ನವಾಜುದ್ದೀನ್ ಸಿದ್ದಿಕಿ ಕೆಲಸ ಮತ್ತು ಪಾತ್ರಕ್ಕೆ ತಮ್ಮ ನಟನೆಯ ಸಮರ್ಪಣೆಯಿಂದ ಪ್ರೇಕ್ಷಕರನ್ನು ತಲುಪಿದ್ದಾರೆ. ಭರವಸೆಯ ನಟನಾಗಿ ಬಾಲಿವುಡ್ನ ಟಾಪ್ ನಟರ ಪಟ್ಟಿಯಲ್ಲಿದ್ದಾರೆ. ಸದ್ಯ ಹಡ್ಡಿ ಸಿನಿಮಾದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಬ್ಯುಸಿಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.
ನಟ ಈ ಮೊದಲು ತಮ್ಮ ಮುಂಬರುವ ಚಲನಚಿತ್ರ 'ಹಡ್ಡಿ'ಯ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಸುದ್ದಿಯಾಗಿದ್ದರು. ಇದೀಗ ನವಾಜುದ್ದೀನ್ ಅವರು ತಮ್ಮನ್ನು ತಾವು 'ಅವಳಾಗಿ' ಪರಿವರ್ತಿಸುವ ಒಂದು ನೋಟವನ್ನು ಚಿತ್ರ ತಯಾರಕರು ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತೃತೀಯಲಿಂಗಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.
ಮೇಕ್ಅಪ್ ಮತ್ತು ಹೇರ್ ಆರ್ಟಿಸ್ಟ್‌ಗಳ ತಂಡವು ನವಾಜುದ್ದೀನ್ ಸಿದ್ದಿಕಿ ಸುತ್ತಲೂ ಕೆಲಸ ಮಾಡುತ್ತಿರುವ, ಅವರು ಶೂಟಿಂಗ್ಗೆ ತಯಾರಾಗುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಹಡ್ಡಿಯ ಇತ್ತೀಚಿನ ತೆರೆಮರೆಯ ವಿಡಿಯೋ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ, ಈ ಮೇಕ್ಅಪ್ಗೆ 3 ಗಂಟೆ ಸಮಯ ಹಿಡಿಯುತ್ತದೆ ಎಂದು ಚಿತ್ರ ತಯಾರಕರು ಬಹಿರಂಗಪಡಿಸಿದ್ದಾರೆ.
- " class="align-text-top noRightClick twitterSection" data="
">
ಇತ್ತೀಚೆಗೆ ಚಿತ್ರದಲ್ಲಿನ ಅವರ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ ನವಾಜುದ್ದೀನ್, ವಿಶೇಷವಾದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಸಂಪೂರ್ಣ ನಟನಾಗಲು ಈ ಚಿತ್ರ ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಆರ್ಆರ್ಆರ್ ನಾಮ ನಿರ್ದೇಶನ.. ಧನ್ಯವಾದ ಅರ್ಪಿಸಿದ ರಾಜಮೌಳಿ
ಅಕ್ಷತ್ ಅಜಯ್ ಶರ್ಮಾ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹಡ್ಡಿ ಸಿನಿಮಾ ಅನ್ನು ಝೀ ಸ್ಟುಡಿಯೋಸ್, ಆನಂದಿತಾ ಸ್ಟುಡಿಯೋಸ್ ನಿರ್ಮಿಸುತ್ತಿವೆ. ಈ ಚಿತ್ರವು ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿದಂತೆ ಪಶ್ಚಿಮ ಉತ್ತರ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ. 2023ರಲ್ಲಿ ಹಡ್ಡಿ ಬಿಡುಗಡೆಯಾಗಲಿದೆ.