ಬೆಂಗಳೂರು : ನಿನ್ನೆ ಬೆಂಗಳೂರು ತುಮಕೂರು ರಸ್ತೆಯಲ್ಲಿರುವ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ನಲ್ಲಿ ಸೌತ್ ಫಿಲ್ಮ ಫೇರ್ ಅವಾರ್ಡ್ ಕಾರ್ಯಕ್ರಮ ನಡೆಯಿತು. ತೆಲುಗು ಚಿತ್ರರಂಗದ ನ್ಯಾಚುರಲ್ ಸ್ಟಾರ್ ನಾನಿಗೆ ಶ್ಯಾಮ್ ಸಿಂಗ ರಾಯ್ ಸಿನಿಮಾಕ್ಕೆ ಪ್ರಶಸ್ತಿ ಸ್ವೀಕರಿಸುತ್ತಾರೆ. ನಂತರ ಅವರು ಕನ್ನಡ ಸಿನಿಮಾ ರಂಗದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಾರೆ.
'ಈಗ ಇಡೀ ಭಾರತವೇ ಮಾತನಾಡಿಕೊಳ್ಳುವಂತ ಸಿನಿಮಾ ಕನ್ನಡದಲ್ಲಿ ಬರುತ್ತಿದೆ. ದಕ್ಷಿಣದಿಂದ ಇಂತಹ ಸಿನಿಮಾಗಳು ಬರುತ್ತಿದೆ ಎಂದು ಹೇಳಲು ಹೆಮ್ಮೆ ಆಗುತ್ತದೆ. ಇತ್ತೀಚೆಗೆ ತೆರೆಕಂಡ ಕಾಂತಾರ ಕೂಡ ದೊಡ್ಡ ಹಿಟ್ ಆಗಿದೆ ಅಂತ ಕೇಳಲ್ಪಟ್ಟೆ. ತುಂಬಾ ಸಂತೋಷ ಇದೆ ನಮ್ಮ ಪಕ್ಕದ ಸಿನಿಮಾ ಇಂಡಸ್ಟ್ರಿ ಅವರು ಉತ್ತಮ ಸಿನಿಮಾ ಕೊಡುತ್ತಿರುವುದರ ಬಗ್ಗೆ' ಎಂದು ನಾನಿ ಹೇಳಿದ್ದಾರೆ.
ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಕಾರ್ಯಕ್ರಮವು ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಚಲನಚಿತ್ರ ಉದ್ಯಮಗಳನ್ನು ಒಳಗೊಂಡಿರುವ ದಕ್ಷಿಣ ಭಾರತದ ಚಿತ್ರರಂಗದ ವೃತ್ತಿಪರರ ಕಲಾತ್ಮಕ ಮತ್ತು ತಾಂತ್ರಿಕ ಶ್ರೇಷ್ಠತೆಯನ್ನು ಗೌರವಿಸುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭ ಇದಾಗಿದೆ.
ಇದನ್ನೂ ಓದಿ : 67ನೇ ಫಿಲ್ಮ್‌ಫೇರ್ ಅವಾರ್ಡ್ಸ್: ಡಾಲಿ ಧನಂಜಯ್ ಅತ್ಯುತ್ತಮ ನಟ ಪ್ರಶಸ್ತಿ, ಜೀವಮಾನ ಸಾಧನೆಗಾಗಿ ಪುನೀತ್ಗೆ ಪ್ರಶಸ್ತಿಯ ಕಿರೀಟ