ETV Bharat / entertainment

ಸಲಗ ಪಾರ್ಟ್ 2 ಬಗ್ಗೆ ದುನಿಯಾ ವಿಜಯ್​ ಹೇಳಿದ್ದೇನು? - duniya vijay talking on duniya part 2

'ಸಲಗ' ಸಕ್ಸಸ್ ಹಿಂದಿನ ಕಷ್ಟದ ದಿನಗಳ ಬಗ್ಗೆ ಇತ್ತೀಚೆಗೆ ದುನಿಯಾ ವಿಜಯ್ ಹೇಳಿಕೊಂಡಿದ್ದಾರೆ. ಅಲ್ಲದೆ ಸಿನಿ ಕೆರಿಯರ್​ಗೆ ಮರುಜನ್ಮ ನೀಡಿದ ಈ ಚಿತ್ರವು ಅವರಿಗೆ ಗೆಲ್ಲುತ್ತೇನೆಂಬ ಎಂಬ ಆತ್ಮವಿಶ್ವಾಸ ನೀಡಿದೆಯಂತೆ. ಈ ಕಾರಣಕ್ಕೆ ದುನಿಯಾ ವಿಜಯ್ ಸಲಗ ಪಾರ್ಟ್-2 ಮಾಡುವ ಆಲೋಚನೆಯಲ್ಲಿದ್ದಾರೆ.

actor-duniya-vijay-talking-on-duniya-part-2
ಸಲಗ ಪಾರ್ಟ್ 2 ಬಗ್ಗೆ ದುನಿಯಾ ವಿಜಯ್​ ಹೇಳಿದ್ದೇನು?
author img

By

Published : Jul 23, 2022, 1:46 PM IST

Updated : Jul 23, 2022, 2:22 PM IST

ಕನ್ನಡ ಚಿತ್ರರಂಗದಲ್ಲಿ ಸಿನೆಮಾವೊಂದು ಸೂಪರ್ ಹಿಟ್ ಆದ ಬಳಿಕ ಅದರ ಪಾರ್ಟ್​- 2 ಬರುವ ಟ್ರೆಂಡ್ ಹೆಚ್ಚಾಗುತ್ತಿದೆ. ಈಗಾಗಲೇ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ', ಶರಣ್ ಅಭಿನಯದ 'ಅವತಾರ ಪುರುಷ', ಸತೀಶ್ ನೀನಾಸಂ ನಟನೆಯ 'ಪೆಟ್ರೋಮ್ಯಾಕ್ಸ್' ಚಿತ್ರಗಳು ಪ್ರೇಕ್ಷಕರ ಮನ ಗೆದ್ದಿದ್ದು, ಪಾರ್ಟ್-2ದತ್ತ ನಿರ್ದೇಶಕರು ಹಾಗೂ ನಟರು ಮುಖ ಮಾಡಿದ್ದಾರೆ. ಇದೀಗ ದುನಿಯಾ ವಿಜಯ್ ನಟಿಸಿ, ಮೊದಲ ಸಲ ನಿರ್ದೇಶಿಸಿದ್ದ 'ಸಲಗ' ಕೂಡ ಈ ಸಾಲಿಗೆ ಸೇರಲಿದೆ.

actor-duniya-vijay-talking-on-duniya-part-2
ದುನಿಯಾ ವಿಜಯ್

ರೌಡಿಸಂ ಕಥೆ ಆಧರಿಸಿ ಬಂದ ಸಲಗ, 2021ರಲ್ಲಿ ಸ್ಯಾಂಡಲ್​ವುಡ್​​ನಲ್ಲಿ ಹೊಸ ಅಲೆ ಎಬ್ಬಿಸಿತ್ತು. ಚಿತ್ರವು ನಟ ಹಾಗೂ ನಿರ್ದೇಶಕನಾಗಿ ದುನಿಯಾ ವಿಜಯ್​ಗೆ ಮತ್ತಷ್ಟು ಹೆಸರು ತಂದುಕೊಟ್ಟಿತ್ತು. ಅಲ್ಲದೇ ಗಳಿಕೆಯಲ್ಲೂ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹಾಗೂ ದುನಿಯಾ ವಿಜಯ್​ಗೆ ಲಾಭ ಕೂಡ ಸಿಕ್ಕಿತ್ತು. ಸೂಪರ್ ಹಿಟ್ ಆದ ಬಳಿಕ ದುನಿಯಾ ವಿಜಯ್ ಎಲ್ಲಿ ಹೋದರೂ ಸಲಗ ಪಾರ್ಟ್ 2 ಮಾಡುವಿರಾ ಎಂಬ ಪ್ರಶ್ನೆ ಅಭಿಮಾನಿಗಳಿಂದ ಕೇಳಿ ಬರುತ್ತಿದೆಯಂತೆ.

ಸುದ್ದಿಗೋಷ್ಟಿಯಲ್ಲಿ ನಟ ದುನಿಯಾ ವಿಜಯ್

ಈ ಸಿನೆಮಾ ಸಕ್ಸಸ್ ಹಿಂದಿನ ಕಷ್ಟದ ದಿನಗಳ ಬಗ್ಗೆ ಇತ್ತೀಚೆಗೆ ವಿಜಯ್ ಹೇಳಿಕೊಂಡಿದ್ದಾರೆ. ಅಲ್ಲದೆ ಸಿನಿ ಕೆರಿಯರ್​ಗೆ ಮರುಜನ್ಮ ನೀಡಿದ ಈ ಚಿತ್ರವು ಅವರಿಗೆ ಗೆಲ್ಲುತ್ತೇನೆಂಬ ಎಂಬ ಆತ್ಮವಿಶ್ವಾಸ ನೀಡಿದೆಯಂತೆ. ಈ ಕಾರಣಕ್ಕೆ ದುನಿಯಾ ವಿಜಯ್ ಸಲಗ ಪಾರ್ಟ್-2 ಮಾಡುವ ಆಲೋಚನೆಯಲ್ಲಿದ್ದಾರೆ.

ಆದರೆ ಸಲಗ ಪಾರ್ಟ್ 2 ಮಾಡಲು ನನಗೆ ಸಾಕಷ್ಟು ಚಾಲೆಂಜ್​ ಇದೆ. ಸಲಗದಲ್ಲಿ ನಾವು ಏನು ತೋರಿಸಿದ್ದೆವು ಎಂಬುದನ್ನು ಬಿಟ್ಟು, ಸಾಕಷ್ಟು ಕೆಲಸ ಮಾಡಬೇಕು. ಕಥೆಯಿಂದ ಹಿಡಿದು, ಸ್ಕ್ರೀನ್ ಪ್ಲೇವರೆಗೂ ಸಾಕಷ್ಟಿದೆ. ಜೊತೆಗೆ ಸಂಭಾಷಣೆಕಾರ ಮಾಸ್ತಿ ಮಂಜು ನಾವೆಲ್ಲ ಸೇರಿಕೊಂಡು ಸಾಕಷ್ಟು ಸಿದ್ಧತೆಯೊಂದಿಗೆ ಸಲಗ-2 ಮಾಡಬೇಕಿದೆ ಎಂದರು.

ದುನಿಯಾ ವಿಜಯ್​

ಸಲಗ ಚಿತ್ರವನ್ನು ಬೇರೆ ಭಾಷೆಯಲ್ಲೂ ಡಬ್ಬಿಂಗ್ ಮಾಡಿ ಬಿಡುಗಡೆ ಮಾಡುವ ಬಗ್ಗೆ ನಿರ್ಮಾಪಕ ಶ್ರೀಕಾಂತ್ ಹೇಳಿದ್ದರು. ಆದರೆ ನಾನು ಬೇಡ ಅಂತಾ ಹೇಳಿದೆ. ಯಾಕೆಂದರೆ ಬೇರೆ ಭಾಷೆಯಲ್ಲಿ ಡಬ್ಬಿಂಗ್ ಆಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೆಲ ಸಂದರ್ಭದಲ್ಲೇ ಮೂರ್ನಾಲ್ಕು ಜನ ಬಂದಂತೆ ನಮಗೂ ಅದೇ ಅವಮಾನ ಎದುರಾಗುವುದು ಬೇಡ ಎಂದಿದ್ದೆ. ಈಗ 'ಸಲಗ' ಸೂಪರ್ ಹಿಟ್ ಆಗಿದ್ದರಿಂದ ಬೇರೆ ಭಾಷೆಗೆ ಡಬ್ಬಿಂಗ್ ಮಾತುಕತೆ ನಡೆಯುತ್ತಿದೆ ಅಂತಾ ದುನಿಯಾ ವಿಜಯ್ ಹೇಳಿದ್ರು.

ಇದನ್ನೂ ಓದಿ: ಸಲಗ ಸಿನಿಮಾ ಆರಂಭವಾಗಿದ್ದು ಕೇವಲ 40 ರೂಪಾಯಿಯಲ್ಲಿ.! ಕಷ್ಟದ ದಿನಮಾನಗಳನ್ನು ನೆನದ ದುನಿಯಾ ವಿಜಯ್​

Last Updated : Jul 23, 2022, 2:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.