ETV Bharat / entertainment

ಒಂದು ಲಕ್ಷ ಗಿಡ ನೆಡುವ 'ವೃಕ್ಷದೀಪ' ಅಭಿಯಾನಕ್ಕೆ ಚಾಲನೆ: ಕಿಚ್ಚ ಸುದೀಪ್​ ಸಾಥ್​ - ಈಟಿವಿ ಭಾರತ ಕನ್ನಡ

Vrukshadeep Abhiyan: ಒಂದು ಲಕ್ಷ ಗಿಡ ನೆಡುವ 'ವೃಕ್ಷದೀಪ' ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಕಿಚ್ಚ ಸುದೀಪ್​ ಸಾಥ್​ ನೀಡಿದ್ದಾರೆ.

Actor Kiccha sudeep supported to vrukshadeep abhiyan
ಒಂದು ಲಕ್ಷ ಗಿಡ ನೆಡುವ 'ವೃಕ್ಷದೀಪ' ಅಭಿಯಾನಕ್ಕೆ ಚಾಲನೆ: ಕಿಚ್ಚ ಸುದೀಪ್​ ಸಾಥ್​
author img

By ETV Bharat Karnataka Team

Published : Sep 4, 2023, 12:56 PM IST

ಸಿನಿಮಾ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಗಮನ ಸೆಳೆಯುತ್ತಿರುವ ನಟ ಕಿಚ್ಚ ಸುದೀಪ್​. ಇತ್ತೀಚೆಗೆ ಸಾವಿರಾರು ಸಂಖ್ಯೆಯ ಅಭಿಮಾನಿಗಳ ಜೊತೆ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಭಿನಯ ಚಕ್ರವರ್ತಿ ಮತ್ತೊಂದು ಸಮಾಜಮುಖಿ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಪತ್ರಕರ್ತ, ನಟ ಹಾಗೂ ನಿರ್ದೇಶಕ ಡಿ ಜೆ ಚಕ್ರವರ್ತಿ ಚಂದ್ರಚೂಡ್​ 'ವೃಕ್ಷದೀಪ' ಎಂಬ ಹೆಸರಿನಲ್ಲಿ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಅಭಿಯಾನಕ್ಕೆ ಕಿಚ್ಚ ಸುದೀಪ್​ ಸಾಥ್​ ನೀಡಿದರು.

ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು 'ವೃಕ್ಷದೀಪ' ಅಭಿಯಾನಕ್ಕೆ ಚಾಲನೆ ನೀಡಿದರು. 'ಅಭಿನಯ ತಿಲಕ' ಎಂಬ ಅಭಿಮಾನದ ಹಾಡನ್ನು ಚಲವಾದಿ ಮಹಾಸಭಾದ ಜ್ಞಾನಪ್ರಕಾಶ ಸ್ವಾಮೀಜಿ ಬಿಡುಗಡೆ ಮಾಡಿದರು. ಶಾಸಕ ರಾಜು ಗೌಡ ನಾಯಕ, ವೀರಕಪುತ್ರ ಶ್ರೀನಿವಾಸ್​ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Actor Kiccha sudeep supported to vrukshadeep abhiyan
ಒಂದು ಲಕ್ಷ ಗಿಡ ನೆಡುವ 'ವೃಕ್ಷದೀಪ' ಅಭಿಯಾನಕ್ಕೆ ಚಾಲನೆ:

ಇದೇ ಸಂದರ್ಭದಲ್ಲಿ ಮಯೂರ ಪಿಕ್ಚರ್ಸ್​ ಲಾಂಛನದಲ್ಲಿ ಮಂಜುನಾಥ್​.ಡಿ ನಿರ್ಮಿಸುತ್ತಿರುವ, ಡಿ.ಜೆ ಚಕ್ರವರ್ತಿ ನಿರ್ದೇಶನದ ಹಾಗೂ ಮಿಲಿಂದ್​ ಗೌತಮ್​ ನಾಯಕನಾಗಿ ನಟಿಸುತ್ತಿರುವ 'ಹುಲಿ ನಾಯಕ' ಚಿತ್ರದ ಮೋಷನ್​ ಪೋಸ್ಟರ್​ ಅನ್ನು ಕಿಚ್ಚ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಸುದೀಪ್​, "ಚಕ್ರವರ್ತಿ ಬಿಗ್​ ಬಾಸ್​ನಿಂದ ನನಗೆ ಹತ್ತಿರವಾದರು. ಆತ ಅದ್ಭುತ ರೈಟರ್​. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಹುಲಿನಾಯಕ' ಚಿತ್ರ ಯಶಸ್ವಿಯಾಗಲಿ" ಎಂದು ಶುಭ ಹಾರೈಸಿದರು.

'ಹುಲಿ ನಾಯಕ' ಚಿತ್ರದ ಮೋಷನ್​ ಪೋಸ್ಟರ್ ಬಿಡುಗಡೆಗೊಳಿಸಿದ ಕಿಚ್ಚ ಸುದೀಪ್​

ಇದನ್ನೂ ಓದಿ: Kushi: ಎರಡೇ ದಿನಕ್ಕೆ 50 ಕೋಟಿ ರೂ. ದಾಟಿದ ಖುಷಿ - ಸಮಂತಾ, ದೇವರಕೊಂಡ ಸಿನಿಮಾಗೆ ಪಾಸಿಟಿವ್​ ರೆಸ್ಪಾನ್ಸ್

ಬಳಿಕ ಚಕ್ರವರ್ತಿ ಚಂದ್ರಚೂಡ್​ ಮಾತನಾಡಿ, "ವೃಕ್ಷದೀಪ ಅಭಿಯಾನಕ್ಕೆ ಚಾಲನೆ ನೀಡಿದ ಎಲ್ಲಾ ಗಣ್ಯರಿಗೆ, ಹಾಡು ಬಿಡುಗಡೆ ಮಾಡಿಕೊಟ್ಟ ಸ್ವಾಮೀಜಿ ಅವರಿಗೆ ಮತ್ತು ಮೋಸ್ಟರ್​ ಪೋಸ್ಟರ್​ ಅನಾವರಣಗೊಳಿಸಿದ ಕಿಚ್ಚ ಸುದೀಪ್​ ಅವರಿಗೆ ನನ್ನ ಧನ್ಯವಾದ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಿಂಧೂರ ವೀರ ಲಕ್ಷ್ಮಣ ನಾಯಕ ಅವರ ಕುರಿತಾದ ಈ ಚಿತ್ರವನ್ನು ಮಂಜುನಾಥ್​ ಅವರು ನಿರ್ಮಿಸುತ್ತಿದ್ದಾರೆ. ಮಿಲಿಂದ್​ ಗೌತಮ್​ ನಾಯಕನಾಗಿ ನಟಿಸುತ್ತಿದ್ದಾರೆ. ನಾನು ನಿರ್ದೇಶನ ಮಾಡುತ್ತಿದ್ದೇನೆ. ಇಂದು ಫಸ್ಟ್​ ಲುಕ್​ ಹಾಗೂ ಮೋಷನ್​ ಪೋಸ್ಟರ್​ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ" ಎಂದು ತಿಳಿಸಿದರು.

ಇನ್ನು 'ಹುಲಿ ನಾಯಕ' ಚಿತ್ರದ ನಾಯಕ ಮಿಲಿಂದ್​ ಗೌತಮ್​ ಮಾತನಾಡಿ, "ನಮ್ಮ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿಕೊಟ್ಟ ಸುದೀಪ್​ ಸರ್​ ಅವರಿಗೆ ನಾನು ಆಭಾರಿ. ಉತ್ತಮ ಕಥೆ ಆಯ್ಕೆ ಮಾಡಿಕೊಂಡಿರುವ ಚಕ್ರವರ್ತಿ ಅವರಿಗೆ ಧನ್ಯವಾದ" ಎಂದರು. ಬಳಿಕ ನಿರ್ಮಾಪಕ ಮಂಜುನಾಥ್​ ಮಾತನಾಡಿ, "ಚಕ್ರವರ್ತಿ ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಸುದೀಪ್​ ಅವರು ನಮ್ಮ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ನನ್ನ ಮಗ ಮಿಲಿಂದ್​ ಗೌತಮ್​ ನಾಯಕನಾಗಿ ನಟಿಸುತ್ತಿದ್ದಾನೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ" ಎಂದು ಕೋರಿದರು.

ಈ ಸಂದರ್ಭದಲ್ಲಿ ನಟ ರಾಕ್ಷಸ ಡಾಲಿ ಧನಂಜಯ್​, ನೆನಪಿರಲಿ ಪ್ರೇಮ್​, ವಸಿಷ್ಠ ಸಿಂಹ, ಪೂಜಾ ಗಾಂಧಿ, ಸಂಜನಾ ಗಲ್ರಾನಿ ಸೇರಿದಂತೆ ಮುಂತಾದ ಕಲಾವಿದರು ಉಪಸ್ಥಿತರಿದ್ದರು. ಜೊತೆಗೆ ಸಿಂಧೂರ ಲಕ್ಷ್ಮಣ್​ ನಾಯಕ ಅವರ ಕುಟುಂಬ ಮತ್ತು ನಿರ್ದೇಶಕಿ ಪಲ್ಲಕ್ಕಿ ರಾಧಾಕೃಷ್ಣ ಹಾಜರಿದ್ದರು.

ಇದನ್ನೂ ಓದಿ: Chandramukhi 2 trailer: ಬಹುನಿರೀಕ್ಷಿತ 'ಚಂದ್ರಮುಖಿ 2' ಚಿತ್ರದ ಟ್ರೇಲರ್​ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.