ETV Bharat / entertainment

''ನೀವು 25 ಕೋಟಿ ಕೊಟ್ಟರೂ ನಾನು ಸಣ್ಣ ಪಾತ್ರಗಳನ್ನು ಮಾಡಲ್ಲ'': ನವಾಜುದ್ದೀನ್ ಸಿದ್ದಿಕಿ

ಹಡ್ಡಿ ಸಿನಿಮಾದಲ್ಲಿ ನಟ ನವಾಜುದ್ದೀನ್ ಸಿದ್ದಿಕಿ ಬ್ಯುಸಿ - ತೃತೀಯ ಲಿಂಗಿ ಪಾತ್ರದಲ್ಲಿ ಬಾಲಿವುಡ್ ನಟ - ಸಣ್ಣ ಪುಟ್ಟ ಪಾತ್ರಗಳ ಬಗ್ಗೆ ಮಾತನಾಡಿದ ಸಿದ್ದಿಕಿ.

author img

By

Published : Jan 4, 2023, 4:16 PM IST

Actor Nawazuddin Siddiqui
ತೃತೀಯಲಿಂಗಿ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ

ಮುನ್ನಾಭಾಯಿ ಎಂಬಿಬಿಎಸ್ ಚಿತ್ರದಲ್ಲಿ ಜೇಬುಗಳ್ಳನ ಪಾತ್ರದಲ್ಲಿ ನಟಿಸಿದ್ದ ನಟ ನವಾಜುದ್ದೀನ್ ಸಿದ್ದಿಕಿ ಈಗ ಬಹು ಬೇಡಿಕೆ ನಟ. ನವಾಜುದ್ದೀನ್ ಸಿದ್ದಿಕಿ ಅವರ ನಟನೆ ಮತ್ತು ಅವರ ವಿವಿಧ ಅಭಿನಯ ಶೈಲಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರು ಅವರಿಗೆ ಪ್ರತಿ ಪಾತ್ರಕ್ಕೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಅವರ ಅಭಿನಯವನ್ನು ಹಾಡಿ ಹೊಗಳುವಲ್ಲಿ ಹಿಂದೆ ಬೀಳಲ್ಲ. ಇದೀಗ ಸಿನಿಮಾಗಳಲ್ಲಿ ಸಿಗುವ ಸಣ್ಣ ಪುಟ್ಟ ಪಾತ್ರಗಳ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಬನ್ನಿ, ನವಾಜುದ್ದೀನ್ ಸಿದ್ದಿಕಿ ಏನು ಹೇಳಿದರು ಮತ್ತು ಏಕೆ ಹೇಳಿದರೆ ಎಂಬುದನ್ನು ನೋಡೋಣ.

ಸಂಪತ್ತು, ಖ್ಯಾತಿಯನ್ನು ನಿಮ್ಮ ಗುಲಾಮರಾಗುವಂತೆ ಮಾಡಿ: ಮಾಧ್ಯಮ ವರದಿಗಳ ಪ್ರಕಾರ ನಟ ನವಾಜುದ್ದೀನ್ ಸಿದ್ದಿಕಿ ಸಂದರ್ಶನವೊಂದರಲ್ಲಿ, 'ನಾನು ನನ್ನ ವೃತ್ತಿಜೀವನದಲ್ಲಿ ಅನೇಕ ಸಣ್ಣ ಪಾತ್ರಗಳನ್ನು ಮಾಡಿದ್ದೇನೆ. ಈಗ ನೀವು ನನಗೆ 25 ಕೋಟಿ ರೂಪಾಯಿ ಕೊಟ್ಟರೂ ನಾನು ಯಾವುದೇ ಸಣ್ಣ ಪಾತ್ರವನ್ನು ಮಾಡುವುದಿಲ್ಲ. ನೀವು ಒಳ್ಳೆಯ ಕೆಲಸ ಮಾಡಿದರೆ, ಸಂಪತ್ತು ಮತ್ತು ಖ್ಯಾತಿಯು ಸ್ವಯಂಚಾಲಿತವಾಗಿ ನಿಮ್ಮನ್ನು ಹಿಂಬಾಲಿಸುತ್ತದೆ. ಅದೇ ನೀವು ಅವನ್ನು ಬೆನ್ನಟ್ಟಿದರೆ, ಅವುಗಳನ್ನು ಎಂದಿಗೂ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಸಂಪತ್ತು ಮತ್ತು ಖ್ಯಾತಿಯನ್ನು ನಿಮ್ಮ ಗುಲಾಮರಾಗುವಂತೆ ಮಾಡಿ. ಅವುಗಳು ನಿಮ್ಮ ಹಿಂದೆ ಬರುವಂತೆ ಕೆಲಸ ಮಾಡಿ ಎಂದು ಹೇಳಿದ್ದಾರೆ.

ಹಾಲಿವುಡ್‌ನಲ್ಲೂ ಸಣ್ಣ ಪಾತ್ರ ಮಾಡುವುದಿಲ್ಲ: ಉತ್ತಮ ನಟನೆಗೆ ಹೆಸರುವಾಸಿಯಾಗಿರುವ ನವಾಜುದ್ದೀನ್ ಸಿದ್ದಿಕಿ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಅಮೆರಿಕದ 'ಲಕ್ಷ್ಮಣ್ ಲೋಪೆಜ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ನಟನಿಗೆ ಮೊದಲು ಸಣ್ಣ ಪಾತ್ರ ನೀಡಲಾಯಿತು. ಆದರೆ, ಅದನ್ನು ನಿರಾಕರಿಸಿದರು. ಈ ಚಿತ್ರವನ್ನು ರಾಬರ್ಟೊ ಗಿರಾಲ್ಟ್ ನಿರ್ದೇಶಿಸಿದ್ದಾರೆ. ನವಾಜುದ್ದೀನ್ ಸಿದ್ದಿಕಿ ಬಾಲಿವುಡ್‌ನಲ್ಲಿ ಮಾತ್ರವಲ್ಲದೇ ಹಾಲಿವುಡ್‌ನಲ್ಲಿಯೂ ಸಣ್ಣ ಪಾತ್ರಗಳನ್ನು ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಅದಕ್ಕಾಗಿಯೇ ಅವರು ಈ ಹಾಲಿವುಡ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನವಾಜುದ್ದೀನ್ ಸಿದ್ದಿಕಿ ಹಡ್ಡಿ ಸಿನಿಮಾ: ನಟ ನವಾಜುದ್ದೀನ್ ಸಿದ್ದಿಕಿ ಈಗಾಗಲೇ ತಮ್ಮ ನಟನಾ ಕೆಲಸ ಮತ್ತು ಪಾತ್ರಕ್ಕೆ ತಮ್ಮ ಸಮರ್ಪಣೆಯಿಂದ ಪ್ರೇಕ್ಷಕರನ್ನು ತಲುಪಿದ್ದಾರೆ. ಭರವಸೆಯ ನಟನಾಗಿ ಬಾಲಿವುಡ್​​ನ ಟಾಪ್​ ನಟರ ಪಟ್ಟಿಯಲ್ಲಿದ್ದಾರೆ. ಅವರ ಮುಂಬರುವ ಹಡ್ಡಿ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆ ಅಗಿರುವ 'ಹಡ್ಡಿ'ಯ ಮೋಷನ್ ಪೋಸ್ಟರ್‌ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ. ಮೋಷನ್ ಪೋಸ್ಟರ್‌ ಅಲ್ಲದೇ ನವಾಜುದ್ದೀನ್ ಅವರು ತಮ್ಮನ್ನು ತಾವು 'ಅವಳಾಗಿ' ಪರಿವರ್ತಿಸುವ ಒಂದು ನೋಟವನ್ನು ಕೂಡ ಚಿತ್ರ ತಯಾರಕರು ಕಲೆ ದಿನಗಳ ಹಿಂದೆ ಹಂಚಿಕೊಂಡಿದ್ದರು. ಈ ಸಿನಿಮಾದಲ್ಲಿ ತೃತೀಯಲಿಂಗಿ ಪಾತ್ರಕ್ಕೆ ಜೀವ ತುಂಬುತ್ತಿದ್ದು, ಇದಕ್ಕಾಗಿ ಭಾರಿ ತಯಾರಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋ​ 'ಪಠಾಣ್'​ ಸಿನಿಮಾದ್ದಲ್ಲ

ಮೇಕ್​ ಅಪ್​​ ಮತ್ತು ಹೇರ್ ಆರ್ಟಿಸ್ಟ್‌ ಟೀಮ್ ನಟ ನವಾಜುದ್ದೀನ್ ಸಿದ್ದಿಕಿ ಸುತ್ತಲೂ ಕೆಲಸ ಮಾಡುತ್ತಿರುವ, ಅವರು ಶೂಟಿಂಗ್​​ಗೆ ತಯಾರಾಗುತ್ತಿರುವ ವಿಡಿಯೋ ಇದಾಗಿದೆ. ತೆರೆಮರೆಯ ವಿಡಿಯೋ ವೀಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇನ್ನೂ ತಮ್ಮ ಪಾತ್ರದ ಬಗ್ಗೆ ಪ್ರತಿಕ್ರಿಯಿಸಿದ್ದ ನವಾಜುದ್ದೀನ್ ಸಿದ್ದಿಕಿ, ವಿಶೇಷವಾದ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಸಂಪೂರ್ಣ ನಟನಾಗಲು ಈ ಚಿತ್ರ ನನಗೆ ಸಹಕಾರಿ ಆಗಲಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: 'ಅವಳಾಗಿ' ನವಾಜುದ್ದೀನ್ ಸಿದ್ದಿಕಿ.. ತೃತೀಯಲಿಂಗಿ ಪಾತ್ರಕ್ಕೆ ಜೀವ ತುಂಬಿದ ನಟ

ಅಕ್ಷತ್ ಅಜಯ್ ಶರ್ಮಾ ನಿರ್ದೇಶನದಲ್ಲಿ ಹಡ್ಡಿ ಸಿನಿಮಾ ಮೂಡಿ ಬರಲಿದೆ. ಝೀ ಸ್ಟುಡಿಯೋಸ್, ಆನಂದಿತಾ ಸ್ಟುಡಿಯೋಸ್ ಚಿತ್ರ ನಿರ್ಮಾಣದ ಹೊಣೆ ಹೊತ್ತಿದೆ. ನೋಯ್ಡಾ ಮತ್ತು ಗಾಜಿಯಾಬಾದ್ ಸೇರಿದಂತೆ ಪಶ್ಚಿಮ ಉತ್ತರ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಈ ವರ್ಷವೇ ಹಡ್ಡಿ ಸಿನಿಮಾ ಬಿಡುಗಡೆಯಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.