ETV Bharat / entertainment

''ಬೇಕಂತಲೇ ಮಾಡುತ್ತಿರುವ ವಿವಾದವಿದು'': ಪಠಾಣ್ ಬಾಯ್ಕಾಟ್​​ ಕೂಗಿಗೆ ಚೇತನ್ ಆಕ್ರೋಶ​​ - Pathan boycott matter

ಪಠಾಣ್ ಬಾಯ್ಕಾಟ್​​ ಕೂಗಿಗೆ ನಟ ಚೇತನ್​ ಟ್ವೀಟ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

actor chetan tweet on Pathan boycott matter
ಪಠಾಣ್ ಬಾಯ್ಕಾಟ್​​ ಕೂಗಿಗೆ ಚೇತನ್ ಆಕ್ರೋಶ​​
author img

By

Published : Dec 16, 2022, 3:30 PM IST

ಸೋಮವಾರ ಬಿಡುಗಡೆ ಆದ ಬಾಲಿವುಡ್​​ನ 'ಪಠಾಣ್​' ಚಿತ್ರದ ಬೇಷರಮ್​ ರಂಗ್ ಹಾಡು ವಿವಾದಕ್ಕೆ ಸಿಲುಕಿದೆ. ಬಾಯ್ಕಾಟ್ ಪಠಾಣ್​ ಕೂಗು ಜೋರಾಗಿಯೇ ಕೇಳಿ ಬರುತ್ತಿದೆ. ವಾದ ವಿವಾದ ಜೋರಾಗುತ್ತಿದ್ದು, ನಟ ಚೇತನ್​​ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

''ಕೇಸರಿ ಬಿಕಿನಿ ಮತ್ತು ಹಸಿರು ಶರ್ಟ್​​ ಕಾರಣದಿಂದ ಪಠಾಣ್​​ ಚಿತ್ರದ ಹಾಡು ರಾಜಕೀಯಗೊಳ್ಳುತ್ತಿದೆ. ಬಟ್ಟೆಯ ಬಣ್ಣದ ಕಾರಣಕ್ಕೆ ಈ ವಿರೋಧವು ಬಹಳ ಕ್ಷುಲ್ಲಕವಾಗಿದೆ. ಬುದ್ಧ ಮತ್ತು ಬಸವನವರ ಬಣ್ಣವಾದ ಕೇಸರಿಯನ್ನು ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ. ಪ್ರಕೃತಿ ಮತ್ತು ರೈತರ ಸಂಕೇತವಾದ ಹಸಿರು ಬಣ್ಣವು ಇಸ್ಲಾಮೀಕರಣಗೊಳ್ಳುತ್ತಿದೆ. ಮಾಡಬೇಕೆಂದೇ ಮಾಡುತ್ತಿರುವ ವಿವಾದವಿದು'' ಎಂದು ಟ್ವೀಟ್​ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: 'ಏನೇ ಆದರೂ ಸಕಾರಾತ್ಮಕವಾಗಿರುತ್ತೇನೆ' : ನಟ ಶಾರುಖ್ ಖಾನ್

ಬೇಷರಮ್ ರಂಗ್ ಹಾಡು ವಿವಾದಕ್ಕೀಡಾದ ಬೆನ್ನಲ್ಲೇ ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಖ್ ಖಾನ್​ ಪ್ರತಿಕ್ರಿಯೆ ನೀಡಿದ್ದಾರೆ. 'ಜಗತ್ತು ಏನೇ ಮಾಡಿದರೂ. ಏನೇ ಆದರೂ ನಮ್ಮಂತಹ ಜನರು ಸಕಾರಾತ್ಮಕವಾಗಿರುತ್ತಾರೆ' ಎಂದು ತಿರುಗೇಟು ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.