ಬೆಂಗಳೂರು: ಕನ್ನಡದ ಹೆಸರಾಂತ ನಟ, ಮಾಜಿ ಸಚಿವ ಅನಂತ್ ನಾಗ್ ಅವರು ಇಂದು ಸಂಜೆ ಬಿಜೆಪಿ ಸೇರಲಿದ್ದಾರೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ನಟ ಅನಂತ್ ನಾಗ್ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು ಯಶಸ್ವಿಯಾಗಿದ್ದು, ಇಂದು ಸಂಜೆ 4.30ಕ್ಕೆ ಪಕ್ಷದ ಕಚೇರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ಸ್ಯಾಂಡಲ್ವುಡನ್ ಎವರಗ್ರೀನ್ ನಟರಾದ ಅನಂತ್ ನಾಗ್ ಅವರು ಈ ಹಿಂದೆ ರಾಜ್ಯದಲ್ಲಿ ಜನತಾ ದಳ ಸರ್ಕಾರದ ಆಡಳಿತದಲ್ಲಿದ್ದಾಗ, ಮಾಜಿ ಮುಖ್ಯಮಂತ್ರಿ ಜೆ.ಹೆಚ್ ಪಟೇಲ್ ಅವರ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಚುನಾವಣೆಯಲ್ಲಿನ ಸೋಲಿನ ಕಹಿ ಅನುಭವದಿಂದ ಅನಂತ್ ನಾಗ್ ತಟಸ್ಥವಾಗಿದ್ದು, ರಾಜಕೀಯ ಚಟುವಟಿಕೆಗಳಿಂದ ಅಂತರ ಕಾಪಾಡಿಕೊಂಡಿದ್ದರು. ಸದ್ಯ ಬಿಜೆಪಿ ಸೇರುವ ಮೂಲಕ ಅನಂತ್ ನಾಗ್ ಅವರು ತಮ್ಮ ರಾಜಕೀಯ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.
ಇದನ್ನೂ ಓದಿ: 'ನನಗಾಗಿ ಪದ್ಮ ಪ್ರಶಸ್ತಿ ಕೊಡಿಸುವ ಅಭಿಯಾನ ಆರಂಭಿಸಬೇಡಿ': ನಟ ಅನಂತ್ ನಾಗ್