ETV Bharat / entertainment

ಅಭಿಮಾನಿಗೆ ನಟ ನಾನಾ ಪಾಟೇಕರ್ ಏಟು? ವಿಡಿಯೋ ವೈರಲ್​ - ಜರ್ನಿ ಸಿನಿಮಾ

Nana Patekar slaps fan? ಹಿರಿಯ ನಟ ನಾನಾ ಪಾಟೇಕರ್ ಅಭಿಮಾನಿಯೋರ್ವನ ತಲೆಗೆ ಹೊಡೆದಿರುವ ವಿಡಿಯೋವೊಂದು ಆನ್​ಲೈನ್​ನಲ್ಲಿ ವೈರಲ್​ ಆಗಿದೆ.

Actor Nana Patekar slaps fan
ಅಭಿಮಾನಿಗೆ ನಟ ನಾನಾ ಪಾಟೇಕರ್ ಕಪಾಳಮೋಕ್ಷ
author img

By ETV Bharat Karnataka Team

Published : Nov 15, 2023, 3:48 PM IST

ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ ಅವರ ವಿಡಿಯೋವೊಂದು ವೈರಲ್​ ಆಗಿ ದೇಶಾದ್ಯಂತ ಸಖತ್​ ಸದ್ದು ಮಾಡಿದೆ. ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿದ ಅಭಿಮಾನಿಯೋರ್ವರಿಗೆ ಹಿರಿಯ ನಟ ತಲೆಗೆ ಹೊಡೆದಿದ್ದಾರೆ ಎನ್ನಲಾದ ವಿಡಿಯೋವೊಂದು ಇಂಟರ್​ನೆಟ್​ನಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ವೈರಲ್​ ವಿಡಿಯೋ ವೀಕ್ಷಿಸಿರುವ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ವೈರಲ್​ ವಿಡಿಯೋದಲ್ಲೇನಿದೆ? ವಾರಣಾಸಿಯಲ್ಲಿನ 'ಜರ್ನಿ' ಚಿತ್ರದ ಶೂಟಿಂಗ್​​ ಸೆಟ್‌ನಲ್ಲಿ ಸೆಲ್ಫಿಗಾಗಿ ಪ್ರಯತ್ನಿಸಿದ ಉತ್ಸಾಹಿ ಅಭಿಮಾನಿಯೋರ್ವರಿಗೆ ಹಿರಿಯ ನಟ ಕಪಾಳಮೋಕ್ಷ ಮಾಡಿದ್ದಾರೆಂಬ ಗಂಭೀರ ಆರೋಪ ಇದೆ. ಎಕ್ಸ್ ಸೇರಿದಂತೆ ವಿವಿಧ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​​ಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ದೊಡ್ಡ ಜನಸಮೂಹ ನಟನನ್ನು ಸುತ್ತುವರೆದಿದೆ. ಶೂಟಿಂಗ್​​ ನಡೆಯುತ್ತಿರುವಂತೆ ತೋರಿದೆ. ಉತ್ಸಾಹಿ ಅಭಿಮಾನಿಯೊಬ್ಬರು ನಟನ ಬಳಿ ಹೋಗಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆ ಕೂಡಲೇ ನಟ, ಅಭಿಮಾನಿಯ ತಲೆಯ ಹಿಂಬದಿಗೆ ಹೊಡೆದಿರುವಂತೆ ವಿಡಿಯೋದಲ್ಲಿ ಕಂಡಿದೆ. ಅಲ್ಲಿದ್ದ ಸಹ ನಟ ಅಭಿಮಾನಿಯನ್ನು ಬಲವಂತವಾಗಿ ಹಿಂದಕ್ಕೆ ಎಳೆದಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ವಿಡಿಯೋ ನೋಡಿದವರು ಸೋಷಿಯಲ್​ ಮೀಡಿಯಾಗಳಲ್ಲಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚಿನವರು ಈ ವರ್ತನೆ ಸರಿ ಅಲ್ಲ ಎಂಬರ್ಥದಲ್ಲಿ ರಿಯಾಕ್ಷನ್​ ಕೊಟ್ಟಿದ್ದಾರೆ.

  • #Varanasi : Actor Nana Patekar slaps a fan in public for asking for a selfie .

    This is why I have always said , it’s not necessary that a good actor , singer , player will be a good human too , they may be good in their respective fields , but being a good human is a virtue ,… pic.twitter.com/jUy557sQo5

    — Amitabh Chaudhary (@MithilaWaala) November 15, 2023 " class="align-text-top noRightClick twitterSection" data=" ">

ಇದನ್ನೂ ಓದಿ: ಮೂರು ದಿನದಲ್ಲಿ 150 ಕೋಟಿ ರೂ. ಕಲೆಕ್ಷನ್: 'ಟೈಗರ್​ 3'ಗೆ ಪ್ರೇಕ್ಷಕರ ಬಹುಪರಾಕ್​

ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತ: ತಂಡದ ಸದಸ್ಯ / ನಾನಾ ಪಾಟೇಕರ್​ ಬಳಿ ನಿಂತಿದ್ದ ವ್ಯಕ್ತಿ ಮಧ್ಯಪ್ರವೇಶಿಸಿ, ಅಭಿಮಾನಿಯ ಕುತ್ತಿಗೆ ಹಿಡಿದು ಸೆಟ್‌ನಿಂದ ಹೊರಗೆ ಕರೆದೊಯ್ದಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ವೈರಲ್​ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ತರಹೇವಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸೋಷಿಯಲ್​ ಮೀಡಿಯಾ ಬಳಕೆದಾರರು ಈ ಘಟನೆ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೈರಲ್​​ ವಿಡಿಯೋ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಮತ್ತೊಂದೆಡೆ ನಟದ ವರ್ತನೆ ಬೆಂಬಲಿಸಿ ಕೂಡ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅಭಿಮಾನಿ ಚಿತ್ರೀಕರಣಕ್ಕೆ ಅಡ್ಡಿ ಮಾಡದೇ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯಬೇಕಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಾಂಪ್ರದಾಯಿಕ ಉಡುಗೆಯಲ್ಲಿ ಬಾಲಿವುಡ್​ ಬೆಡಗಿಯರು: ಕತ್ರಿನಾ, ಸಾರಾ ಟ್ರೆಡಿಶನಲ್​​ ಲುಕ್​​ಗೆ ಫ್ಯಾನ್ಸ್​​ ಕೊಟ್ರು ಫುಲ್​ ಮಾರ್ಕ್ಸ್

ಸೂಪರ್​ ಹಿಟ್ ಸಿನಿಮಾಗಳಾದ ಗದರ್ ಮತ್ತು ಗದರ್ 2 ಖ್ಯಾತಿಯ ಅನಿಲ್ ಶರ್ಮಾ ನಿರ್ದೇಶನದ 'ಜರ್ನಿ' ಚಿತ್ರದ ಶೂಟಿಂಗ್ ಸಮಯದಲ್ಲಿ ಈ ಘಟನೆ ನಡೆದಿದೆ. ಚಿತ್ರದಲ್ಲಿ ನಾನಾ ಪಾಟೇಕರ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಸಂಬಂಧ ಸಾಕಷ್ಟು ನಿರೀಕ್ಷೆಗಳಿವೆ. ಲೆಜೆಂಡರಿ ಆ್ಯಕ್ಟರ್​ ಜೊತೆ ಕೆಲಸ ಮಾಡುವ ಬಗ್ಗೆ ನಿರ್ದೇಶಕರು ಇತ್ತೀಚೆಗಷ್ಟೇ ಉತ್ಸಾಹ ವ್ಯಕ್ತಪಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.