ETV Bharat / entertainment

ಭಾರಿ ಮೊತ್ತಕ್ಕೆ 'ರಾನಿ' ಆಡಿಯೋ ಹಕ್ಕು ಮಾರಾಟ: ಕಿರಣ್​ ರಾಜ್​ ಸಿನಿಮಾ ಮೇಲೆ ಹೆಚ್ಚಿದ ನಿರೀಕ್ಷೆ

'ರಾನಿ' ಸಿನಿಮಾ‌ದ ಆಡಿಯೋ ಹಕ್ಕನ್ನು ಪ್ರತಿಷ್ಠಿತ ಆಡಿಯೋ ಕಂಪೆನಿ ಟಿ- ಸೀರಿಸ್ ಭಾರಿ ಮೊತ್ತಕ್ಕೆ ಖರೀದಿಸಿದೆ.

author img

By

Published : Aug 17, 2023, 12:09 PM IST

ronny
ರಾನಿ

ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತನ್ನದೇ ಅಭಿನಯ ಶೈಲಿಯಿಂದ ಕನ್ನಡಿಗರ ಮನ ಗೆದ್ದಿರುವ ನಟ‌ ಎಂದರೆ ಅದು ಕಿರಣ್ ರಾಜ್. ಸದ್ಯ 'ರಾನಿ' ಸಿನಿಮಾ‌ ಜಪ ಮಾಡುತ್ತಿರುವ ಸ್ಟಾರ್​ ಹೀರೋನ ಈ ಚಿತ್ರದ ಆಡಿಯೋ ಹಕ್ಕನ್ನು ಪ್ರತಿಷ್ಠಿತ ಆಡಿಯೋ ಕಂಪನಿ ಟಿ- ಸೀರಿಸ್ ಭಾರಿ ಮೊತ್ತಕ್ಕೆ ಖರೀದಿಸಿದೆ. ಕಿರಣ್ ರಾಜ್ ಆಪ್ತರ ಪ್ರಕಾರ 20 ಲಕ್ಷ ರೂಪಾಯಿಗೆ ಈ ಚಿತ್ರದ ಆಡಿಯೋ ಮಾರಾಟ ಆಗಿದೆಯಂತೆ.‌ ಇದು ಕಿರಣ್ ರಾಜ್ ಸಿನಿಮಾ ಕೆರಿಯರ್​ನಲ್ಲಿ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟ ಆಗಿರುವ ಮೊದಲ ಚಿತ್ರ ಕೂಡಾ ಹೌದು.

ronny
'ರಾನಿ'

ಗುರುತೇಜ್ ಶೆಟ್ಟಿ ನಿರ್ದೇಶನದ 'ರಾನಿ' ಚಿತ್ರದಲ್ಲಿ ಕಿರಣ್ ರಾಜ್ ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಹಾಗೂ ಪೋಸ್ಟರ್​ನಿಂದಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ ರಾನಿ ಚಿತ್ರಕ್ಕೆ ಇದೀಗ ಟಿ- ಸೀರಿಸ್ ಜೊತೆಯಾಗಿರೋದು ಚಿತ್ರತಂಡಕ್ಕೆ ಇನ್ನಷ್ಟು ಹುಮ್ಮಸು ತಂದಿದೆ ಎನ್ನುತ್ತಾರೆ ನಿರ್ಮಾಪಕರು. ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ 5 ಹಾಡುಗಳನ್ನು ಸಂಯೋಜಿಸಿದ್ದು, 'ಕಾಂತಾರ' ಖ್ಯಾತಿಯ ಪ್ರಮೋದ್ ಮರವಂತೆ 5 ಹಾಡುಗಳನ್ನು ಬರೆದಿದ್ದಾರೆ. ಕುನಾಲ್ ಗಾಂಜಾವಾಲ, ಹಂಸಿಕ ಐಯ್ಯರ್, ಶ್ವೇತಾ ಮೋಹನ್ ಇವರಂತಹ ಹೆಸರಾಂತ ಗಾಯಕರು ರಾನಿ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.

ಇದನ್ನೂ ಓದಿ: Ronny Movie Teaser: ನಟ ಕಿರಣ್​ ರಾಜ್​ ಬರ್ತ್​ಡೇಯಂದೇ 'ರಾನಿ' ಟೀಸರ್​ ರಿಲೀಸ್​

ಫ್ಯಾಮಿಲಿ ಆ್ಯಕ್ಷನ್ ಸಿನಿಮಾ: "ಸುಮಾರು 85 ದಿನಗಳ ಚಿತ್ರೀಕರಣ ಮುಗಿದಿದ್ದು, ಒಂದು ಹಾಡಿನ ಚಿತ್ರಿಕರಣ ಬಾಕಿ ಇದೆ. ಗ್ಯಾಂಗಸ್ಟರ್ ಕಥೆಯಾದರೂ ಮಾಸ್ ಎಲಿವೆಷನ್ ಇದ್ದರೂ, ಕಿರಣ್ ರಾಜ್​ರವರ ಫ್ಯಾಮಿಲಿ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಕಥೆ ಬರೆದಿದ್ದೇನೆ. ಇದು ಫ್ಯಾಮಿಲಿ ಆ್ಯಕ್ಷನ್ ಸಿನಿಮಾ" ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ.

ರಾನಿ ಚಿತ್ರತಂಡ ಹೀಗಿದೆ.. ಈ ಚಿತ್ರದಲ್ಲಿ ಕಿರಣ್ ರಾಜ್​ಗೆ ಸಮೀಕ್ಷ, ಅಪೂರ್ವ ಹಾಗೂ ರಾಧ್ಯಾ ಮೂವರು ನಾಯಕಿಯರಿದ್ದಾರೆ. ಪೋಷಕ ಪಾತ್ರದಲ್ಲಿ ರವಿಶಂಕರ್, ಮಂಜು, ಉಗ್ರಂ ರವಿ, ಗಿರೀಶ್ ಹೆಗಡೆ, ಬೇಡ ಸುರೇಶ, ಮೈಕೋ ನಾಗರಾಜ್, ಸುಜಯ್ ಶಾಸ್ತ್ರಿ, ಲಕ್ಷ್ಮೀ ಸಿದ್ದಯ್ಯ, ಅನಿಲ್ ಯಾದವ್, ಶ್ರೀಧರ್, ಮಂಡ್ಯ ರಮೇಶ್ ಹೀಗೆ ದೊಡ್ಡ ತಾರಬಳಗವಿದೆ.

ರಾಘವೇಂದ್ರ ಬೇಡ ಕೋಲಾರ ಛಾಯಾಗ್ರಾಹಣ, ಉಮೇಶ್ ಸಂಕಲನ, ಸತೀಶ್ ಕಲಾ ನಿರ್ದೇಶನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿದೆ. ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್​ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಚಂದ್ರಕಾಂತ್ ಮತ್ತು ಉಮೇಶ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ. ‌ಡಿಸೆಂಬರ್​ನಲ್ಲಿ ರಾನಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: 'ರಾನಿ'ಯಲ್ಲಿ ಕಿರಣ್ ರಾಜ್ ಬ್ಯುಸಿ: ಹ್ಯಾಂಡ್ಸಮ್​ ಹರ್ಷನ ಅಪ್​ಡೇಟ್​ ಇಲ್ಲಿದೆ ನೋಡಿ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.