ಭಾರತೀಯ ಚಿತ್ರರಂಗ ಅಲ್ಲದೇ ಇಡೀ ವಿಶ್ವವೇ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತಹ ಸೂಪರ್ ಹಿಟ್ ಚಿತ್ರಗಳು ಮೂಡಿ ಬರುತ್ತಿವೆ. ಜೇಮ್ಸ್, ಕೆಜಿಎಫ್ 2, ವಿಕ್ರಾಂತ್ ರೋಣ, 777 ಚಾರ್ಲಿ, ಸದ್ಯ ಎಲ್ಲ ಕಡೆ ಬೇಜಾನ್ ಹವಾ ಸೃಷ್ಟಿಸಿರೋ ಕಾಂತಾರ ಸಿನಿಮಾ ಟ್ರೆಂಡ್ ಸೆಟ್ ಮಾಡಿದೆ. ಈ ಹಾದಿಯಲ್ಲಿ ಡಾಲಿ ಧನಂಜಯ್ ಮಾಜಿ ಡಾನ್ ಜಯರಾಜ್ ಬಯೋಪಿಕ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಹು ನಿರೀಕ್ಷಿತ ಸಿನಿಮಾ ಹೆಡ್ ಬುಷ್ ಚಿತ್ರ ಕೂಡ ಒಂದು. ಹಾಡು ಹಾಗು ಟ್ರೈಲರ್ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಚಿತ್ರವಿದು.
-
Full list of Paid Premier shows for today is here!! Book your tickets now, it’s selling out fast.#HeadBush #HeadBushTheFilm #HeadBushOnOct21@ZeeStudios_ @StarlingPayal @BeingShoonya @agnishreedhar @ImSimhaa @daali_pictures @filmy_cult @aanandaaudio @KRG_Connects pic.twitter.com/AuPwGU3TOl
— Dhananjaya (@Dhananjayaka) October 20, 2022 " class="align-text-top noRightClick twitterSection" data="
">Full list of Paid Premier shows for today is here!! Book your tickets now, it’s selling out fast.#HeadBush #HeadBushTheFilm #HeadBushOnOct21@ZeeStudios_ @StarlingPayal @BeingShoonya @agnishreedhar @ImSimhaa @daali_pictures @filmy_cult @aanandaaudio @KRG_Connects pic.twitter.com/AuPwGU3TOl
— Dhananjaya (@Dhananjayaka) October 20, 2022Full list of Paid Premier shows for today is here!! Book your tickets now, it’s selling out fast.#HeadBush #HeadBushTheFilm #HeadBushOnOct21@ZeeStudios_ @StarlingPayal @BeingShoonya @agnishreedhar @ImSimhaa @daali_pictures @filmy_cult @aanandaaudio @KRG_Connects pic.twitter.com/AuPwGU3TOl
— Dhananjaya (@Dhananjayaka) October 20, 2022
ಡಾಲಿ ಧನಂಜಯ್ ಅಭಿನಯಿಸಿ ನಿರ್ಮಾಣ ಮಾಡುತ್ತಿರುವ ಹೆಡ್ ಬುಷ್ ಸಿನಿಮಾ ಬಿಡುಗಡೆಗೂ ಮುನ್ನ ಒಳ್ಳೆ ಬಿಸಿನೆಸ್ ಆಗಿದೆ. ಹೆಡ್ ಬುಷ್ ಚಿತ್ರ ತಂಡದ ಸದ್ಯಸರೊಬ್ಬರು ಹೇಳುವ ಪ್ರಕಾರ, ಝೀ ಸ್ಟುಡಿಯೋಸ್ ಸಂಸ್ಥೆ ಬರೋಬ್ಬರಿ 22 ಕೋಟಿಗೆ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ಖರೀದಿಸಿದೆಯಂತೆ.
ಇನ್ನು ಹೆಡ್ ಬುಷ್ ಟ್ರೈಲರ್ ನೋಡಿ ಬಾಲಿವುಡ್, ಟಾಲಿವುಡ್ , ಕಾಲಿವುಡ್ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಹೆಡ್ ಬುಷ್ಗೆ ಪ್ಯಾನ್ ಇಂಡಿಯಾ ಕ್ರೇಜ್ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನದ ಮೊದಲೇ ಹೆಡ್ ಬುಷ್ ಟಿಕೆಟ್ ಬುಕ್ಕಿಂಗ್ ಆರಂಭ ಆಗಿದೆ. ಇದರ ಜೊತೆಗೆ ಚಿತ್ರ ತಂಡ ರಾಜ್ಯಾದ್ಯಂತ ಇಂದು ಸಂಜೆ ಪ್ರೀ ಪೇಯ್ಡ್ ಪ್ರಿಮಿಯರ್ ಶೋ ಹಮ್ಮಿಕೊಂಡಿದೆ.
ಇನ್ನೂ ಧನಂಜಯ್ ಕೂಡ ಕಾಲಿಗೆ ಚಕ್ರ ಕಟ್ಟಿಕೊಂಡು ಈ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದಾರೆ. ದೀಪಾವಳಿ ಹಿನ್ನೆಲೆ, ಹೆಡ್ ಬುಷ್ ಪಟಾಕಿ, ಡಾಲಿ ಬಾಂಬ್, ಜಯರಾಜ್ ರಾಕೆಟ್, ಹಬೀಬಿ ಫ್ಲವರ್ ಪಾಟ್, ಗಂಗಾ ಪಟಾಕಿ, ಕೊತ್ವಾಲ್ ಭೂಚಕ್ರ ಮಾರ್ಕೆಟ್ನಲ್ಲಿ ಲಭ್ಯವಿದೆ.
ಒಂದು ಕಾಲದ ಬೆಂಗಳೂರು ಭೂಗತ ಲೋಕದ ನೈಜ ಕಥೆಯನ್ನು ಈ ಆ್ಯಕ್ಷನ್ ಕ್ರೈಂ ಥ್ರಿಲ್ಲರ್ ಚಿತ್ರದಲ್ಲಿ ಹೇಳುವ ಪ್ರಯತ್ನವನ್ನು ನಿರ್ದೇಶಕ ಅಗ್ನಿ ಶ್ರೀಧರ್ ಶಿಷ್ಯ ಶೂನ್ಯ ಮಾಡಿದ್ದಾರೆ. ಅಗ್ನಿ ಶ್ರೀಧರ್ ಚಿತ್ರಕ್ಕೆ ಚಿತ್ರಕಥೆ ಬರೆದಿರೋದು ಹೈಲೆಟ್ಸ್. ಇನ್ನು ಧನಂಜಯ್ ಅಲ್ಲದೇ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ, ಶೃತಿ ಹರಿಹರನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಇದನ್ನೂ ಓದಿ: ಮತ್ತೊಂದು ಯಶಸ್ಸಿಗೆ ಸ್ಯಾಂಡಲ್ವುಡ್ ಸಿದ್ಧ: ಡಾಲಿಯ ಹೆಡ್ ಬುಷ್ಗೆ ಕಾಂತಾರ ಸಾರಥಿಯಿಂದ ಗುಡ್‌ಲಕ್
ಹೆಡ್ ಬುಷ್ 70 - 80ರ ದಶಕದ ಬೆಂಗಳೂರು ಭೂಗತ ಲೋಕದ ಕಥೆ. ಮುಖ್ಯವಾಗಿ ಬೆಂಗಳೂರು ಪಾತಕ ಲೋಕದ ಆರಂಭದ ದಿನಗಳನ್ನು ಈ ಚಿತ್ರದಲ್ಲಿ ಹೇಳಿದ್ದಾರೆ. ಜಯರಾಜ್, ಕೊತ್ವಾಲರಂತಹ ರೌಡಿಗಳು ಭೂಗತ ಲೋಕಕ್ಕೆ ಹೇಗೆ ಎಂಟ್ರಿ ಕೊಟ್ಟರು ಎನ್ನುವುದನ್ನು ಮೊದಲ ಭಾಗದಲ್ಲಿ ನೋಡಬಹುದು. ರೆಟ್ರೋ ಲುಕ್, ನಿಜವಾದ ಕಥೆ ಎಂಬ ಕಾರಣಕ್ಕೆ ಹೆಡ್ ಬುಷ್ ಸಿನಿಮಾ ಸದ್ದು ಮಾಡುತ್ತಿದ್ದು, ನಾಳೆ ರಾಜ್ಯಾದ್ಯಂತ ಈ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಡಾನ್ ಜಯರಾಜ್ ಪಾತ್ರದಲ್ಲಿ ಡಾಲಿ ಕಮಾಲ್ ... ಹೆಡ್ಬುಷ್ ಟ್ರೈಲರ್ಗೆ ಫ್ಯಾನ್ಸ್ ಫಿದಾ!