ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ನಟ ಮಹೇಶ್ ಬಾಬು ಅವರ ತಾಯಿ, ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಇಂದಿರಾ ದೇವಿ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲಿ ಇತ್ತೀಚೆಗೆ ಇಹಲೋಕ ತ್ಯಜಿಸಿದ್ದಾರೆ. ಇಂದು ಅವರ ಪುತ್ರ, ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಹರಿದ್ವಾರದ ವಿಐಪಿ ಘಾಟ್‌ನಲ್ಲಿ ತಾಯಿಯ ಚಿತಾಭಸ್ಮವನ್ನು ವಿಸರ್ಜನೆ ಮಾಡಿದ್ದಾರೆ.
ತೀರ್ಥ ಪುರೋಹಿತ್ ಅಖಿಲೇಶಾನಂದ ಶರ್ಮಾ ಗೋವಿಂದ್ ಅವರು ಈ ಸಂದರ್ಭದಲ್ಲಿ ಚಿತಾಭಸ್ಮ ವಿಸರ್ಜನೆಯ ವಿಧಿವಿಧಾನವನ್ನು ನೆರೆವೇರಿಸಿಕೊಟ್ಟಿದ್ದಾರೆ.
ಕೃಷ್ಣ-ಇಂದಿರಾದೇವಿ ದಂಪತಿಗೆ ರಮೇಶ್ ಬಾಬು ಮತ್ತು ಮಹೇಶ್ ಬಾಬು ಇಬ್ಬರು ಗಂಡು ಮಕ್ಕಳು ಹಾಗೂ ಪದ್ಮಾವತಿ, ಮಂಜುಳಾ ಮತ್ತು ಪ್ರಿಯದರ್ಶಿನಿ ಎಂಬ ಮೂವರು ಹೆಣ್ಮಕ್ಕಳು. ಅನಾರೋಗ್ಯ ಸಮಸ್ಯೆಯಿಂದ ಜನವರಿ 8ರಂದು ರಮೇಶ್ ಬಾಬು ಮೃತಪಟ್ಟಿದ್ದರು. ಇದೀಗ ಇಂದಿರಾದೇವಿ ನಿಧನದಿಂದ ಮಹೇಶ್ ಕುಟುಂಬ ತೀವ್ರ ದುಃಖದಲ್ಲಿದೆ.

ಇದನ್ನೂ ಓದಿ: ಸೂಪರ್ಸ್ಟಾರ್ ಮಹೇಶ್ ಬಾಬುಗೆ ಮಾತೃ ವಿಯೋಗ.. ಸಹೋದರನ ಬಳಿಕ ತಾಯಿ ಕಳೆದುಕೊಂಡ ಪ್ರಿನ್ಸ್
ಇಂದು ಹರಿದ್ವಾರದಲ್ಲಿ ಚಿತಾಭಸ್ಮವನ್ನು ವಿಧಿ ವಿಧಾನಗಳೊಂದಿಗೆ ವಿಸರ್ಜನೆ ಮಾಡಿದ್ದು, ಈ ವೇಳೆ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಕೂಡ ಭಾಗಿಯಾಗಿದ್ದರು.