ETV Bharat / entertainment

ಜನವರಿ 29ರಂದು ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಅನಿರುದ್ಧ್​ ಭಾವುಕ ಮಾತು - ಅಭಿಮಾನಿ ಸ್ಟುಡಿಯೋ

ಅಭಿಮಾನಿಗಳೇ, ಈ ಸ್ಮಾರಕ ನಿಮಗಾಗಿ, ನಿಮಗೋಸ್ಕರ. ಮನಸ್ಸಿನಲ್ಲಿ ಯಾವುದೇ ಕಹಿ ಭಾವನೆಗಳನ್ನು ಇಟ್ಟುಕೊಳ್ಳದೇ ಬಂದು ನಮನ, ಶ್ರದ್ಧಾಂಜಲಿ ಸಲ್ಲಿಸಿ ಎಂದು ನಟ ಅನಿರುದ್ಧ್ ಅವರು ವಿಷ್ಣು ಸ್ಮಾರಕ ಲೋಕಾರ್ಪಣೆಗೆ ಆಹ್ವಾನ ನೀಡಿದ್ದಾರೆ.

vishnuvardhan
ವಿಷ್ಣುವರ್ಧನ್
author img

By

Published : Jan 15, 2023, 8:01 AM IST

13 ವರ್ಷಗಳ ಬಳಿಕ‌ ಖ್ಯಾತ ನಟ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಿದ್ದು ಉದ್ಘಾಟನೆಗೆ ಸಿದ್ಧವಾಗಿದೆ.‌ ಜನವರಿ 29ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕವನ್ನು ಉದ್ಘಾಟನೆ ಮಾಡಲಿದ್ದಾರೆ. ಇದಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. ಮೈಸೂರು ನಗರದ ಹೊರವಲಯದ ಹೆಚ್‌.ಡಿ.ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ 5.5 ಎಕರೆ ಪ್ರದೇಶದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಲೋಕಾರ್ಪಣೆ ಕಾರ್ಯಕ್ರಮಕ್ಕೆ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವಂತೆ ನಟ ಅನಿರುದ್ಧ್​ ಮುಕ್ತ ಆಹ್ವಾನ ನೀಡಿದ್ದಾರೆ.

ವಿಷ್ಣು ಅಭಿಮಾನಿಗಳ ಅಸಮಾಧಾನವೇನು?: ಅಭಿಮಾನಿ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಗಿತ್ತು. ಹಾಗಾಗಿ, ಅಲ್ಲಿಯೇ ಸ್ಮಾರಕ ನಿರ್ಮಾಣ ಮಾಡಬೇಕಿತ್ತು. ಆದರೆ, ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಅಭಿಮಾನಿ ಸ್ಟುಡಿಯೋದ ಮಾಲೀಕರಾದ ನಟ‌‌ ಬಾಲಕೃಷ್ಣ ಅವರ ಕುಟುಂಬ ಒಪ್ಪಿಗೆ ನೀಡಿರಲಿಲ್ಲ. ಈ‌ ಗಲಾಟೆಯಿಂದ ಬೇಸತ್ತು ಪತ್ನಿ ಭಾರತಿ ಅವರು ವಿಷ್ಣುವರ್ಧನ್ ಆಸೆಯಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿರುವುದು ಕೆಲ‌ವು ವಿಷ್ಣು ಅಭಿಮಾನಿಗಳಲ್ಲಿ ಅಸಮಾಧಾನ ಮೂಡಿಸಿದೆ. ಈ ವಿಚಾರವಾಗಿ ಅನಿರುದ್ಧ್​ ಸೋಷಿಯಲ್ ‌ಮೀಡಿಯಾದಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

ಅನಿರುದ್ಧ್‌ ಮನವಿ:'ಅಭಿಮಾನಿ ಸ್ಟುಡಿಯೋದಲ್ಲಿ ಅಭಿಮಾನಿಗಳು ಪೂಜೆ ಮಾಡಿಕೊಂಡು ಬರಲಿ. ನಮ್ಮ ಅಭ್ಯಂತರ ಇರಲಿಲ್ಲ, ಇರುವುದೂ ಇಲ್ಲ. ಒಂದು ವೇಳೆ ನಮ್ಮ ಅಭ್ಯಂತರ ಇದ್ದಿದ್ದಿರೆ ಇಷ್ಟು ವರ್ಷ ಪೂಜೆ ಮಾಡಿಕೊಂಡು ಬರಲು ಅವಕಾಶವೇ ಸಿಗುತ್ತಿರಲಿಲ್ಲ. ನಮ್ಮ ತೊಂದರೆ ಇಲ್ಲ ಅಂದ್ಮೇಲೆ ನಮ್ಮ ಅನುಮತಿ ಯಾಕೆ?, ಅನುಮತಿ ಕೊಡಬೇಕಾಗಿರುವುದು ಬಾಲಣ್ಣರವರ ಮಕ್ಕಳು. ಅಭಿಮಾನಿಗಳೇ, ಅವರ ಅನುಮತಿ ಪಡೆದುಕೊಳ್ಳಿ, ನೆನಪಿಡಿ ಅದು ಅವರ ಜಾಗ, ಎಲ್ಲಾ ಸಮಸ್ಯೆಗಳು ಬಗೆಹರಿಯತ್ತವೆ. ಹಾಗೆಯೇ ನಾವು ಯಾವತ್ತೂ ಕೂಡ ಅದು ತೆರವು ಆಗೋದಕ್ಕೆ ಬಯಸಲಿಲ್ಲ, ಬಯಸುವುದೂ ಇಲ್ಲ' ಎಂದಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಬಟನ್​​​ನಲ್ಲಿ ವಿಷ್ಣುವರ್ಧನ್ ಭಾವಚಿತ್ರ ಬಿಡಿಸಿದ ಕಲಾವಿದ

'ಬಾಲಣ್ಣರವರ ಕುಟುಂಬದವರ ಅಪೇಕ್ಷೆ ಈಗ ಏನು?, 10 ಗುಂಟೆ ಅವತ್ತು ಯಾಕೆ ಕೊಡಲಿಲ್ಲ?, ಆರೂವರೆ ವರ್ಷಗಳು ಕೇಳಿ, ಕೇಳಿ, ಎಷ್ಟೇ, ಹೇಗೆಯೇ ಪ್ರಯತ್ನಪಟ್ಟರೂ ಆಗ ಅವರು ಮನಸ್ಸು ಮಾಡಲಿಲ್ಲ, ಅಪ್ಪಾವರನ್ನು, ಅಮ್ಮಾವರನ್ನು ಅವಮಾನ ಮಾಡಿದ್ದಾರೆ. ಕೊನೆಗೆ ಸರ್ಕಾರನೇ ಬೇರೆ ಕಡೆ ಮಾಡಿ ಅಂತ ಹೇಳಿದ ಮೇಲೆ ನಾವು ನಿರ್ಧಾರ ತೆಗೆದುಕೊಳ್ಳಬೇಕಾಯಿತು. ತುಂಬಾ ನೊಂದುಕೊಂಡಿದ್ದೇವೆ, ಸಾಕಷ್ಟು ಸಂಘರ್ಷಗಳನ್ನು ಎದುರಿಸಿದ್ದೇವೆ, ಹೋರಾಡಿದ್ದೇವೆ ನಮ್ಮ ಪ್ರಯತ್ನಗಳ ಬಗ್ಗೆ, ಶ್ರಮ, ಶ್ರದ್ಧೆ, ಪ್ರೀತಿ, ಕಾಳಜಿ ಬಗ್ಗೆ ದಯಮಾಡಿ ಪ್ರಶ್ನೆಗಳನ್ನು ಎತ್ತಬೇಡಿ. ಸರ್ಕಾರ ಈಗಾಗಲೇ ಮೈಸೂರಲ್ಲಿ ಸ್ಮಾರಕ ನಿರ್ಮಾಣ ಮಾಡಿದೆ. ಅಲ್ಲಿ ಅಪ್ಪಾವರ ಅಸ್ಥಿಯನ್ನು ಪೂಜಾವಿಧಿಯಿಂದ ಇಟ್ಟು ಅದರ ಮೇಲೆ ಪ್ರತಿಮೆಯನ್ನು ಸ್ಥಾಪಿಸಿದ್ದೇವೆ. ಇದೇ ತಿಂಗಳು 29 ಕ್ಕೆ ಭಾನುವಾರ ಲೋಕಾರ್ಪಣೆ ಆಗಲಿದೆ. ನಾವೂ ಅಲ್ಲಿ ಅತ್ಯಂತ ಶ್ರದ್ಧೆಯಿಂದ ನಮ್ಮ ನಮನಗಳನ್ನು ಸಲ್ಲಿಸುತ್ತೇವೆ' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಷ್ಣುವರ್ಧನ್, ಭಾರತಿ 6 ತಿಂಗಳು ಬರೀ ಗಂಜಿ ಕುಡಿದು ಜೀವನ ಸಾಗಿಸಿದ್ದರು: ಅಳಿಯ ಅನಿರುದ್ಧ್

ಅಭಿಮಾನಿಗಳೇ, ಈ ಸ್ಮಾರಕ ನಿಮಗಾಗಿ, ನಿಮಗೋಸ್ಕರ. ಯಾವುದೇ ಕಹಿ ಭಾವನೆಗಳನ್ನು ಇಟ್ಟುಕೊಳ್ಳದೇ ಬಂದು ಸಂಭ್ರಮಿಸಿ. ಅಪ್ಪಾವರಗೆ ತಮ್ಮ ನಮನ, ಶ್ರದ್ಧಾಂಜಲಿಯನ್ನು ಸಲ್ಲಿಸಿ ಎಂದು ಅನಿರುದ್ಧ್​ ಅಸಮಾಧಾನಗೊಂಡಿರುವ ಅಭಿಮಾನಿಗಳಿಗೆ ಮನಮುಟ್ಟುವಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.