ಕನ್ನಡ ಚಿತ್ರರಂಗದಲ್ಲಿ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಾಣುತ್ತಿರುವ ಚಿತ್ರಗಳದ್ದೇ ಸುದ್ದಿ. ಈ ಪೈಕಿ ಉಪೇಂದ್ರ ಮತ್ತು ಸುದೀಪ್ ನಟನೆಯ ಬಹುನಿರೀಕ್ಷಿತ ಕಬ್ಜ ಕೂಡ ಒಂದು. ಟ್ರೇಲರ್ ಮತ್ತು ಅದ್ಧೂರಿ ಮೇಕಿಂಗ್ನಿಂದ ಸುದ್ದು ಮಾಡುತ್ತಿರುವ ಈ ಚಿತ್ರ ಇದೀಗ ತೆಲುಗು ನಾಡಿನಲ್ಲಿಯೂ ಗಮನ ಸೆಳೆಯುತ್ತಿದೆ. ಫೆ.4 ರಂದು ಹೈದರಾಬಾದ್ನಲ್ಲಿ ಚಿತ್ರದ ಹಾಡೊಂದು ಬಿಡುಗಡೆಯಾಗುತ್ತಿದ್ದು ಭರ್ಜರಿ ತಯಾರಿ ನಡೆಯುತ್ತಿದೆ.
ಆಂಧ್ರ ಮತ್ತು ತೆಲಂಗಾಣದ ವಿತರಣಾ ಹಕ್ಕು ಕೂಡ ಮಾರಾಟವಾಗಿದ್ದು ಹಾಡಿನ ಬಿಡುಗಡೆಯ ಜೊತೆಗೆ ವಿತರಣೆಯಿಂದಲೂ ಸಿನಿಮಾ ಸೌಂಡ್ ಮಾಡುತ್ತಿದೆ. ಟಾಲಿವುಡ್‌ನ ಖ್ಯಾತ ನಟ ನಿತಿನ್ ಈ ಸಿನಿಮಾವನ್ನು ಎರಡೂ ರಾಜ್ಯಗಳಿಗೆ ವಿತರಿಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವರು ಮಾಹಿತಿ ನೀಡಿದ್ದಾರೆ. ಉಪೇಂದ್ರ ಮತ್ತು ಸುದೀಪ್ ಅವರನ್ನು ನಿಮ್ಮ ಮುಂದೆ ತರಲು ಖುಷಿ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
"ಬಹುನಿರೀಕ್ಷಿತ ಕಬ್ಜ ಚಿತ್ರದ ಮೂಲಕ ಸೂಪರ್ ಸ್ಟಾರ್ಗಳಾದ ನಿಮ್ಮ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅವರನ್ನು ತೆಲುಗು ಭಾಷೆಯಲ್ಲಿ ತೆರೆಗೆ ತರಲು ನನಗೆ ಸಂತೋಷವಾಗುತ್ತಿದೆ. ಮಾರ್ಚ್ 17ರಂದು ದೊಡ್ಡ ಪರದೆಯಲ್ಲಿ ಪ್ರಜ್ವಲಿಸಲಿದೆ" ಎಂದು ನಟ ನಿತಿನ್ ಶೀರ್ಷಿಕೆ ತಿಳಿಸಿದ್ದಾರೆ.
-
Happy to bring you all @nimmaupendra Garu & @KicchaSudeep garu’s #Kabzaa in Telugu through our #RuchiraEntertainments & N Cinemas
— nithiin (@actor_nithiin) February 1, 2023 " class="align-text-top noRightClick twitterSection" data="
Gear up for Blazing Entertainment on the big screen,
This March 17th.@shriya1109 @rchandru_movies @RaviBasrur pic.twitter.com/hM74mUi5MU
">Happy to bring you all @nimmaupendra Garu & @KicchaSudeep garu’s #Kabzaa in Telugu through our #RuchiraEntertainments & N Cinemas
— nithiin (@actor_nithiin) February 1, 2023
Gear up for Blazing Entertainment on the big screen,
This March 17th.@shriya1109 @rchandru_movies @RaviBasrur pic.twitter.com/hM74mUi5MUHappy to bring you all @nimmaupendra Garu & @KicchaSudeep garu’s #Kabzaa in Telugu through our #RuchiraEntertainments & N Cinemas
— nithiin (@actor_nithiin) February 1, 2023
Gear up for Blazing Entertainment on the big screen,
This March 17th.@shriya1109 @rchandru_movies @RaviBasrur pic.twitter.com/hM74mUi5MU
ಕಬ್ಜದ ಹಿಂದಿ ಹಕ್ಕುಗಳು ಈಗಾಗಲೇ ಮಾರಾಟವಾಗಿವೆ. ಬಾಲಿವುಡ್ನ ಪ್ರತಿಷ್ಠಿತ ಸಂಸ್ಥೆಯೇ ಹಿಂದಿಯಲ್ಲಿ ರಿಲೀಸ್ ಮಾಡುತ್ತಿದೆ. ಅಲ್ಲದೇ, ಚಿತ್ರದ ಟ್ರೇಲರ್ ಬಿಡುಗಡೆಯನ್ನು ಮುಂಬೈನಲ್ಲಿ ಮಾಡಲು ಸಿದ್ಧತೆಯಾಗುತ್ತಿದೆ. ಈ ಹೊತ್ತಿನಲ್ಲಿ ನಿತಿನ್ ಕೂಡ ತೆಲುಗಿನ ಹಕ್ಕು ಖರೀದಿಸಿದ್ದಾರೆ. ಹಾಗಾಗಿ ಚಿತ್ರತಂಡದ ಖುಷಿ ಇಮ್ಮಡಿಯಾಗಿದೆ. ಇದಕ್ಕೆ ಪ್ರತಿಯಾಗಿ ನಿರ್ದೇಶಕ ಆರ್.ಚಂದ್ರು ಅವರು ನಟ ನಿತಿನ್ ಅವರಿಗೆ ಚಂದ್ರು ಧನ್ಯವಾದ ತಿಳಿಸಿದ್ದಾರೆ.
ಕಬ್ಜ ಒಂಬತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದ್ದು ಸಹಜವಾಗಿಯೇ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಕೆಜಿಎಫ್, ವಿಕ್ರಾಂತ್ ರೋಣ, 777 ಚಾರ್ಲಿ ಹಾಗೂ ಕಾಂತಾರ ಯಶಸ್ಸಿನ ಬಳಿಕ ಕನ್ನಡದ ಕೀರ್ತಿ ಪತಾಕೆ ಹಾರಿಸಲು ಕಬ್ಜ ಸಜ್ಜಾಗಿದೆ. ಈಗಾಗಲೇ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಚಂದ್ರು, ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಟ ದಿ. ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ ದಿನವಾದ ಮಾ.17 ರಂದು ಚಿತ್ರ ತೆರೆ ಕಾಣುತ್ತಿದೆ.
ಅದ್ಧೂರಿ ಮೇಕಿಂಗ್ನಿಂದ ಜನಪ್ರಿಯತೆ ಪಡೆಯುತ್ತಿರುವ ಕಬ್ಜ 1960 ಹಾಗೂ 80ರಲ್ಲಿ ನಡೆಯುವ ಕಥೆ ಹೊಂದಿದೆ. ಬಹುದೊಡ್ಡ ತಾರಾ ಬಳಗವೂ ಇದೆ. ತೆಲುಗಿನ ಖ್ಯಾತ ನಟರಾದ ಪೊಸನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ, ಐ ಮೂವಿ ಖ್ಯಾತಿಯ ಕಾಮರಾಜನ್, ನವಾಬ್ ಷಾ, ಜಗಪತಿ ಬಾಬು, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ರಾಹುಲ್ ದೇವ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಸೇರಿದಂತೆ ಅನೇಕರಿದ್ದಾರೆ.
ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಸಿದ್ದೇಶ್ವರ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ನಿರ್ಮಾಣದ ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್ ಸಾಹಸ ನಿರ್ದೇಶನವಿದೆ.
ಇದನ್ನೂ ಓದಿ: ಆಟೋ, ಕ್ಯಾಬ್ ಚಾಲಕರಿಂದ ಅನಾವರಣಗೊಂಡಿತು ಕೃಷಿ ನಟನೆಯ ರೂಪಾಯಿ ಚಿತ್ರದ ಟ್ರೇಲರ್