕರನ್ನು ಕೇಳಿದ್ದೆ. ಅವರ ಪ್ರೋತ್ಸಾಹದಿಂದ ತಂಡ ಮುಂದೆ ಸಾಗಿದೆ. ಮತ್ತೊಮ್ಮೆ ಅಭಿಮಾನಿಗಳಿಗೆ ಟ್ರೇಲರ್​​ ತೋರಿಸಲು ಕೇಳಿದ್ದೆ. ಸದ್ಯ ಎರಡನೇ ಟ್ರೇಲರ್​ ಅನಾವರಣಗೊಂಡಿದೆ. ಅವರೇ ನನ್ನ ಶಕ್ತಿ. ನಿರ್ದೇಶಕರು, ನಿರ್ಮಾಪಕರು ಮತ್ತು ತಾಂತ್ರಿಕ ತಂಡ ಶ್ರಮ ವಹಿಸಿದೆ. ಎಂಟು ತಿಂಗಳ ಕಾಲ ಈ ಚಿತ್ರಕ್ಕಾಗಿ ಹೋರಾಟ ನಡೆಯಿತು. ಪ್ರತಿಯೊಬ್ಬರೂ ದಿನಕ್ಕೆ 20 ಗಂಟೆ ಕೆಲಸ ಮಾಡಿದರು. ಇದು ಕೇವಲ ಸಿನಿಮಾ ಅಲ್ಲ, ನಮ್ಮ ಅದೃಷ್ಟ.

ಮೆಗಾಸ್ಟಾರ್ ಚಿರಂಜೀವಿ ಸರ್ ಅವರನ್ನು ಭೇಟಿ ಆದಾಗ 'ರಾಮಾಯಣ ಮಾಡುತ್ತಿದ್ದೀರಾ?' ಎಂದು ಕೇಳಿದರು. ಹೌದು ಎಂದು ಉತ್ತರಿಸಿದ್ದೆ. ಇದು ಎಲ್ಲರಿಗೂ ಸಿಗುವ ಅವಕಾಶ ಅಲ್ಲ, ನಿಮಗೆ ಸಿಕ್ಕಿದೆ. ನಿಜವಾಗಲೂ ನೀವು ಅದೃಷ್ಟವಂತರು ಎಂದು ಹೇಳಿದರು. ಇಂತಹ ಸಿನಿಮಾ ಮಾಡುವಾಗ ಕಷ್ಟಗಳು ಹೆಚ್ಚು. ಹಾಗೆಯೇ ಈ ಸಿನಿಮಾ ಕೂಡ ಮೊದಲಿನಿಂದಲೂ ಕಷ್ಟಗಳನ್ನು, ಹಲವು ಸವಾಲುಗಳನ್ನು ಎದುರಿಸಿದೆ. ಓಂ ರಾವುತ್​ ರಾಕ್‌ಸ್ಟಾರ್‌ನಂತೆ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. 20 ವರ್ಷಗಳಲ್ಲಿ ಇಷ್ಟು ಶ್ರಮಿಸಿದ ನಿರ್ದೇಶಕನನ್ನು ನಾನು ನೋಡಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ವಿಡಿಯೋ: ತಿರುಪತಿ ತಿಮ್ಮಪ್ಪನ ದರ್ಶನ ಪಡೆದ 'ಆದಿಪುರುಷ್' ಪ್ರಭಾಸ್​​

ಸಮಾರಂಭಕ್ಕೆ ಸಾಕ್ಷಿಯಾಗಿದ್ದಕ್ಕೆ ಚಿನಜೀಯರ್ ಸ್ವಾಮಿ ಅವರಿಗೆ ವಿಶೇಷ ಧನ್ಯವಾದಗಳು. ಅವರ ಆಗಮನದಿಂದ ಈ ಕಾರ್ಯಕ್ರಮಕ್ಕೆ ಉತ್ತಮ ಆದ್ಯತೆ ಸಿಕ್ಕಿತು. ಇನ್ನೂ ಈ ಚಿತ್ರ ನಿರ್ಮಾಪಕ ಭೂಷಣ್‌ಗೆ ಭಾವನಾತ್ಮಕವಾಗಿದೆ. ಅವರು ಹೆಚ್ಚು ಶ್ರಮಿಸಿದ್ದಾರೆ. ಕಣ್ಣಲ್ಲಿ ನೀರು ತುಂಬಿರುವ ಜಾನಕಿಯ (ಸೀತೆ, ಕೃತಿ ಸನೋನ್​) ಒಂದೇ ಒಂದು ಪೋಸ್ಟರ್‌ ಎಲ್ಲರ ಗಮನ ಸೆಳೆದಿದೆ. ಅವರು ಪ್ರಸಿದ್ಧ ಮತ್ತು ಉತ್ತಮ ಮಹಿಳಾ ನಾಯಕಿಯಾಗಿದ್ದಾರೆ ಎಂದ ಪ್ರಭಾಸ್ ಉಳಿದ ಕಲಾವಿದರ ಬಗ್ಗೆಯೂ ಶ್ಲಾಘಿಸಿದರು.

ಇದನ್ನೂ ಓದಿ: ಅದ್ಧೂರಿಯಾಗಿ ನಡೆಯಿತು ಆದಿಪುರುಷ್ ಪ್ರೀ ರಿಲೀಸ್​ ಈವೆಂಟ್.. ಫೋಟೋಗಳಲ್ಲಿ​​ ನೋಡಿ

ಇನ್ನು ಮುಂದೆ ನಾನು ಹೆಚ್ಚು ಚಿತ್ರಗಳನ್ನು ಮಾಡುತ್ತೇನೆ. ನಾನು ವರ್ಷದಲ್ಲಿ ಎರಡರಿಂದ ಮೂರು ಚಿತ್ರಗಳೊಂದಿಗೆ ಹೊರಬರಬಹುದು. ನಾನು ಕಡಿಮೆ ಮಾತನಾಡುತ್ತೇನೆ ಮತ್ತು ಹೆಚ್ಚು ಚಿತ್ರಗಳನ್ನು ಮಾಡುತ್ತೇನೆ" ಎಂದು ಪ್ರಭಾಸ್ ಹೇಳಿದರು. ಅಲ್ಲದೇ ಮದುವೆ ಬಗ್ಗೆ ಅಭಿಮಾನಿಗಳು ಕೇಳಿದಾಗ, "ಯಾವಾಗ ಬೇಕಾದರೂ ತಿರುಪತಿಯಲ್ಲಿ ಆಗುತ್ತೇನೆ" ಎಂದು ಉತ್ತರಿಸಿದರು.

Last Updated : Jun 7, 2023, 11:15 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.