ಹೈದರಾಬಾದ್: ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಮಗ ಕರಣ್ ಡಿಯೋಲ್ ಮದುವೆ ಇತ್ತೀಚೆಗಷ್ಟೆ ಅದ್ದೂರಿಯಾಗಿ ಸಾಗಿತ್ತು. ಈ ಮದುವೆ ಸಂಭ್ರಮದ ಚಿತ್ರಗಳನ್ನು ನಟ ಸೇರಿದಂತೆ ಮಧುಮಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಅಭಿಮಾನಿಗಳೊಂದಿಗೆ ಸಂತಸ ಆಚರಿಸುತ್ತಿದ್ದಾರೆ. ಕರಣ್ ಮದುವೆ ಮತ್ತು ಆರತಕ್ಷತೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದರ ವಿಶೇಷತೆ ಎಂದರೆ ಸೆಲೆಬ್ರಿಟಿಗಳ ಹೆಂಡತಿಯರಾದರೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿರುವ ಧರ್ಮೇಂದ್ರ ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಮತ್ತು ಸನ್ನಿ ಡಿಯೋಲ್ ಹೆಂಡತಿ ಪೂಜಾ ಡಿಯೋಲ್ ಕಾಣಬಹುದು. ಇನ್ಸ್ಟಾಗ್ರಾಂನಲ್ಲಿ ಈ ಮುದ್ದು ಕುಟುಂಬಗಳ ಫೋಟೋವನ್ನು ಹಂಚಿಕೊಂಡ ಕರಣ್, ನಮ್ಮ ಪ್ರೀತಿಯ ಕುಟುಂಬದ ಬೆಂಬಲ ಮತ್ತು ಆಶೀರ್ವಾದಕ್ಕೆ ಕೃತಜ್ಞರಾಗಿರುತ್ತೇವೆ. ಹೃದಯ ತುಂಬಿದ್ದು, ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಅಡಿ ಬರಹ ಬರೆದಿದ್ದಾರೆ. ಮೊದಲ ಫೋಟೋದಲ್ಲಿ ನವ ದಂಪತಿಗಳು ತಮ್ಮ ಅಜ್ಜನಾದ ಖ್ಯಾತ ನಟ ಧರ್ಮೇಂದ್ರ ಮತ್ತು ಅವರ ಮೊದಲ ಹೆಂಡತಿ ಪ್ರಕಾಶ್ ಕೌರ್ ಅವರೊಂದಿಗೆ ಇದ್ದಾರೆ.
ಸಾಂಪ್ರದಾಯಿಕ ಉಡುಪಿನಲ್ಲಿ ಕರಣ್ ಮಿಂಚು: ಮತ್ತೊಂದು ಚಿತ್ರದಲ್ಲಿ ಕರಣ್ ಮತ್ತು ಆತನ ಹೆಂಡತಿ ದ್ರಿಶಾ ಆಚಾರ್ಯ, ನಟ ಸನ್ನಿ ಡಿಯೋಲ್ ಮತ್ತು ಆತನ ಹೆಂಡತಿ ಪೂಜಾ ಡಿಯೋಲ್ನೊಂದಿಗೆ ಕಂಡಿದ್ದಾರೆ. ಇನ್ನು ಮೂರು ಮತ್ತು ನಾಲ್ಕನೇ ಚಿತ್ರದಲ್ಲಿ ಡಿಯೋಲ್ ಸಂಪೂರ್ಣ ಕುಟುಂಬವನ್ನು ಕಾಣಬಹುದಾಗಿದೆ. ಇನ್ನು ಕಡೆಯ ಚಿತ್ರದಲ್ಲಿ ಕರಣ್ ಅಪ್ಪನ ಜೊತೆ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದ್ದಾರೆ.
ನಟ ಕರಣ್ ಈ ಚಿತ್ರ ಹಂಚಿಕೊಳ್ಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕೆಂಪು ಹೃದಯ ಮತ್ತು ಬೆಂಕಿಯ ಎಮೋಜಿಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕ ಅಭಿಮಾನಿಗಳು ಸುಂದರ ಕುಟುಂಬ ಎಂದು ಕಾಮೆಂಟ್ ಮಾಡಿ ನೂತನ ದಂಪತಿಗಳಿಗೆ ಶುಭ ಕೋರಿದ್ದಾರೆ. ಮದುವೆ ಬಳಿಕ ಕರಣ್ ಮತ್ತು ದ್ರಿಶಾ ಸಿನಿ ಉದ್ಯಮದ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಮಾರಂಭದಲ್ಲಿ ನಟ ಸಲ್ಮಾನ್ ಖಾನ್, ಆಮೀರ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಅನುಪಮ್ ಖೇರ್ ಸೇರಿದಂತೆ ಹಲವು ಮಂದಿ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.
ಇನ್ನು ಮದುವೆ ಬಳಿಕ ಮೊದಲ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ನಟ ಸನ್ನಿ ಡಿಯೋಲ್, ಇಂದು ನಾನು ಸುಂದರ ಪುತ್ರಿಯನ್ನು ಪಡೆದಿದ್ದೇನೆ. ನನ್ನ ಮಕ್ಕಳಿಗೆ ಆಶೀರ್ವಾದ. ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ ಎಂದು ಬರೆದಿದ್ದರು. ಕರಣ್ ಮತ್ತು ದ್ರಿಶಾ ಹಲವು ಕಾಲಗಳಿಂದ ಸಂಬಂಧದಲ್ಲಿದ್ದರು. ದ್ರಿಶಾ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಅಷ್ಟೇ ಅಲ್ಲದೇ, ಈಕೆ ಖ್ಯಾತ ಸಿನಿ ನಿರ್ದೇಶಕ ಬಸು ಭಟ್ಟಾಚಾರ್ಯರ ಕುಟುಂಬದ ಕುಡಿಯಾಗಿದ್ದಾರೆ. ಇನ್ನು ಕರಣ್ ಕೂಡ ಹಲವು ಬಾಲಿವುಡ್ ಸಿನಿಮಾಗಳಲ್ಲಿ ಮಿಂಚಿದ್ದಾರೆ. 2019ರಲ್ಲಿ ತಂದೆ ನಿರ್ದೇಶನದ "ಪಲ್ ಪಲ್ ದಿಲ್ ಕಿ ಪಾಸ್" ಚಿತ್ರದ ಮೂಲಕ ಬಾಲಿವುಡ್ ಪದಾರ್ಪಣೆ ಮಾಡಿದರು.
ಇದನ್ನೂ ಓದಿ: ಸಂಭ್ರಮದ ಕ್ಷಣದಲ್ಲಿ ಡಿಯೋಲ್ ಫ್ಯಾಮಿಲಿ: ಮದುವೆ ಶಾಸ್ತ್ರದಲ್ಲಿ ಕರಣ್ ದ್ರಿಶಾ