ETV Bharat / entertainment

ದೂದ್ ಪೇಡಾ ದಿಗಂತ್ ಕುತ್ತಿಗೆ ಭಾಗಕ್ಕೆ ಆಪರೇಷನ್, ಯಾವುದೇ ಅಪಾಯವಿಲ್ಲ ಎಂದ ವೈದ್ಯರು - ಸಮ್ಮರ್​ ಸಾಲ್ಟ್​ ಜಂಪ್​

ಗೋವಾದ ಸಮುದ್ರ ದಡದಲ್ಲಿ ಸಮ್ಮರ್​ ಸಾಲ್ಟ್​ ಜಂಪ್​ ಮಾಡುವ ವೇಳೆ ಆಯತಪ್ಪಿ ಬಿದ್ದು ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದ ನಟ ದಿಗಂತ್​ಗೆ ಅಪರೇಷನ್ ಮಾಡಲಾಗಿದ್ದು, ಯಾವುದೇ ಅಪಾಯವಿಲ್ಲ ಎಂದ ವೈದ್ಯರು ಹೇಳಿದ್ದಾರೆ.

ದಿಗಂತ್
ದಿಗಂತ್
author img

By

Published : Jun 22, 2022, 10:30 AM IST

ಗೋವಾದಲ್ಲಿ ಸಮ್ಮರ್ ಸಾಲ್ಟ್ ಜಂಪ್ ಮಾಡುವ ವೇಳೆ ಆಯತಪ್ಪಿ ಬಿದ್ದು ನಟ‌ ದಿಗಂತ್ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಮಾಡಿಕೊಂಡಿದ್ದರು‌. ಕುತ್ತಿಗೆ ಭಾಗದಲ್ಲಿ ನೋವು ಜಾಸ್ತಿ ಆಗಿದ್ದರಿಂದ ಕೂಡಲೇ ಅವರ ಕುಟುಂಬಸ್ಥರು ಏರ್ ಲಿಫ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ದಿಗಂತ್ ಆರೋಗ್ಯದ ಸ್ಥಿತಿ ಅರಿತ ವೈದ್ಯರು ಆಪರೇಷನ್ ಮಾಡಿದ್ದು, ಯಾವುದೇ ಅಪಾಯವಿಲ್ಲ ಎಂದು ತಿಳಿಸಿದ್ದಾರೆ.

ಮಣಿಪಾಲ್ ಆಸ್ಪತ್ರೆಯು ದಿಗಂತ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಬೆಳಗ್ಗೆ 11 ಗಂಟೆ ನಂತರ ಎರಡನೇ ಹೆಲ್ತ್ ಬುಲೇಟಿನ್ ರಿಲೀಸ್ ಮಾಡಲಿದ್ದೇವೆ ಎಂದು ಮಣಿಪಾಲ್ ಆಸ್ಪತ್ರೆಯಿಂದ ಹೇಳಲಾಗಿದೆ. ಈ ಹೆಲ್ತ್ ಬುಲೆಟಿನ್​ನಲ್ಲಿ ವೈದ್ಯರು ಹೇಳುವ ಹಾಗೆ ಇದೊಂದು ಸ್ಪೋರ್ಟ್ಸ್ ಇಂಜುರಿ ಆಗಿದ್ದು, ಇದಕ್ಕೆ ಚಿಕಿತ್ಸೆ ನೀಡಲಾಗಿದೆ. ದಿಗಂತ್‌ಗೆ ಆಪರೇಷನ್ ಮಾಡಿ ಮುಗಿಸಿದ್ದು, ಸದ್ಯಕ್ಕೆ ಅಬ್ಸರ್ವೇಷನ್​ನಲ್ಲಿದ್ದಾರೆ ಎಂದಿದ್ದಾರೆ.

ದಿಗಂತ್  ಹೆಲ್ತ್ ಬುಲೆಟಿನ್
ದಿಗಂತ್ ಹೆಲ್ತ್ ಬುಲೆಟಿನ್

ವಿದ್ಯಾಧರ್ ವೈದ್ಯರ ತಂಡ ದಿಗಂತ್ ಅವರಿಗೆ ಚಿಕಿತ್ಸೆ ನೀಡುತ್ತಿದೆ. ನಟನ ಜೊತೆ ಪತ್ನಿ ಐಂದ್ರಿತಾ ರೇ, ಅವರ ತಂದೆ, ತಾಯಿ ಇದ್ದಾರೆ‌. ಇನ್ನೂ ನಾಲ್ಕು ದಿನ ದಿಗಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ.

ಈ ಹಿಂದೆ ಬಾಲಿವುಡ್ ಸಿನಿಮಾವೊಂದರ ಚಿತ್ರೀಕರಣ ಸಂದರ್ಭದಲ್ಲಿ ದಿಗಂತ್ ಅವರ ಕಣ್ಣಿಗೆ ಬಲವಾದ ಏಟು ಬಿದ್ದ ಪರಿಣಾಮ ಇವತ್ತಿಗೂ ಅವರ ಬಲ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ ಅಂತಾ ಸ್ವತಃ ದಿಗಂತ್ ಅವರೇ ಸಾಕಷ್ಟು ಬಾರಿ ಹೇಳಿದ್ದಾರೆ‌. ಸದ್ಯಕ್ಕೆ ದಿಗಂತ್ ಅಭಿನಯದ 'ಗಾಳಿಪಟ 2' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಇಂತಹ ಸಮಯದಲ್ಲಿ ಕುತ್ತಿಗೆ ಪೆಟ್ಟು ಮಾಡಿಕೊಂಡಿರುವುದು ನಿರ್ದೇಶಕ ಯೋಗರಾಜ್ ಭಟ್​ಗೂ ನೋವುಂಟು ಮಾಡಿದೆ. ಹೀಗಾಗಿ, ನಿನ್ನೆಯಷ್ಟೇ ನಿರ್ದೇಶಕ ಯೋಗರಾಜ್ ಭಟ್ ಆಸ್ಪತ್ರೆಗೆ ಬಂದು ದಿಗಂತ್ ಆರೋಗ್ಯ ವಿಚಾರಿಸಿ ಧೈರ್ಯದ ಮಾತುಗಳನ್ನ ಹೇಳಿದ್ದಾರೆ.

ಇದನ್ನೂ ಓದಿ: ನಟ ದೂದ್ ಪೇಡಾ ದಿಗಂತ್​ ಕುತ್ತಿಗೆಗೆ​ ಗಂಭೀರ ಗಾಯ: ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.