ETV Bharat / entertainment

ಉಪ್ಪಿ ನಿರ್ದೇಶನದ UI ಸಿನಿಮಾ ಎಡಿಟಿಂಗ್​ ಶುರು: 8 ವರ್ಷಗಳ ಬಳಿಕ ಮಾನಿಟರ್​ ಮುಂದೆ ಕುಳಿತ ರಿಯಲ್​ ಸ್ಟಾರ್​ - ಈಟಿವಿ ಭಾರತ ಕನ್ನಡ

Upendra; ಎಂಟು ವರ್ಷಗಳ ಬಳಿಕ ರಿಯಲ್‌ ಸ್ಟಾರ್ ಉಪೇಂದ್ರ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಅಖಾಡಕ್ಕೆ ಇಳಿದಿದ್ದಾರೆ.

UI
UI ಸಿನಿಮಾ
author img

By

Published : Aug 1, 2023, 1:41 PM IST

Updated : Aug 1, 2023, 5:18 PM IST

ಉಪ್ಪಿ ನಿರ್ದೇಶನದ UI ಸಿನಿಮಾ ಎಡಿಟಿಂಗ್​ ಶುರು

ರಿಯಲ್‌ ಸ್ಟಾರ್ ಉಪೇಂದ್ರ ನಟನೆಯ ಜೊತೆಗೆ ಅವರ ನಿರ್ದೇಶನಕ್ಕೂ ದೊಡ್ಡ ಮಟ್ಟದ ಅಭಿಮಾನಿಗಳಿದ್ದಾರೆ. ಈ‌ ಮಾತು ಈಗಲ್ಲ, ಹಿಂದಿನಿಂದಲೂ ಸಿನಿಪ್ರಿಯರು ಪ್ರೂವ್ ಮಾಡುತ್ತಲೇ ಬಂದಿದ್ದಾರೆ. ಇದುವರೆಗೂ ಉಪ್ಪಿ ಆ್ಯಕ್ಷನ್ ಕಟ್ ಹೇಳಿದ ಸಿನಿಮಾಗಳು ಸೋತಿದ್ದೇ ವಿರಳ. ಆದರೆ, ಉಪೇಂದ್ರ ಅವರು ಐದು ಅಥವಾ ಹತ್ತು ವರ್ಷಕೊಮ್ಮೆ ಸಿನಿಮಾ ನಿರ್ದೇಶನ ಮಾಡ್ತಾರೆ ಅನ್ನೋದು ಅಭಿಮಾನಿಗಳ ದೂರು.

ಹೌದು. ಉಪ್ಪಿ 2 ಸಿನಿಮಾದ ಬಳಿಕ ಎಂಟು ವರ್ಷಗಳಾದ ಮೇಲೆ ರಿಯಲ್‌ ಸ್ಟಾರ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟು ಅಖಾಡಕ್ಕೆ ಇಳಿದಿದ್ದಾರೆ. ಈ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿದೆ. ಟೈಟಲ್​ನಿಂದಲೇ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ UI (ಯುಐ) ಸಿನಿಮಾಗೆ ಇವರೇ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಚಿತ್ರದ ಶೂಟಿಂಗ್​ ಕೂಡ ಸೈಲೆಂಟ್​ ಆಗಿಯೇ ಮುಕ್ತಾಯಗೊಂಡಿದೆ. ಸದ್ಯ ಪೋಸ್ಟ್​ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದಾರೆ.

ಸದ್ಯ ಉಪೇಂದ್ರ ಅವರು ತಮ್ಮ ಯುಐ ಸಿನಿಮಾದ ನಿರ್ಮಾಪಕರ ಜೊತೆ ಮಾನಿಟರ್ ಮುಂದೆ ಕೂತಿದ್ದಾರೆ. ಉಪೇಂದ್ರ ನಟಿಸಿ ಹಾಗೂ ನಿರ್ದೇಶನ ಮಾಡಿರುವ ಯುಐ ಸಿನಿಮಾದ ಎಡಿಟಿಂಗ್ ಕೆಲಸ ಶುರು ಆಗಿದೆ. ಸ್ವತಃ ರಿಯಲ್‌ಸ್ಟಾರ್ ಉಪೇಂದ್ರ ಅವರೇ ಎಡಿಟಿಂಗ್ ಮಾಡಿಸುತ್ತಿದ್ದಾರೆ. ಎಡಿಟಿಂಗ್ ಸ್ಟುಡಿಯೊದಲ್ಲಿ ಉಪೇಂದ್ರ ಜೊತೆ ನಿರ್ಮಾಪಕ ಕೆಪಿ ಶ್ರೀಕಾಂತ್ ಕೂಡ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಗ್ಗೆ ಕುತೂಹಲ ಮೂಡಿಸುವ ಈ ವಿಡಿಯೋದಲ್ಲಿ ಸಿನಿಮಾ ಸೀನ್‌ಗಳನ್ನು ನೋಡಿ ನಿರ್ಮಾಪಕರು ಕೂಡ ಥ್ರಿಲ್ ಆಗಿದ್ದಾರೆ.

ಇದನ್ನೂ ಓದಿ: ಪ್ರೇಕ್ಷಕರ ಜೊತೆ ಕುಳಿತು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ವೀಕ್ಷಿಸಿದ ಡಾಲಿ ಧನಂಜಯ್

ಉಪೇಂದ್ರ ಈ ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ಬಳಸಿದ್ದಾರೆ. ಸುಮಾರು 200 ಕ್ಯಾಮರಾಗಳನ್ನು ಬಳಸಿ ಶೂಟ್ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಪ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ಈ ತಂತ್ರಜ್ಞಾನವನ್ನು ಜೇಮ್ಸ್ ಕೆಮರಾನ್ 'ಅವತಾರ್ 2' ಸಿನಿಮಾಗೆ ಈ ಬಳಸಲಾಗಿತ್ತು. ಇಷ್ಟೇ ಅಲ್ಲದೆ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಅನ್ನು ಬಳಸಲಾಗಿದೆ. ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ ಅನ್ನೋದು ಗಮನಾರ್ಹ.

ಇನ್ನು ಉಪ್ಪಿ ನಿರ್ದೇಶಿಸಿದ ಈ ಸಿನಿಮಾ ಸುಮಾರು 100 ಕೋಟಿ ರೂಪಾಯಿ ಬಜೆಟ್​ನಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ವರದಿಗಳಾಗಿವೆ. ಅಲ್ಲದೇ, ತಾಂತ್ರಿಕವಾಗಿಯೂ ಈ ಸಿನಿಮಾ ಅಡ್ವಾನ್ಸ್ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಸದ್ಯಕ್ಕೀಗ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮತ್ತೊಂದೆಡೆ, ಈ ಸಿನಿಮಾ 2023 ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗುತ್ತಿದೆ. ಸದ್ಯ ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ದುಬಾರಿ ಸಿನಿಮಾಗಳಲ್ಲಿ ಯುಐ ಕೂಡ ಒಂದು. ಹೀಗಾಗಿ ಹಲವಾರು ಸ್ಪೆಷಾಲಿಟಿಗಳಿಗೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ರಿಯಲ್ ಸ್ಟಾರ್ ಈ ಬಾರಿ ಯುಐ ಚಿತ್ರದ ಮೂಲಕ ಏನೋ ಹೇಳೋದಿಕ್ಕೆ ಹೊರಟ್ಟಿದ್ದಾರೆ ಅನ್ನೋದು ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.

ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ನಿಮಿಕಾ ರತ್ನಾಕರ್​: 'ತ್ರಿಶೂಲಂ' ಮೂಲಕ ಉಪ್ಪಿಗೆ ಜೋಡಿಯಾದ 'ಪುಷ್ಪವತಿ'

Last Updated : Aug 1, 2023, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.