ETV Bharat / entertainment

ಮತದಾನದ ಬಗ್ಗೆ ಜಾಗೃತಿಗೆ ರೆಡಿಯಾದ ಕುಂಭರಾಶಿ ನಟ ಚೇತನ್​ ಚಂದ್ರ

ಟ್ರೈಲರ್ ನಿಂದಲೇ ಸ್ಯಾಂಡಲ್​ ವುಡ್​ನಲ್ಲಿ ಸೌಂಡ್ ಮಾಡುತ್ತಿರುವ 'ಪ್ರಭುತ್ವ' ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ.

Prabhutva movie
'ಪ್ರಭುತ್ವ' ಸಿನಿಮಾ
author img

By

Published : Apr 3, 2023, 10:36 PM IST

ಬೆಂಗಳೂರು : ಚುನಾವಣೆ ಹಾಗೂ ಮತದಾನದ ಬಗ್ಗೆ ಅರಿವು ಮೂಡಿಸುವ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬಂದಿವೆ. ಇದೀಗ ಟ್ರೈಲರ್ ಮೂಲಕ ಪ್ರಭುತ್ವ ಎಂಬ ಸಿನಿಮಾ ಒಂದಲ್ಲ ಒಂದು ವಿಚಾರಕ್ಕೆ ಕನ್ನಡ ಚಿತ್ರರಂಗದಲ್ಲಿ ಬೇಜಾನ್ ಸೌಂಡ್ ಮಾಡುತ್ತಿದೆ. ರಾಜಧಾನಿ, ಕುಂಭರಾಶಿ ಚಿತ್ರಗಳಿಂದಲೇ ಸ್ಯಾಂಡಲ್​ವುಡ್ ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟ ಚೇತನ್ ಚಂದ್ರ ಒಂದೊಳ್ಳೆ ಕಂಟೆಂಟ್ ಜೊತೆಗೆ ಬಹಳ ದಿನಗಳ ಬಳಿಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ರಾಜ್ಯ ಚುನಾವಣೆ ಸಮೀಪಿಸುತ್ತಿರುವ ಬೆನ್ನಲೇ ಮತದಾನದ ಮಹತ್ವ ಬಗ್ಗೆ ಸಾರುವ 'ಪ್ರಭುತ್ವ' ಎಂಬ ಸಿನಿಮಾ ಬೆಳ್ಳಿ ಪರದೆ ಮೇಲೆ ಬರಲು ರೆಡಿಯಾಗಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಕಥಾಹಂದರ ಹೊಂದಿರುವ ಪ್ರಭುತ್ವ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ಸೋಷಿಯಲ್ ಮೀಡಿಯಾದಲ್ಲಿ ಧೂಳ್​ ಎಬ್ಬಿಸುತ್ತಿದೆ. ಟ್ರೈಲರ್​ನಿಂದಲೇ ಗೆಲ್ಲುವ ಸುಳಿವು ನೀಡಿರುವ ಪ್ರಭುತ್ವ ಸಿನಿಮಾ ಇದೇ ತಿಂಗಳು ಬಿಡುಗಡೆ ಆಗೋದಕ್ಕೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಪ್ರಭುತ್ವ ಸಿನಿಮಾದ ತೆರೆ ಹಿಂದೆ ನಡೆದ ರೋಚಕ ಕ್ಷಣಗಳ ಮೇಕಿಂಗ್​ನ್ನು ಚಿತ್ರತಂಡ ಅನಾವರಣ ಮಾಡಲಾಗಿದೆ.

ಮೇಘಡಹಳ್ಳಿ ಡಾ.ಶಿವಕುಮಾರ್ ನಮ್ಮ ಸಮಾಜದಲ್ಲಿ ನಡೆಯುವ ನೈಜ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾಗೆ ಕಥೆ ಬರೆದಿದ್ದು, ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ತಾಲೂಕು ಕಚೇರಿ ಸೆಟ್, ಮಾರ್ಕೇಟ್ ಸೆಟ್​ಗಳನ್ನು ಹಾಕಿ ಈ ಸಿನಿಮಾವನ್ನು ಕಥೆಗಾರ ಶಿವಕುಮಾರ್ ಅಂಡ್ ಟೀಮ್ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರದಲ್ಲಿ ಚೇತನ್ ಚಂದ್ರ ಒಬ್ಬ ಸಾಮಾನ್ಯ ವ್ಯಕ್ತಿ ಆಗಿದ್ದು ಹೇಗೆ ರಾಜಕೀಯಕ್ಕೆ ಬರುತ್ತಾನೆ ಅನ್ನೋದು ಈ ಚಿತ್ರದ ಕಥೆಯಾಗಿದೆ.

ನಟ ಚೇತನ್ ಚಂದ್ರ ಈ ಸಿನಿಮಾಕ್ಕಾಗಿ ಸ್ವಲ್ಪ ಲುಕ್ ಬದಲಾವಣೆ ಮಾಡಿಕೊಂಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಬಹುಭಾಷೆ ನಟ ನಾಜರ್ ಅವರು ಊರ ಗೌಡನ ಪಾತ್ರ ಮಾಡಿದ್ದಾರೆ. ಇದರ ಜೊತೆಗೆ ಹಿರಿಯ ನಟ ಶರತ್ ಲೋಹಿತಾಶ್ವ, ಆದಿ ಲೋಕೇಶ್, ಅರವಿಂದ್ ರಾವ್, ಹರೀಶ್ ರಾಯ್, ವಿಜಯ್ ಚೆಂಡೂರ್, ವೀಣಾ ಸುಂದರ್, ರಾಜೇಶ್ ನಟರಂಗ, ಅನಿತಾ ಭಟ್ ಸೇರಿದಂತೆ ದೊಡ್ಡ ತಾರ ಬಳಗ ಈ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಚೇತನ್ ಚಂದ್ರ ಜೋಡಿಯಾಗಿ ಪಾವನ ಗೌಡ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಈ ಸಿನಿಮಾವನ್ನು ಕಂಪ್ಲೀಟ್ ಟ್ರೈಪಾಡ್ ಬಳಸದೇ ಜಿಮ್ಮಿ ಜಿಪ್ ಹಾಗೂ ಕ್ರೇನ್ ಮೂಲಕ ಇಡೀ ಚಿತ್ರವನ್ನು ಚಿತ್ರೀಕರಣ ಮಾಡಿರೋದು ಪ್ರಭುತ್ವ ಸಿನಿಮಾದ ಸ್ಪೆಷಾಲಿಟಿ.

ಪ್ರತಿಯೊಬ್ಬ ಪ್ರಜೆ ಈ ಚಿತ್ರವನ್ನು ನೋಡಬೇಕು. ದೇಶದಲ್ಲಿ ಮತದಾನ ಅಮೂಲ್ಯವಾದ್ದದ್ದು. ಹೀಗಾಗಿ ಮತವನ್ನು ಮಾರಾಟ ಮಾಡಿಕೊಳ್ಳಬಾರದು. ಈ ರೀತಿ ಮತದಾನದ ಮಹತ್ವ ಸಾರುವ ಚಿತ್ರವಾಗಿದೆ. ​ಈ ಚಿತ್ರಕ್ಕೆ ಎಮಿಲ್ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಅವರ ಸಂಕಲನವಿದ್ದು, ವಿನಯ್ ಈ ಸಿನಿಮಾಗೆ ಸಂಭಾಷಣೆ ಬರೆದಿದ್ದಾರೆ. ಮೇಘಾರಾಜ್ ಮೂವಿಸ್ ಬ್ಯಾನರ್ ಅಡಿ ರವಿರಾಜ್ ಎಸ್ ಕುಮಾರ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಟ್ರೈಲರ್ ನಿಂದಲೇ ಸ್ಯಾಂಡಲ್​ ವುಡ್​ನಲ್ಲಿ ಸೌಂಡ್ ಮಾಡುತ್ತಿರುವ ಪ್ರಭುತ್ವ ಸಿನಿಮಾ ನಟ ಚೇತನ್ ಚಂದ್ರಗೆ ಒಂದೊಳ್ಳೆ ಬ್ರೇಕ್ ಕೊಡುತ್ತೆ ಎಂಬ ಆತ್ಮವಿಶ್ವಾಸದಲ್ಲಿದ್ದು, ಎಲೆಕ್ಷನ್ ಗಿಂತ ಮುಂಚೆ ಪ್ರಭುತ್ವ ಪ್ರೇಕ್ಷಕರ ಮುಂದೆ ಬರಲಿದೆ.

ಇದನ್ನೂ ಓದಿ : ಮೂಲ ಮೈಸೂರು, 100ಕ್ಕೂ ಹೆಚ್ಚು ಸಿನಿಮಾಗಳಿಗೆ ನೃತ್ಯ ಸಂಯೋಜನೆ: ಪ್ರಭು ದೇವಗಿಂದು 50ನೇ ಜನ್ಮದಿನ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.