ETV Bharat / entertainment

ಕಾಂತಾರ ಸಿನಿಮಾ ವೀಕ್ಷಿಸಿದ ಪ್ರಭಾಸ್: ರಿಷಬ್ ಶೆಟ್ಟಿಗೆ ಬಾಹುಬಲಿ ವಿಶ್ - etv bharat kannada

ನಟ ಪ್ರಭಾಸ್ ಅವರು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಸಿರುವ ಕಾಂತಾರ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

actor prabhas compliments on kantara movie
ಕಾಂತಾರ ಸಿನಿಮಾ ಮೆಚ್ಚಿದ ಪ್ರಭಾಸ್
author img

By

Published : Oct 1, 2022, 1:53 PM IST

ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಸಿರುವ ಕಾಂತಾರ ಸಿನಿಮಾ ನಿನ್ನೆಯಷ್ಟೇ ಬಿಡುಗಡೆ ಅಗಿ ಭಾರಿ ಮೆಚ್ಚುಗೆ ಗಳಿಸುತ್ತಿದೆ. ಸಾಕಷ್ಟು ಸಿನಿರಂಗದವರು ಕೂಡ ಸಿನಿಮಾ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದೀಗ ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಸಹ ಈ ಚಿತ್ರವನ್ನು ನೋಡಿ ಪ್ರಶಂಸೆ ಮಾಡಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಪ್ರಭಾಸ್, 'ಕಾಂತಾರ ಚಿತ್ರ ನೋಡಿ ಬಹಳ ಎಂಜಾಯ್ ಮಾಡಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಇಂಥದ್ದೊಂದು ಚಿತ್ರವನ್ನು ಕಟ್ಟಿಕೊಟ್ಟ ಚಿತ್ರತಂಡಕ್ಕೆ ಶುಭವಾಗಲಿ ಮತ್ತು ಚಿತ್ರಕ ದೊಡ್ಡ ಯಶಸ್ಸು ಗಳಿಸಲಿ' ಎಂದು ಹಾರೈಸಿದ್ದಾರೆ.

'ಕೆಜಿಎಫ್', 'ಯುವರತ್ನ' ಮುಂತಾದ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ವಿಜಯ್ ಕುಮಾರ್ ಕಿರಗಂದೂರು ‘ಕಾಂತಾರ’ ಚಿತ್ರವನ್ನು ತಮ್ಮ ಹೊಂಬಾಳೆ ಫಿಲ್ಮ್ಸ್ ಮೂಲಕ ನಿರ್ಮಿಸಿದ್ದಾರೆ. ಅದರ ಜೊತೆಗೆ ಪ್ರಭಾಸ್ ಅಭಿನಯದ 'ಸಲಾರ್' ಎಂಬ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ.

actor prabhas compliments on kantara movie
ಸೋಷಿಯಲ್ ಮೀಡಿಯಾದಲ್ಲಿ ಕಾಂತಾರ ಕುರಿತು ಅಭಿಪ್ರಾಯ ಹಂಚಿಕೊಂಡ ಪ್ರಭಾಸ್

ಇದನ್ನೂ ಓದಿ: ಕಾನನದೊಳಗಿನ ದಂತಕಥೆ..ಕಾಂತಾರದಲ್ಲಿ ಕರಾವಳಿ ಸೊಗಡು - ಹೊಸ ಅವತಾರದಲ್ಲಿ ರಿಶಬ್​​ ಶೆಟ್ಟಿ ಅಬ್ಬರ

ಪ್ರಭಾಸ್ ಅಲ್ಲದೇ ರಮ್ಯಾ, ರಕ್ಷಿತ್ ಶೆಟ್ಟಿ, ಅಮೂಲ್ಯ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಕರಾವಳಿ ಭಾಗದ ವಿಶಿಷ್ಟ ಆಚರಣೆಗಳನ್ನು ಕಟ್ಟಿಕೊಟ್ಟಿರುವ ರೀತಿಯ ಜೊತೆಗೆ, ಕ್ಲೈಮ್ಯಾಕ್ಸ್ ರೂಪಿಸಿರುವ ರೀತಿ ಮತ್ತು ಅದರಲ್ಲಿ ರಿಷಬ್ ನಟನೆ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಸೆಲೆಬ್ರಿಟಿ​ಗಳಿಗೆ ಕಾಂತಾರ ಸ್ಪೆಷಲ್ ಶೋ - ಸಿನಿಮಾ ಮೆಚ್ಚಿದ ಸಿನಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.