ETV Bharat / entertainment

'ಕಾಲಾಯ ನಮಃ' ಮೂಲಕ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ ನಟ ಕೋಮಲ್ - kalaya namaha shooting

ಕಾಲಾಯ ನಮಃ ಚಿತ್ರದ ಮೂಲಕ ಕೋಮಲ್ ಕುಮಾರ್ ಸ್ಯಾಂಡಲ್​ವುಡ್​ನಲ್ಲಿ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ್ದಾರೆ.

actor komal kumar is back with kalaya namaha
'ಕಾಲಾಯ ನಮಃ' ಮೂಲಕ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ ನಟ ಕೋಮಲ್
author img

By

Published : Nov 19, 2022, 6:29 PM IST

ಗೋವಿಂದಾಯ ನಮಃ, ವಾರೇ ವ್ಹಾ, ನಮೋ ಭೂತಾತ್ಮ ಹೀಗೆ ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ನಟ ಕೋಮಲ್ ಕುಮಾರ್. ಕೆಂಪೇಗೌಡ ಚಿತ್ರದ ಬಳಿಕ ಕಂಪ್ಲೀಟ್ ಆಗಿ ಗಾಂಧಿನಗರದಿಂದ ದೂರ ಉಳಿದಿದ್ದ ಕೋಮಲ್ ತೂಕ ಇಳಿಸಿ ಸ್ಲಿಮ್ ಆಗಿದ್ದಾರೆ. ಇದೀಗ ಕಾಲಾಯ ನಮಃ ಚಿತ್ರದ ಮೂಲಕ ಕೋಮಲ್ ಕುಮಾರ್ ಸ್ಯಾಂಡಲ್​ವುಡ್​ನಲ್ಲಿ ಸೆಕೆಂಡ್ ಇನ್ನಿಂಗ್ಸ್​​ ಶುರು ಮಾಡಿದ್ದಾರೆ.

ಸದ್ಯ ಕಾಲಾಯ ನಮಃ ಚಿತ್ರೀಕರಣ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. ಈ ಸಿನಿಮಾದ ಬಗ್ಗೆ ಮತ್ತು ಇಷ್ಟು ಸಮಯ ಸಿನಿಮಾಗಳನ್ನು ಮಾಡದಿರುವ ಬಗ್ಗೆ ಕೋಮಲ್ ಕುಮಾರ್ ಮಾಧ್ಯಮದ ಮುಂದೆ ಹಂಚಿಕೊಂಡರು.

actor komal kumar is back with kalaya namaha
'ಕಾಲಾಯ ನಮಃ' ತಂಡ

ಮನುಷ್ಯನ ಜೀವನದಲ್ಲಿ ಗ್ರಹಗಳ ಪ್ರಭಾವ ಅಪಾರ. ನನ್ನ ಜೀವನದಲ್ಲೂ ಹಾಗೆ. ನಮ್ಮ ಅಣ್ಣ ಜಗ್ಗೇಶ್ ಅವರು, ಕೆಲವು ವರ್ಷಗಳ ಹಿಂದೆ ನನ್ನ ಜಾತಕ ನೋಡಿ, ನಿನಗೆ ಈಗ ಕೇತು ದೆಸೆ ನಡೆಯುತ್ತಿದೆ. ಹಾಗಾಗಿ ಸ್ವಲ್ಪ ಹುಷಾರಾಗಿರು ಎಂದಿದ್ದರು. ಹಾಗಾಗಿ ಐದು ವರ್ಷಗಳಿಂದ ನಾನು ಯಾವುದೇ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ.‌ ಈಗ ಕಾಲ ಕೂಡಿ ಬಂದಿದೆ. "ಕಾಲಾಯ ನಮಃ" ಶುರುವಾಗಿದೆ ಎಂದರು.

ಕಾಲಭೈರವ ದೇವರ ಭಕ್ತನಾದ ನನ್ನ ಸಿನಿಮಾ ಶೀರ್ಷಿಕೆ ಕೂಡ ಕಾಲದಿಂದಲೇ ಶುರುವಾಗುತ್ತಿರುವುದು ಕಾಕತಾಳಿಯ. ಕಾಲ ನಿಲುವುದಿಲ್ಲ. ಕಾಲ ಯಾರಿಗೂ ಕಾಯುವುದಿಲ್ಲ. ಈ ರೀತಿ ಕಾಲದ ಬಗ್ಗೆ ನಮ್ಮ ಸಿನಿಮಾ ಸಾಗುತ್ತದೆ. ನನ್ನ ಪತ್ನಿ ಅನುಸೂಯ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮತಿವಣನ್ ನಿರ್ದೇಶಿಸುತ್ತಿದ್ದಾರೆ.‌ ನನ್ನ ಅಣ್ಣ ಜಗ್ಗೇಶ್ ಅವರ ಸಹಕಾರವಿದೆ.

ಅಸಿಯಾ ಫಿರ್ದೋಸಿ, ಸುಚೇಂದ್ರ ಪ್ರಸಾದ್,‌ ತಿಲಕ್ ಹಾಗೂ ನನ್ನ ಅಣ್ಣ ಜಗ್ಗೇಶ್ ಅವರ‌ ಪುತ್ರ ಯತಿರಾಜ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.‌ ನಾನು ನಟಿಸಿರುವ 2020 ಚಿತ್ರ ಕೂಡ ಸದ್ಯದಲ್ಲೇ ತೆರೆಗೆ ಬರುತ್ತಿದೆ‌ ಎಂದು ಕೋಮಲ್ ಕುಮಾರ್ ತಿಳಿಸಿದರು.

'ಕಾಲಾಯ ನಮಃ' ಕಲಾವಿದರು'ಕಾಲಾಯ ನಮಃ'

ಬಳಿಕ ನಟ ಜಗ್ಗೇಶ್ ಮಾತನಾಡಿ, ಜ್ಯೋತಿಷ್ಯ ಯಾರು ನಂಬುತ್ತಾರೋ, ಬಿಡುತ್ತಾರೋ ನನಗ ಗೊತ್ತಿಲ್ಲ. ಆದರೆ ನನಗೆ ನಂಬಿಕೆ ಇದೆ. ಕೋಮಲ್​ಗೆ ಕೇತುದೆಸೆ ಇತ್ತು. 2022ರವರೆಗೂ ಏನೂ ಮಾಡಬೇಡ ಅಂದಿದ್ದೆ. ಆತ ನನ್ನ ಮಾತು ಕೇಳಿ ಹಾಗೇ ನಡೆದುಕೊಂಡ. ಈಗ ಕಾಲಭೈರವನ ದಯೆಯಿಂದ ಈ‌ ಚಿತ್ರ ಆರಂಭಿಸಿದ್ದಾನೆ. ನನ್ನ ಮಗ ಯತಿರಾಜ್ ಕೂಡ ಇದರಲ್ಲಿ ಅಭಿನಯಿಸುತ್ತಿದ್ದಾನೆ. ಈ ತಂಡದಿಂದ ಒಳ್ಳೆಯ ಸಿನಿಮಾ ಬರುವ ವಿಶ್ವಾಸವಿದೆ ಎಂದರು. ಇನ್ನು ಧಾರಾವಾಹಿಯಲ್ಲಿ ನಟಿಸುತ್ತಿದ್ದ ನನಗೆ ಇದು ಮೊದಲ ಸಿನಿಮಾ ಎಂದರು ನಟಿ ಆಸಿಯಾ ಫಿರ್ದೋಸ್.

ಇದನ್ನೂ ಓದಿ: 'ಪಾಕಿಸ್ತಾನಿಗಳು ನಮ್ಮ ಸಹೋದರರು, ಶತ್ರುಗಳಲ್ಲ' - ನಟ ಚೇತನ್​​

ಈಗಾಗಲೇ ತಂದೆ ಜಗ್ಗೇಶ್ ಹಾಗೂ ಚಿಕ್ಕಪ್ಪ ಕೋಮಲ್ ಜೊತೆ ಅಭಿನಯಿಸಿರುವ ಯತಿರಾಜ್ ಈ ಸಿನಿಮಾದಲ್ಲಿ ವಿಭಿನ್ನವಾಗಿ ಕಾಣಲಿದ್ದಾರಂತೆ. ಈ ಚಿತ್ರಕ್ಕೆ ಎಮಿಲ್ ಸಂಗೀತ ನಿರ್ದೇಶನವಿದ್ದು, ಛಾಯಾಗ್ರಾಹಕ ರಾಕೇಶ್ ಸಿ ತಿಲಕ್ ಕ್ಯಾಮರಾವರ್ಕ್ ಇದೆ. ಈ ಚಿತ್ರವನ್ನ ಕೋಮಲ್ ಪತ್ನಿ ಅನಸೂಯ ಕೋಮಲ್ ನಿರ್ಮಾಣ ಮಾಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.