ETV Bharat / entertainment

'ಜನರಲ್ ಹಾಸ್ಪಿಟಲ್' ಖ್ಯಾತಿಯ ನಟ ಜಾಕ್ ಆಕ್ಸೆಲ್ರೋಡ್ ವಿಧಿವಶ - ಜ್ಯಾಕ್ ಆಕ್ಸೆಲ್ರೋಡ್ ನಿಧನ

ಹಾಲಿವುಡ್​ ನಟ ಜಾಕ್ ಆಕ್ಸೆಲ್ರೋಡ್ ನಿಧನರಾಗಿದ್ದಾರೆ.

Jack Axelrod died
ಜ್ಯಾಕ್ ಆಕ್ಸೆಲ್ರೋಡ್ ಇನ್ನಿಲ್ಲ
author img

By ETV Bharat Karnataka Team

Published : Dec 17, 2023, 12:20 PM IST

ವಾಷಿಂಗ್ಟನ್, ಡಿಸಿ (ಯುಎಸ್): ಹಾಲಿವುಡ್ ನಟ ಜ್ಯಾಕ್ ಆಕ್ಸೆಲ್ರೋಡ್ (Jack Axelrod) ವಯೋಸಹಜವಾಗಿ ನಿಧನರಾಗಿದ್ದಾರೆ. 'ಗ್ರೇಸ್ ಅನಾಟಮಿ' ಮತ್ತು 'ಜನರಲ್ ಹಾಸ್ಪಿಟಲ್' ನಂತಹ ಶೋಗಳಲ್ಲಿನ ಅಭಿನಯಕ್ಕಾಗಿ ಹೆಸರುವಾಸಿಯಾಗಿದ್ದ ನಟ ತಮ್ಮ 93ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನವೆಂಬರ್ 28 ರಂದೇ ನಿಧನರಾಗಿದ್ದು, ಸಾವಿನ ಸುದ್ದಿ ತಡವಾಗಿ ಹೊರ ಬಿದ್ದಿದೆ. ಕಳೆದ ತಿಂಗಳು ನ. 28 ರಂದು ಲಾಸ್ ಏಂಜಲೀಸ್‌ನಲ್ಲಿ ವಯೋಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ನಟನ ಪ್ರತಿನಿಧಿ ಜೆನ್ನಿಫರ್ ಗಾರ್ಲ್ಯಾಂಡ್ ಯುಎಸ್ ಮೂಲದ ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

1930 ರ ಜನವರಿ 25 ರಂದು ಲಾಸ್​ ಏಂಜಲೀಸ್​ನಲ್ಲಿ ಜನಿಸಿದ್ದ ಜಾಕ್ ಆಕ್ಸೆಲ್ರೋಡ್ ಯು ಎಸ್ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು. 1953 ರ ಫೆಬ್ರವರಿಯಿಂದ 1955 ರ ಫೆಬ್ರವರಿವರೆಗೆ ಜರ್ಮನಿಯಲ್ಲಿ ನೆಲೆಸಿದ್ದರು. ನಂತರ ಯುಸಿ ಬರ್ಕ್ಲಿಯಲ್ಲಿ ವಾಸ್ತುಶಿಲ್ಪ ಕಲೆಯಲ್ಲಿ ಪ್ರಮುಖರಾಗಿದ್ದರು. ಅಂತಿಮವಾಗಿ ವಾಷಿಂಗ್ಟನ್ ನಲ್ಲಿ ವಾಸ್ತುಶಿಲ್ಪಿಯಾಗಿ ಪರವಾನಗಿ ಪಡೆದರು.

'ಜನರಲ್ ಹಾಸ್ಪಿಟಲ್' ಶೋ ಮೂಲಕ ಜನಪ್ರಿಯರಾದರು. 1987 ರಿಂದ 1989 ರವರೆಗಿನ 40 ಸಂಚಿಕೆಗಳಲ್ಲಿ ವಿಕ್ಟರ್ ಜೆರೋಮ್ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೇ, 'ಮೈ ನೇಮ್ ಈಸ್ ಅರ್ಲ್'ನಲ್ಲಿನ ಪಾತ್ರಕ್ಕೂ ಹೆಸರುವಾಸಿಯಾಗಿದ್ದರು. 'ಗ್ರೇಸ್ ಅನಾಟಮಿ'ಯಲ್ಲಿ ಕೂಡ ಜನಪ್ರಿಯತೆ ಹೆಚ್ಚಿಸಿದ ಕಾರ್ಯಕ್ರಮ.

ಡಲ್ಲಾಸ್, ಹಿಲ್ ಸ್ಟ್ರೀಟ್ ಬ್ಲೂಸ್, ಡೈನಾಸ್ಟಿ, ಔಟ್‌ಲಾಸ್, ನೈಟ್ ಕೋರ್ಟ್, ನಾಟ್ಸ್ ಲ್ಯಾಂಡಿಂಗ್, ಎವ್ರಿಬಡಿ ಲವ್ಸ್ ರೈಮಂಡ್, ಅಲಿಯಾಸ್, ಫ್ರೇಸಿಯರ್, ಮಾಲ್ಕ್ಲೋಮ್ ಇನ್ ದ ಮಿಡಲ್, ಸ್ಕ್ರಬ್ಸ್, ಸ್ಟಾರ್-ವಿಂಗ್, ಇಟ್ಸ್ ಆಲ್ವೇಸ್ ಸನ್ನಿ ಇನ್​ ಫಿಲಡೆಲ್ಫಿಯಾ, ಹಾಟ್ ಇನ್ ಕ್ಲೀವ್‌ಲ್ಯಾಂಡ್‌, ಬಾಸ್ಕೆಟ್ಸ್, ಸ್ಪೀಚ್‌ಲೆಸ್, ರೇ ಡೊನೊವನ್, ಬ್ರೂಕ್ಲಿನ್ ನೈನ್-ನೈನ್, ಮಾಡರ್ನ್ ಫ್ಯಾಮಿಲಿ ಸೇರಿದಂತೆ ಹಲವು ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಬನಾನಾಸ್ ಸಿನಿಮಾ ಮೂಲಕ ಅವರು ಚಿತ್ರರಂಗ ಪ್ರವೇಶಿಸಿದ್ದರು. ವೈಸ್, ರೋಡ್ ಟು ರಿಡೆಂಪ್ಶನ್, ಹ್ಯಾಂಕಾಕ್ ಮತ್ತು ಲಿಟಲ್ ಫೋಕರ್ಸ್ ಸೇರಿದಂತೆ ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದರು.

ಇದನ್ನೂ ಓದಿ: ಶ್ರೇಯಸ್ ತಲ್ಪಾಡೆ ಹೆಲ್ತ್ ಅಪ್ಡೇಟ್: ಹೃದಯಾಘಾತಕ್ಕೊಳಗಾಗಿದ್ದ ನಟನ ಆರೋಗ್ಯದಲ್ಲಿ ಚೇತರಿಕೆ

ಹೀಗೆ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು. ಉತ್ತಮ ಅಭಿನಯದ ಮೂಲಕ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ದರು. ಆದ್ರೀಗ ಇಹಲೋಕದ ಪಯಣ ಮುಗಿಸಿದ್ದಾರೆ. ನಿಧನದ ಸುದ್ದಿ ತಿಳಿದ ಚಿತ್ರರಂಗ ಸೇರಿದಂತೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುವುದರೊಂದಿಗೆ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: 'ಹೆಮ್ಮೆಯ ಕ್ಷಣ': ಮೊಮ್ಮಗಳು ಆರಾಧ್ಯ ಪ್ರತಿಭೆಗೆ ಮನಸೋತ ಅಮಿತಾಭ್ ಬಚ್ಚನ್​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.