ETV Bharat / entertainment

ಕಾಂತಾರ ಹವಾ: ರಿಷಬ್ ಶೆಟ್ರನ್ನು ಅಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ನಟ ಕಾರ್ತಿ - ಕಾಂತಾರ ಅಪ್​ಡೇಟ್ಸ್

ಕಾಂತಾರ ಸಿನಿಮಾ ವೀಕ್ಷಿಸಿದ ತಮಿಳು ಸೂಪರ್​ ಸ್ಟಾರ್​ ಕಾರ್ತಿ ಕಾಂತಾರದ ಸಾರಥಿ ರಿಷಬ್​ ಶೆಟ್ಟಿಯನ್ನು ಅಪ್ಪಿಕೊಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

actor karthi compliments on kantara movie
ರಿಷಬ್ ಶೆಟ್ರನ್ನು ಅಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ನಟ ಕಾರ್ತಿ
author img

By

Published : Oct 15, 2022, 5:51 PM IST

ಎಲ್ಲೇ ಹೋದ್ರೂ ಕಾಂತಾರದ್ದೇ ಸದ್ದು. ಕನ್ನಡದ ಚಿತ್ರವೊಂದು ಈ ಮಟ್ಟಿಗೆ ಸೌಂಡ್​ ಮಾಡುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆ ಮಟ್ಟಿಗೆ ಕಾಂತಾರ ಸಿನಿಮಾ ಭಾರತದಾದ್ಯಂತ ತನ್ನ ಛಾಪು ಮೂಡಿಸುತ್ತಿದೆ. ಪರಭಾಷೆಗಳಲ್ಲಿಯೂ ಸಿನಿಮಾ ಡಬ್​ ಅಗಿ ಸಿನಿಪ್ರಿಯರ ಮನ ಮುಟ್ಟಿದೆ.

ಈಗಾಗಲೇ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಕಾಂತಾರ ಬಿಡುಗಡೆ ಆಗಿದ್ದು ಅಕ್ಟೋಬರ್​ 20ರಂದು ಮಲೆಯಾಳಂನಲ್ಲಿ ರಿಲೀಸ್​ ಆಗಲಿದೆ. ಚಿತ್ರ ವೀಕ್ಷಿಸಿದ ತಮಿಳು ಸೂಪರ್​ ಸ್ಟಾರ್​ ಕಾರ್ತಿ ಕಾಂತಾರದ ಸಾರಥಿ ರಿಷಬ್​ ಶೆಟ್ಟಿಯನ್ನು ಅಪ್ಪಿಕೊಂಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಿನಿಮಾ ನೋಡುವ ವೇಳೆ ಮೈಜುಂ ಎನಿಸಿತು. ನಿಮ್ಮದು ಅತ್ಯದ್ಭುತ ನಟನೆ ಎಂದು ಶೆಟ್ರ ಅಭಿನಯಕ್ಕೆ ನಟ ಕಾರ್ತಿ ಫುಲ್ ಮಾರ್ಕ್ಸ್​ ಕೊಟ್ಟಿದ್ದಾರೆ.

ಇದನ್ನೂ ಓದಿ: ತೆಲುಗು, ತಮಿಳಲ್ಲೂ ಕನ್ನಡದ ಕಂಪು.. ನೆರೆರಾಜ್ಯಗಳಲ್ಲಿ ಕಾಂತಾರ ಸೂಪರ್ ಹಿಟ್

ಇನ್ನು, ಬೆಂಗಳೂರಿನಲ್ಲಿ ಚಿತ್ರ ವೀಕ್ಷಿಸುತ್ತಿರುವ ಪ್ರೇಕ್ಷಕರು ಸಿನಿಮಾ ಬಗ್ಗೆ ಹೊಗಳಿಕೆಯ ಮಳೆ ಸುರಿಸುತ್ತಿದ್ದಾರೆ. ಪಿವಿಆರ್​ನಿಂದ ಹೊರ ಬಂದವರ ಬಾಯಲ್ಲಿ ಕೇಳಿ ಬರುತ್ತಿರೋದು ಸೂಪರ್, ಅತ್ಯದ್ಭುತ, ಮೈಂಡ್​ಬ್ಲೋಯಿಂಗ್​, ಈವರೆಗೆ ನೋಡಿರದಂತಹ ಚಿತ್ರ, ಇಂತಹ ಮೆಚ್ಚುಗೆಯ ಮಾತುಗಳೇ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.