ETV Bharat / entertainment

ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಜನ್ಮದಿನ: ಸರ್ಕಾರಿ ಶಾಲೆಗೆ ಡೆಸ್ಕ್​​ ವಿತರಿಸಿದ ಕೊಪ್ಪಳ ಅಭಿಮಾನಿಗಳು - darshan birthday

ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಜನ್ಮದಿನವನ್ನು ಕೊಪ್ಪಳದ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.

actor darshan birthday
ದರ್ಶನ್ ಜನ್ಮದಿನ
author img

By

Published : Feb 16, 2023, 8:33 PM IST

Updated : Feb 17, 2023, 4:33 PM IST

ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಜನ್ಮದಿನ

ಗಂಗಾವತಿ (ಕೊಪ್ಪಳ): ಸ್ಯಾಂಡಲ್​ವುಡ್​ನ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿಮಾನಿಗಳಿಗೆ ಇಂದು ಹಬ್ಬದ ವಾತಾವರಣ. 46ನೇ ಜನ್ಮದಿನದ ಸಂಭ್ರಮದಲ್ಲಿರುವ ದರ್ಶನ್​ ಅವರಿಗೆ ಕುಟುಂಬಸ್ಥರು, ಆತ್ಮೀಯರು, ಚಿತ್ರರಂಗವರು ಸೇರಿದಂತೆ ಅಭಿಮಾನಿಗಳು ವಿಶೇಷವಾಗಿ ಶುಭ ಕೋರಿದ್ದಾರೆ. ದಚ್ಚು ಹುಟ್ಟು ಹಬ್ಬವನ್ನು ವಿವಿಧೆಡೆ ಅವರ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.

ನಟಿ ರಕ್ಷಿತಾ ಪ್ರೇಮ್​ ಟ್ವೀಟ್: ಟ್ವಿಟರ್​ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿರುವ ನಟಿ ರಕ್ಷಿತಾ ಅವರು, ಇದು ಆ ಸಂಜೆಯ ನನ್ನ ಮೆಚ್ಚಿನ ಚಿತ್ರ. ಪ್ರೀತಿ ಮತ್ತು ಬೆಂಬಲಕ್ಕಾಗಿ, ಕೆಲ ಸುಂದರ ನೆನಪುಗಳಿಗಾಗಿ ಧನ್ಯವಾದಗಳು. ಜನ್ಮದಿನದ ಶುಭಾಶಯಗಳು ನನ್ನ ಪ್ರೀತಿಯ ದಾಸ ದರ್ಶನ್, ನೀವು ನಿಜವಾಗಿಯೂ ಉತ್ತಮವಾದದ್ದಕ್ಕೆ ಅರ್ಹರು ಎಂದು ಬರೆದುಕೊಂಡಿದ್ದಾರೆ.

  • This is my fav pic of that evening .. thank you for some beautiful memories for all the love n support … happy birthday my dearest @dasadarshan u truly deserve only the best ❤️❤️ pic.twitter.com/t3VwEYKedc

    — Rakshitha Prem (@RakshithaPrem) February 15, 2023 " class="align-text-top noRightClick twitterSection" data=" ">

ಸುಮಲತಾ ಅಂಬರೀಶ್ ಟ್ವೀಟ್: ಪ್ರತಿಭೆಗೆ ತಕ್ಕಂತೆ ಅಪಾರ ಪರಿಶ್ರಮದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಚಿತ್ರರಂಗದಲ್ಲಿ ಧ್ರುವ ನಕ್ಷತ್ರದಂತೆ ಪ್ರಜ್ವಲಿಸುತ್ತಿರುವ ಪ್ರೀತಿಯ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು. ಆ ಭಗವಂತ ದೀರ್ಘ ಆಯಸ್ಸು , ಉತ್ತಮ ಆರೋಗ್ಯ ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುವೆ. ನೀವಿಡುವ ಎಲ್ಲ ಹೆಜ್ಜೆಗಳಿಗೆ ಗೆಲುವಾಗಲಿ ಎಂದು ಸಂಸದೆ ಸುಮಲತಾ ಅಂಬರೀಶ್ ಟ್ವೀಟ್ ಮಾಡಿದ್ದಾರೆ. ಪುತ್ರ ಅಭಿಷೇಕ್​ ಮತ್ತು ದರ್ಶನ್​ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.

ಡಾಲಿ ಧನಂಜಯ್​ ಹೀಗಂದ್ರು: ನಮ್ಮ ಮೆಚ್ಚಿನ ಚಾಲೆಂಜಿಂಗ್ ಸ್ಟಾರ್, ಪ್ರೀತಿಯ ಸಹೋದರನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಡಾಲಿ ಧನಂಜಯ್​ ಬರೆದುಕೊಂಡಿದ್ದಾರೆ. ಜೊತೆಗೆ ದರ್ಶನ್​ ಅವರ ಕಾಟೆರ (kaatera) ಸಿನಿಮಾಗೆ ಶುಭ ಹಾರೈಸಿದ್ದಾರೆ.

ಕನಕಗಿರಿ ತಾಲೂಕಿನ ಜೀರಾಳ ಕಲ್ಗುಡಿ ಗ್ರಾಮದಲ್ಲಿರುವ ದರ್ಶನ್​ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಜನ್ಮ ದಿನಾಚರಣೆ ಅಂಗವಾಗಿ ಗ್ರಾಮದ ಸರ್ಕಾರಿ ಶಾಲೆಗೆ ಡೆಸ್ಕ್ ವಿತರಿಸಿದ್ದಾರೆ. ಕೆಲ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಅಗತ್ಯ ಸೌಲಭ್ಯಗಳಿರುವುದಿಲ್ಲ. ಇದನ್ನು ಮನಗಂಡ ಕರ್ನಾಟಕ ಕಲಾ ರತ್ನ ಬಾಯ್ಸ್ ಬಳಗ ಸುಮಾರು 25 ಸಾವಿರ ರೂಪಾಯಿ ಮೊತ್ತದ ಆರು ಡೆಸ್ಕ್ ವಿತರಿಸಿದೆ.

  • ಪ್ರತಿಭೆಗೆ ತಕ್ಕಂತೆ ಅಪಾರ ಪರಿಶ್ರಮದಿಂದ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿ ಚಿತ್ರರಂಗದಲ್ಲಿ ಧ್ರುವ ನಕ್ಷತ್ರದಂತೆ ಪ್ರಜ್ವಲಿಸುತ್ತಿರುವ ಪ್ರೀತಿಯ ದರ್ಶನ್'ಗೆ ಹುಟ್ಟುಹಬ್ಬದ ಶುಭ ಹಾರೈಕೆಗಳು.ಆ ಭಗವಂತ ದೀರ್ಘ ಆಯಸ್ಸು ,ಉತ್ತಮ ಆರೋಗ್ಯ ಕರುಣಿಸಿ ಕಾಪಾಡಲಿ ಎಂದು ಪ್ರಾರ್ಥಿಸುವೆ.ನೀವಿಡುವ ಎಲ್ಲ ಹೆಜ್ಜೆಗಳಿಗೆ ಗೆಲುವಾಗಲಿ❤️ @dasadarshan pic.twitter.com/VZqCvalGhf

    — Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) February 16, 2023 " class="align-text-top noRightClick twitterSection" data=" ">

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಕಲಾ ರತ್ನ ಬಾಯ್ಸ್ ಬಳಗದ ಕೊಪ್ಪಳ ಜಿಲ್ಲಾಧ್ಯಕ್ಷ ಮಂಜುಗಜ, ಹುಟ್ಟುಹಬ್ಬದ ನೆಪದಲ್ಲಿ ದುಂದು ವೆಚ್ಚ ಮಾಡುವ ಬದಲಿಗೆ ಮಕ್ಕಳಿಗೆ ಉಪಯುಕ್ತವಾಗಲಿ ಎಂಬ ಕಾರಣಕ್ಕೆ ಈ ಡೆಸ್ಕ್ ವಿತರಣೆ ಮಾಡಿದ್ದೇವೆ ಎಂದರು.

ದರ್ಶನ್ ಮಾದರಿ: ಈ ಬಗ್ಗೆ ಮಾತನಾಡಿದ ಗಜ ಮಂಜು, ಸಾಮಾಜಿಕ ಸೇವೆ ಮಾಡುವ ಮೂಲಕ ಹುಟ್ಟುಹಬ್ಬಗಳನ್ನು ಆಚರಿಸಬೇಕು ಎಂದು ನಮಗೆ ಮಾದರಿ ಹಾದಿ ತೋರಿಸಿ ಕೊಟ್ಟಿದ್ದೇ ದರ್ಶನ್​ ಅವರು. ಅವರ ಮಾರ್ಗದರ್ಶನದಂತೆ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಮ್ಮಿಂದ ಆದ ಸಾಮಾಜಿಕ ಕಾರ್ಯ ಮಾಡುತ್ತಿದ್ದೇವೆ. ಕೇವಲ ಸಾಮಾಜಿಕ ಸೇವೆ ಮಾತ್ರವಲ್ಲ, ಪರಿಸರ ಸಂರಕ್ಷಣೆ, ವನ್ಯಪ್ರಾಣಿಗಳ ರಕ್ಷಣೆ, ಸಾಮಾಜಿಕ ಜವಾಬ್ದಾರಿಯ ಬಗ್ಗೆ ನಮ್ಮಲ್ಲಿ ಜಾಗೃತಿ ಮೂಡಿಸಿದವರು ಡಿ ಬಾಸ್ ದರ್ಶನ್ ಅವರು ಎಂದು ಮಂಜು ಹೇಳಿದರು.

ಇದನ್ನೂ ಓದಿ: 'ನನಗಾಗಿ ಪದ್ಮ ಪ್ರಶಸ್ತಿ ಕೊಡಿಸುವ ಅಭಿಯಾನ ಆರಂಭಿಸಬೇಡಿ': ನಟ ಅನಂತ್​ ನಾಗ್​

Last Updated : Feb 17, 2023, 4:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.